
ಚೆನ್ನೈ: ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 14ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಮಿಂಚಿದ ಎಸ್ಆರ್ಎಚ್ ಈ ಮೂಲಕ ಸರಣಿಯ ಮೊದಲ ಗೆಲುವು ಕಂಡಿದೆ. ಸನ್ರೈಸರ್ಸ್ ಪರ ನಾಯಕ ಡೇವಿಡ್ ವಾರ್ನರ್ 37(37), ಬೇರ್ಸ್ಟೋ 63 (56) ಹಾಗೂ ಕೇನ್ ವಿಲಿಯಮ್ಸನ್ 16 (19) ರನ್ ದಾಖಲಿಸಿ ತಂಡ ಗೆಲ್ಲಿಸಿದ್ದಾರೆ. ಪಂಜಾಬ್ ನೀಡಿದ್ದ 121 ರನ್ ಟಾರ್ಗೆಟ್ನ್ನು ಕೇವಲ 1 ವಿಕೆಟ್ ಕಳೆದುಕೊಂಡು ಪೂರೈಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಸನ್ರೈಸರ್ಸ್ ಹೈದರಾಬಾದ್ಗೆ 121 ರನ್ಗಳ ಟಾರ್ಗೆಟ್ ನೀಡಿತ್ತು. 19.4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 120 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಸನ್ರೈಸರ್ಸ್ ಹೈದರಾಬಾದ್ ಬೌಲರ್ಸ್ ದಾಳಿಗೆ ಪಂಜಾಬ್ ಕಿಂಗ್ಸ್ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿ, ವಿಕೆಟ್ ಒಪ್ಪಿಸಿದ್ದರು.
ಹೈದರಾಬಾದ್ ಪರ ಖಲೀಲ್ ಅಹ್ಮದ್ 4 ಓವರ್ಗೆ 21 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅಭಿಷೇಕ್ ಶರ್ಮಾ 4 ಓವರ್ಗೆ 24 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದಿದ್ದರು. ಸನ್ರೈಸರ್ಸ್ ಪರ ಮಯಾಂಕ್ ಅಗರ್ವಾಲ್ ಹಾಗೂ ಶಾರುಖ್ ಖಾನ್ 22 ರನ್ ಗಳಿಸಿದ್ದು ಹೊರತಾಗಿ ಉಳಿದ ಆಟಗಾರರು 10-15 ರನ್ ದಾಟಲೂ ಪರದಾಡಿದ್ದರು.
ಸನ್ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. 18.4 ಓವರ್ಗೆ 121 ರನ್ ಗುರಿ ತಲುಪುವ ಮೂಲಕ ಸರಣಿಯ ಮೊದಲ ಗೆಲುವನ್ನು ಸನ್ರೈಸರ್ಸ್ ತಂಡ ಕಾಣುವಂತಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಸನ್ರೈಸರ್ಸ್, ಪಂಜಾಬ್ ತಂಡಕ್ಕೆ ಮತ್ತೆ ಸೋಲುಣಿಸಿದೆ.
ಸನ್ರೈಸರ್ಸ್ ಹೈದರಾಬಾದ್ ಪರ ಉತ್ತಮ ಆಟವಾಡಿದ ಬೇರ್ಸ್ಟೋ ಅರ್ಧಶತಕ ಪೂರೈಸಿದ್ದಾರೆ. 49 ಬಾಲ್ಗೆ 2 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 51 ರನ್ ಗಳಿಸಿದ್ದಾರೆ. ಸನ್ರೈಸರ್ಸ್ ತಂಡದ ಮೊತ್ತ 18 ಓವರ್ನ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 111 ಆಗಿದೆ. ಗೆಲ್ಲಲು 12 ಬಾಲ್ಗೆ 10 ರನ್ ಬೇಕಿದೆ.
16 ಓವರ್ಗಳ ಅಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡು ಸನ್ರೈಸರ್ಸ್ ಹೈದರಾಬಾದ್ ತಂಡ 100 ರನ್ ಗಡಿ ದಾಟಿದೆ. ತಂಡ ಗೆಲ್ಲಲು ಇನ್ನು 24 ಬಾಲ್ಗೆ 21 ರನ್ ಬೇಕಿದೆ. ತಂಡದ ಪರ ವಿಲಿಯಮ್ಸನ್ ಹಾಗೂ ಬೇರ್ಸ್ಟೋ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಗೆಲ್ಲಲು 36 ಬಾಲ್ಗಳು ಉಳಿದಿರುವಂತೆ 30 ರನ್ ಬೇಕಾಗಿದೆ. ತಂಡ 14 ಓವರ್ಗೆ 1 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿದೆ. ವಿಲಿಯಮ್ಸನ್ ಈ ಬಾರಿಯ ಟೂರ್ನಿಯ ಮೊದಲ ಪಂದ್ಯವನ್ನಾಡುತ್ತಿದ್ದು, 9 ಬಾಲ್ಗೆ 9 ರನ್ ಗಳಿಸಿದ್ದಾರೆ. ಬೇರ್ಸ್ಟೋ 39 ಬಾಲ್ಗೆ 42 ರನ್ ಕಲೆಹಾಕಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 42 ಬಾಲ್ಗೆ 34 ರನ್ ಬೇಕಾಗಿದೆ. ಹೈದರಾಬಾದ್ ಮೊತ್ತ 13 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 87 ರನ್ ದಾಖಲಿಸಿದೆ.
11 ಓವರ್ಗಳ ಅಂತ್ಯಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡ 1 ವಿಕೆಟ್ ಕಳೆದುಕೊಂಡು 73 ರನ್ ದಾಖಲಿಸಿದೆ. ಸನ್ರೈಸರ್ಸ್ ಗೆಲ್ಲಲು 54 ಬಾಲ್ಗೆ 48 ರನ್ ಬೇಕಿದೆ.
37 ಬಾಲ್ಗೆ 37 ರನ್ ಗಳಿಸಿ ಸನ್ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಔಟ್ ಆಗಿದ್ದಾರೆ. ಈ ಮೂಲಕ ಎಸ್ಆರ್ಎಚ್ ಮೊದಲ ವಿಕೆಟ್ ಪತನವಾಗಿದೆ.
ಸನ್ರೈಸರ್ಸ್ ಹೈದರಾಬಾದ್ ಪರ ಅದ್ಭುತ ಆಟವಾಡುತ್ತಿರುವ ಆರಂಭಿಕ ಜೋಡಿ 10 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 73 ರನ್ ದಾಖಲಿಸಿದೆ. ಹೂಡಾ ಬೌಲಿಂಗ್ ಮಾಡಿದ ಕೊನೆಯ ಓವರ್ನಲ್ಲಿ ವಾರ್ನರ್ ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಹೈದರಾಬಾದ್ ರನ್ ವೇಗ ಹೆಚ್ಚಿಕೊಂಡಿದೆ. ವಾರ್ನರ್ 37 (36) ಮತ್ತು ಬೇರ್ಸ್ಟೋ 32 (24) ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡ ಗೆಲ್ಲಲು 60 ಬಾಲ್ಗೆ 48 ರನ್ ಬೇಕಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ 8 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದೆ. ಬೇರ್ಸ್ಟೋ 28 (21) ಹಾಗೂ ಡೇವಿಡ್ ವಾರ್ನರ್ 26 (27) ಮೊತ್ತ ದಾಖಲಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡ 6 ಓವರ್ಗಳ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 50 ರನ್ ಗಳಿಸಿದೆ. ಈ ಮೂಲಕ ತಂಡ ಗೆಲ್ಲಲು 84 ಬಾಲ್ಗೆ 71 ರನ್ ಬೇಕಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 90 ಬಾಲ್ಗೆ 81 ರನ್ ಬೇಕಾಗಿದೆ. ಪಂಜಾಬ್ ಬೌಲರ್ಗಳನ್ನು ಹೈದರಾಬಾದ್ ಆರಂಭಿಕ ಬ್ಯಾಟ್ಸ್ಮನ್ಗಳು ದಂಡಿಸುತ್ತಿದ್ದಾರೆ. ಪಂಜಾಬ್ ಪರ ಯಾವುದೇ ವಿಕೆಟ್ ಬೀಳದಿರುವುದು ಸನ್ರೈಸರ್ಸ್ ರನ್ ವೇಗ ಉಳಿಸಿಕೊಳ್ಳಲು ಸಹಾಯ ಮಾಡಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ 4 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 33 ರನ್ ದಾಖಲಿಸಿದೆ. ಹೈದರಾಬಾದ್ ಪರ ವಾರ್ನರ್ 13 (12) ಹಾಗೂ ಬೇರ್ಸ್ಟೋ 26 (15) ಆಟವಾಡುತ್ತಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಪರ ಜಾನಿ ಬೇರ್ಸ್ಟೋ ವೇಗದ ಆಟ ಆಡುತ್ತಿದ್ದಾರೆ. 9 ಬಾಲ್ಗೆ 1 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 16 ರನ್ ಗಳಿಸಿದ್ದಾರೆ. ಡೇವಿಡ್ ವಾರ್ನರ್ 9 ಬಾಲ್ಗೆ 10 ರನ್ ಬಾರಿಸಿದ್ದಾರೆ. ಸನ್ರೈಸರ್ಸ್ ಮೊತ್ತ 3 ಓವರ್ ಅಂತ್ಯಕ್ಕೆ 27 ರನ್ ಗಳಿಸಿದೆ.
ಮೊದಲ ಓವರ್ನ ಅಂತ್ಯಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ. ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ಸ್ಟೋ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊಹಮ್ಮದ್ ಶಮಿ ಮೊದಲ ಓವರ್ ಬೌಲಿಂಗ್ ಮಾಡಿ್ದ್ದಾರೆ.
ಪಂಜಾಬ್ ಕಿಂಗ್ಸ್ ತಂಡ 19.4 ಓವರ್ಗೆ 120 ರನ್ ಗಳಿಸಿ ಆಲ್ ಔಟ್ ಆಗಿದೆ. ಶಮಿ ಕೊನೆಯ ಓವರ್ನಲ್ಲಿ ಅವಸರದ ಓಟಕ್ಕೆ ಮುಂದಾಗಿ ರನ್ ಔಟ್ ಆಗಿದ್ದಾರೆ. ಈ ಮೂಲಕ ಪಂಜಾಬ್, ಸನ್ರೈಸರ್ಸ್ ಹೈದರಾಬಾದ್ಗೆ ಗೆಲ್ಲಲು 121 ರನ್ ಗಳ ಟಾರ್ಗೆಟ್ ನೀಡಿದೆ.
10 ಬಾಲ್ಗೆ 9 ರನ್ ಗಳಿಸಿ ಮುರುಗನ್ ಅಶ್ವಿನ್ ಔಟ್ ಆಗಿದ್ದಾರೆ. ಸಿದ್ಧಾರ್ಥ್ ಕೌಲ್ ಬೌಲಿಂಗ್ಗೆ ಕೀಪರ್ ಬೇರ್ಸ್ಟೋಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಪಂಜಾಬ್ ಕಿಂಗ್ಸ್ 19.1 ಓವರ್ಗೆ 114/9 ರನ್ ಗಳಿಸಿದೆ.
ಪಂಜಾಬ್ ಕಿಂಗ್ಸ್ ತಂಡದ ಮೊತ್ತ 100 ರನ್ ಗಡಿ ದಾಟುವಲ್ಲಿ ಸಹಕಾರಿಯಾಗಿದ್ದ ಆಟಗಾರ ಶಾರುಖ್ ಖಾನ್ 17 ಬಾಲ್ಗೆ 22 ರನ್ ಗಳಿಸಿ ಔಟ್ ಆಗಿದ್ದಾರೆ. ಖಲೀಲ್ ಅಹ್ಮದ್ ಬಾಲ್ಗೆ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮೊಹಮ್ಮದ್ ಶಮಿ ಮತ್ತು ಮುರುಗನ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
18 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 110 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ಶಾರುಖ್ ಖಾನ್ ಹಾಗೂ ಮುರುಗನ್ ಅಶ್ವಿನ್ ಆಟವಾಡುತ್ತಿದ್ದಾರೆ.
ವಾರ್ನರ್ ಹಿಡಿದ ಉತ್ತಮ ಕ್ಯಾಚ್ಗೆ ಫಬಿಯನ್ ಅಲೆನ್ 11 ಬಾಲ್ಗೆ 6 ರನ್ ಗಳಿಸಿ ಔಟ್ ಆಗಿದ್ದಾರೆ. ಖಲೀಲ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ ಕಿಂಗ್ಸ್ 16.4 ಓವರ್ಗೆ 101 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ.
ಪಂಜಾಬ್ ಕಿಂಗ್ಸ್ ತಂಡ 16 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 98 ರನ್ ದಾಖಲಿಸಿದೆ. ಶಾರುಖ್ ಹಾಗೂ ಫಬಿಯನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು 4 ಓವರ್ಗಳು ಬಾಕಿ ಉಳಿದಿದ್ದು, ದೊಡ್ಡ ಮೊತ್ತ ಪೇರಿಸುವ ಸಾಧ್ಯತೆ ಕಂಡುಬರುತ್ತಿಲ್ಲ.
ಐಪಿಎಲ್ 2021 ಟೂರ್ನಿಯ ಮೊದಲ ಪಂದ್ಯ ಆಡುತ್ತಿರುವ ಹೆನ್ರಿಕ್ವೆಸ್ 17 ಬಾಲ್ಗೆ 14 ರನ್ ಗಳಿಸಿ ಅಭಿಷೇಕ್ ಶರ್ಮಾ ಬಾಲ್ಗೆ ಸ್ಟಂಪ್ ಔಟ್ ಆಗಿದ್ದಾರೆ. ಪಂಜಾಬ್ ತಂಡ 14 ಓವರ್ಗಳ ಅಂತ್ಯಕ್ಕೆ 84 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. ಶಾರುಖ್ ಖಾನ್ ಮತ್ತು ಫಬಿಯನ್ ಅಲೆನ್ ಬ್ಯಾಟಿಂಗ್ಗೆ ಇಳಿದಿದ್ದಾರೆ.
13 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದೆ. ಹೆನ್ರಿಕ್ವೆಸ್ 14 (16) ಹಾಗೂ ಶಾರುಖ್ ಖಾನ್ 2 (3) ಬ್ಯಾಟಿಂಗ್ ಮಾಡುತ್ತಿದ್ದಾರೆ.
ಪಂಜಾಬ್ ಕಿಂಗ್ಸ್ ದಾಂಡಿಗ ದೀಪಕ್ ಹೂಡಾ 11 ಬಾಲ್ಗೆ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಭಿಷೇಕ್ ಶರ್ಮಾ ಬಾಲ್ಗೆ ಎಲ್ಬಿಡಬ್ಲ್ಯು ಆಗಿದ್ದಾರೆ. ಹೆನ್ರಿಕ್ವೆಸ್ ಹಾಗೂ ಶಾರುಖ್ ಖಾನ್ ಬ್ಯಾಟಿಂಗ್ ಮಾಡುತ್ತಿದ್ದು, ಪಂಜಾಬ್ ಮೊತ್ತ 12 ಓವರ್ಗೆ 66/5 ಆಗಿದೆ.
ಪ್ರಮುಖ ವಿಕೆಟ್ ಕಳೆದುಕೊಂಡಿರುವ ಪಂಜಾಬ್ ಕಿಂಗ್ಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. 11 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡಿರುವ ಪಂಜಾಬ್ ಕೇವಲ 60 ರನ್ ಗಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ 9 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿದೆ. ಸನ್ರೈಸರ್ಸ್ ಬೌಲರ್ಗಳ ದಾಳಿಗೆ ಬ್ಯಾಟ್ಸ್ಮನ್ಗಳು ಬೇಗನೇ ವಿಕೆಟ್ ಕಳೆದುಕೊಂಡಿದ್ದಾರೆ.
ರಶೀದ್ ಖಾನ್ ಬಾಲ್ಗೆ ಕ್ರಿಸ್ ಗೈಲ್ ವಿಕೆಟ್ ಒಪ್ಪಿಸಿದ್ದಾರೆ. 17 ಬಾಲ್ಗೆ 15 ರನ್ ಗಳಿಸಿ ಗೈಲ್ ನಿರ್ಗಮಿಸಿದ್ದಾರೆ. ಪಂಜಾಬ್ ಕಿಂಗ್ಸ್ ಅಗ್ರ ಕ್ರಮಾಂಕ ಕುಸಿದ ಕಾರಣ, ಮಧ್ಯಮ ಕ್ರಮಾಂಕದಲ್ಲಿ ಗೈಲ್ ಆಡುವ ನಿರೀಕ್ಷೆ ಇತ್ತು. ಐಪಿಎಲ್ ಮಾದರಿಯಲ್ಲಿ ಬಾಸ್ ಎಂದು ಗುರುತಿಸಿಕೊಳ್ಳುವ ಗೈಲ್ ಹೊಡಿಬಡಿ ಆಟ ಇಂದು ನೋಡಬಹುದು ಎಂಬ ನಿರೀಕ್ಷೆ ಇತ್ತು. ಅದು ಸುಳ್ಳಾಗಿದೆ. ಗೈಲ್ ಔಟಾಗಿದ್ದು, ಈಗ ದೀಪಕ್ ಹೂಡಾ ಹಾಗೂ ಮೊಯಿಸಸ್ ಹೆನ್ರಿಕ್ವೆಸ್ ಕ್ರೀಸ್ನಲ್ಲಿದ್ದಾರೆ.
8 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 45 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. ಕ್ರಸ್ ಗೈಲ್ 14 ಬಾಲ್ಗೆ 14 ಹಾಗೂ ದೀಪಕ್ ಹೂಡಾ 3 ಬಾಲ್ಗೆ 5 ರನ್ ಗಳಿಸಿ ಕಣದಲ್ಲಿದ್ದಾರೆ.
ಮಯಾಂಕ್ ಬಳಿಕ ಬ್ಯಾಟಿಂಗ್ಗೆ ಆಗಮಿಸಿದ ನಿಕೊಲಸ್ ಪೂರನ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಅವಸರದ ಓಟಕ್ಕೆ ಡೇವಿಡ್ ವಾರ್ನರ್ಗೆ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ ಕಿಂಗ್ಸ್ 7.2 ಓವರ್ಗೆ 3 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ. ಗೈಲ್ ಮತ್ತು ಹೂಡಾ ಕ್ರೀಸ್ನಲ್ಲಿದ್ದಾರೆ.
25 ಬಾಲ್ಗೆ 22 ರನ್ ಗಳಿಸಿ ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದ್ದಾರೆ. ಖಲೀಲ್ ಅಹ್ಮದ್ ಬೌಲಿಂಗ್ಗೆ ರಶೀದ್ ಖಾನ್ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 7 ಓವರ್ ಅಂತ್ಯಕ್ಕೆ 39 ರನ್ ಗಳಿಸಿ 2 ವಿಕೆಟ್ ಪಡೆದಿದ್ದಾರೆ.
6 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 32 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಗರ್ವಾಲ್ 23 ಬಾಲ್ಗೆ 21 ಹಾಗೂ ಕ್ರಿಸ್ ಗೈಲ್ 7 ಬಾಲ್ಗೆ 7 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸನ್ರೈಸರ್ಸ್ ಪರ ಅಭಿಷೇಕ್ ಶರ್ಮಾ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ಸಿದ್ಧಾರ್ಥ್ ಕೌಲ್ ಉತ್ತಮ ಬೌಲಿಂಗ್ ಮಾಡಿ, ರನ್ ಗಳಿಕೆ ನಿಯಂತ್ರಣದಲ್ಲಿ ಇರಿಸಿದ್ದಾರೆ.
ಭುವನೇಶ್ವರ್ ಕುಮಾರ್ ಬೌಲಿಂಗ್ಗೆ, 6 ಬಾಲ್ಗೆ 4 ರನ್ ಗಳಿಸಿದ್ದ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿದ್ದಾರೆ. ಕೇದಾರ್ ಜಾಧವ್ ಕ್ಯಾಚ್ ಪಡೆದಿದ್ದಾರೆ. ಈ ಮೂಲಕ ಪಂಜಾಬ್ನ ಮೊದಲ ವಿಕೆಟ್ ಪತನವಾಗಿದ್ದು, 3.1 ಓವರ್ಗೆ 15 ರನ್ ಗಳಿಸಿದೆ.
3 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ಮೊತ್ತ ವಿಕೆಟ್ ನಷ್ಟವಿಲ್ಲದೆ 15 ರನ್ ಆಗಿದೆ. ರಾಹುಲ್ 4(5) ಹಾಗೂ ಮಯಾಂಕ್ 11(13) ಆಟವಾಡುತ್ತಿದ್ದಾರೆ.
ಮೂರನೇ ಓವರ್ನ ಖಲೀಲ್ ಬೌಲಿಂಗ್ಗೆ ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಬೌಂಡರಿ ಬಾರಿಸಿದ್ದಾರೆ. ಈ ಮೂಲಕ ತಂಡದ ಪಂಜಾಬ್ ಕಿಂಗ್ಸ್ ಮೊತ್ತ 2.2 ಓವರ್ಗೆ ವಿಕೆಟ್ ಕಳೆದುಕೊಳ್ಳದೆ 13 ರನ್ ಆಗಿದೆ.
1 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಕಣಕ್ಕಿಳಿದಿದ್ದಾರೆ. ಮೊದಲ ಓವರ್ನ್ನು ಅಭಿಷೇಕ್ ಶರ್ಮಾ ಬೌಲಿಂಗ್ ಮಾಡಿದ್ದಾರೆ.
ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಕೇದಾರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್
ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮುಖ್ಯವಾದ ಬದಲಾವಣೆ ಮಾಡಿಕೊಳ್ಳಲಾಗಿದೆ. ಕೇನ್ ವಲಿಯಮ್ಸನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕೆ.ಎಲ್. ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೈಲ್, ಮೊಯಿಸಸ್ ಹೆನ್ರಿಕ್ಸ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಫ್ಯಾಬಿಯನ್ ಅಲೆನ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಅರ್ಷ್ದೀಪ್ ಸಿಂಗ್
ಪಂಜಾಬ್ ಕಿಂಗ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಸನ್ರೈಸರ್ಸ್ ಹೈದರಾಬಾದ್ ಬೌಲಿಂಗ್ ಮಾಡಲಿದೆ.
ಐಪಿಎಲ್ ಟೂರ್ನಿಯ ಪಂಜಾಬ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ 5 ಹಾಗೂ ಸನ್ರೈಸರ್ಸ್ ಹೈದರಾಬಾದ್ 11 ಪಂದ್ಯಗಳನ್ನು ಗೆದ್ದಿದು.
Published On - 6:55 pm, Wed, 21 April 21