CWG 2022: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳೊಂದಿಗೆ ಜು.20 ರಂದು ಪ್ರಧಾನಿ ಮೋದಿ ಸಂವಾದ

| Updated By: Digi Tech Desk

Updated on: Jul 21, 2022 | 5:25 PM

Narendra Modi: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 20, 2022 ರಂದು ಬೆಳಿಗ್ಗೆ 10 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಮನ್‌ವೆಲ್ತ್ ಗೇಮ್ಸ್ 2022 ಕ್ಕೆ ಹೊರಟಿರುವ ಭಾರತೀಯ ತಂಡದೊಂದಿಗೆ ಸಂವಾದ ನಡೆಸಲಿದ್ದಾರೆ.

CWG 2022: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳೊಂದಿಗೆ ಜು.20 ರಂದು ಪ್ರಧಾನಿ ಮೋದಿ ಸಂವಾದ
Follow us on

ಮತ್ತೊಮ್ಮೆ, ಕಾಮನ್‌ವೆಲ್ತ್ ಗೇಮ್ಸ್‌ (Commonwealth Games)ನಲ್ಲಿ ಭಾರತೀಯ ಆಟಗಾರರು ತಮ್ಮ ಪ್ರಾಬಲ್ಯವನ್ನು ತೋರಿಸಲು ಸಿದ್ಧರಾಗಿದ್ದಾರೆ. ಇಂಗ್ಲೆಂಡ್​ನ ಬರ್ಮಿಂಗ್ ಹ್ಯಾಮ್​ನಲ್ಲಿ ಜುಲೈ 28ರಿಂದ ನಡೆಯಲಿರುವ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಈ ಬಾರಿ ಭಾರತದ ಪರ ಹಲವು ಆಟಗಾರರು ಪದಕ್ಕಾಗಿ ಸೆಣಸಾಟ ನೆಡೆಸಲಿದ್ದಾರೆ. ಹೀಗಾಗಿ ಆಟಗಾರರ ಮನಸ್ಥೈರ್ಯ ಹೆಚ್ಚಿಸಲು ದೇಶದ ಪ್ರಧಾನಮಂತ್ರಿ (Prime Minister) ಮುಂದಾಗಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ (Narendra Modi) ಅವರು ಜುಲೈ 20, 2022 ರಂದು ಬೆಳಿಗ್ಗೆ 10 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಮನ್‌ವೆಲ್ತ್ ಗೇಮ್ಸ್ 2022 ಕ್ಕೆ ಹೊರಟಿರುವ ಭಾರತೀಯ ತಂಡದೊಂದಿಗೆ ಸಂವಾದ ನಡೆಸಲಿದ್ದಾರೆ. ಸಂವಾದದಲ್ಲಿ ಇಬ್ಬರು ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರು ಭಾಗವಹಿಸಲಿದ್ದಾರೆ.

ಈ ಆಟಗಾರರ ಪೈಕಿ ಜ್ಯುವೆಲಿನ್ ಥ್ರೋವರ್ ನೀರಜ್ ಚೋಪ್ರಾ, ಕುಸ್ತಿಪಟು ಬಜರಂಗ್ ಪೂನಿಯಾ, ಬಾಕ್ಸರ್ ನಿಖತ್ ಜರೀನ್ (Neeraj Chopra , Wrestler Bajrang Poonia, Boxer Nikhat Zareen) ಅವರಂತಹ ಸ್ಟಾರ್ ಆಟಗಾರರನ್ನು ಈ ಬಾರಿ ನೋಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತದೆ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 7 ಪದಕಗಳನ್ನು ಗೆದ್ದುಕೊಂಡಿತ್ತು, ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೇ ಗುರಿಯೊಂದಿಗೆ ಭಾರತ ಕಾಮನ್​ವೆಲ್ತ್ ಪ್ರವೇಶಿಸಲಿದೆ.

ಪ್ರಧಾನಮಂತ್ರಿಯವರ ಸಂವಾದವು ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೊದಲು ಕ್ರೀಡಾಪಟುಗಳನ್ನು ಪ್ರೇರೇಪಿಸುವ ಅವರ ನಿರಂತರ ಪ್ರಯತ್ನದ ಒಂದು ಭಾಗವಾಗಿದೆ. ಕಳೆದ ವರ್ಷ, ಪ್ರಧಾನಿಯವರು ಟೋಕಿಯೋ 2020 ರ ಒಲಂಪಿಕ್ಸ್ ಮತ್ತು ಟೋಕಿಯೋ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತದ ಅಥ್ಲೀಟ್‌ಗಳ ತುಕಡಿಯೊಂದಿಗೆ ಸಂವಾದ ನಡೆಸಿದ್ದರು.

ಇದನ್ನೂ ಓದಿ
IND vs WI: ಭಾರತ ವಿರುದ್ಧದ ಸರಣಿಗೂ ಮುನ್ನ ವಿಂಡೀಸ್​ಗೆ ಆಘಾತ; ತಂಡದ ಸ್ಟಾರ್ ಬ್ಯಾಟರ್​ ಕ್ರಿಕೆಟ್​ಗೆ ಗುಡ್​ ಬೈ..!
IND vs ENG: ಶತಕದ ಮಾತು ಹಾಗಿರಲಿ; ಕಳೆದ 6 ವರ್ಷಗಳಲ್ಲಿ ಕೊಹ್ಲಿ ವೈಯಕ್ತಿಕ ಪ್ರದರ್ಶನ ಹೇಗಿದೆ ಗೊತ್ತಾ?
IND vs ENG: ಪಂತ್​ಗೆ ಜೀವದಾನ ಕೊಟ್ಟು ಕೆಟ್ಟೆವು..! ತಪ್ಪೊಪ್ಪಿಕೊಂಡ ಆಂಗ್ಲ ನಾಯಕ ಬಟ್ಲರ್ ಹೇಳಿದ್ದಿದು

ಜೊತೆಗೆ ಕ್ರೀಡಾಕೂಟಗಳ ಸಮಯದಲ್ಲಿಯೂ ಸಹ, ಪ್ರಧಾನ ಮಂತ್ರಿಗಳು ಕ್ರೀಡಾಪಟುಗಳ ಪ್ರಗತಿಯ ಬಗ್ಗೆ ತೀವ್ರ ಆಸಕ್ತಿ ವಹಿಸಿದ್ದರು. ಅನೇಕ ಸಂದರ್ಭಗಳಲ್ಲಿ, ಮೋದಿಯವರು ವೈಯಕ್ತಿಕವಾಗಿ ಕ್ರೀಡಾಪಟುಗಳ ಯಶಸ್ಸು ಮತ್ತು ಪ್ರಾಮಾಣಿಕ ಪ್ರಯತ್ನಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಅವರಲ್ಲಿ ಉತ್ಸಾಹ ಹೆಚ್ಚಿಸಿದ್ದರು. ಇದಲ್ಲದೆ, ಪದಕ ಗೆದ್ದು ದೇಶಕ್ಕೆ ಹಿಂದಿರುಗಿದ ನಂತರ, ಪ್ರಧಾನ ಮಂತ್ರಿ ಅವರು ತುಕಡಿಯನ್ನು ಭೇಟಿ ಮಾಡಿ ಸಂವಾದ ನಡೆಸಿದ್ದರು.

ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನವೇ ಇದರ ಬಗ್ಗೆ ಚರ್ಚೆಯಾಗಿತ್ತು

ಪ್ರಧಾನಿ ಮೋದಿ ಅವರು ಕ್ರೀಡಾಪಟುಗಳೊಂದಿಗೆ ಈ ರೀತಿ ಮಾತನಾಡುವುದು ಇದೇ ಮೊದಲಲ್ಲ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ವರ್ಷ, ಟೋಕಿಯೊ 2020 ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಕ್ರೀಡಾಪಟುಗಳು ಮತ್ತು ಭಾರತೀಯ ಪ್ಯಾರಾ-ಅಥ್ಲೀಟ್‌ಗಳ ತಂಡದೊಂದಿಗೆ ಪ್ರಧಾನ ಮಂತ್ರಿ ಸಂವಾದ ನಡೆಸಿದರು. ಕ್ರೀಡಾಕೂಟಗಳ ಸಂದರ್ಭದಲ್ಲೂ ಪ್ರಧಾನಮಂತ್ರಿಯವರು ಕ್ರೀಡಾಪಟುಗಳ ಪ್ರಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದರು.

215 ಕ್ರೀಡಾಪಟುಗಳು ಸಿದ್ದ

CWG 2022 ಬರ್ಮಿಂಗ್ಹ್ಯಾಮ್‌ನಲ್ಲಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಒಟ್ಟು 215 ಅಥ್ಲೀಟ್‌ಗಳು 19 ಕ್ರೀಡೆಗಳಲ್ಲಿ 141 ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್​ನಲ್ಲಿ ಭಾರತ ಒಟ್ಟು 66 ಪದಕ ಗೆದ್ದು ಮೂರನೇ ಸ್ಥಾನ ಪಡೆದಿತ್ತು. ಈ ಬಾರಿ ಅದನ್ನು ಹಿಂದಿಕ್ಕುವುದು ಭಾರತದ ಪ್ರಯತ್ನ. 2010ರ ಹೊಸದಿಲ್ಲಿ ಗೇಮ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಆಗ ಭಾರತ 101 ಪದಕ ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿತ್ತು.

Published On - 8:34 pm, Mon, 18 July 22