ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಭಾರತೀಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದಿಸಿದ ಪ್ರಧಾನಿ ಮೋದಿ

|

Updated on: Sep 01, 2024 | 6:07 PM

Narendra Modi congratulates Indian medal winners at Paraylmpics: ಪ್ಯಾರಿಸ್​ನಲ್ಲಿ ನಡೆಯುತ್ತಿರುವ 2024ರ ಪ್ಯಾರಾಲಿಂಕ್ಸ್ ಗೇಮ್ಸ್​ನಲ್ಲಿ ಪದಕಗಳನ್ನು ಗೆದ್ದಿರುವ ಮೋನಾ ಅಗರ್ವಾಲ್, ಪ್ರೀತಿ ಪಾಲ್, ಮನೀಶ್ ನರ್ವಾಲ್, ರುಬಿನಾ ಫ್ರಾನ್ಸಿಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿ ಅಭಿನಂದಿಸಿದ್ದಾರೆ. ಆವನಿ ಲೇಖರ ಚಿನ್ನದ ಪದಕ ಗೆದ್ದಿರುವುದೂ ಸೇರಿ ಈ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯರು ಐದು ಪಕದ ಗೆದ್ದಿದ್ದಾರೆ.

ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಭಾರತೀಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದಿಸಿದ ಪ್ರಧಾನಿ ಮೋದಿ
ಆವನಿ ಲೇಖರ, ಮೋನಾ ಅಗರ್ವಾಲ್
Follow us on

ನವದೆಹಲಿ, ಸೆಪ್ಟಂಬರ್ 1: ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್​ನಲ್ಲಿ ವಿಶೇಷ ಚೇತನರಿಗೆ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಗೇಮ್ಸ್​ನಲ್ಲಿ ಹಲವು ಭಾರತೀಯರು ದೇಶದ ಕೀರ್ತಿಪತಾಕೆ ಹಾರಿಸಿದ್ದಾರೆ. ಇದೂವರೆಗೆ ಪಕದಗಳನ್ನು ಗೆದ್ದಿರುವ ಭಾರತೀಯ ಸ್ಪರ್ಧಿಗಳನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇಂದು ಪದಕ ವಿಜೇತರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದನೆ ಹೇಳಿದ್ದಾರೆ. ಮೋನಾ ಅಗರ್ವಾಲ್, ಪ್ರೀತಿ ಪಾಲ್, ಮನೀಶ್ ನರ್ವಾಲ್, ರುಬಿನಾ ಫ್ರಾನ್ಸಿಸ್ ಅವರೊಂದಿಗೆ ಪ್ರಧಾನಿಗಳು ಮಾತನಾಡಿದರು.

ಈ ಗೇಮ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಶೂಟರ್ ಆವನಿ ಲೇಖರ ಅವರು ಈ ವೇಳೆ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡಿದ್ದರಿಂದ ಪ್ರಧಾನಿಗಳ ಫೋನ್ ಸಂವಾದಕ್ಕೆ ಅವರು ಸಿಗಲಿಲ್ಲ. ಇತರ ಪ್ರತಿಯೊಬ್ಬ ವಿಜೇತರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಮೋದಿ, ಅವರು ಹೇಗೆ ತಮ್ಮ ಸಾಧನೆಗಳ ಮೂಲಕ ದೇಶಕ್ಕೆ ಹೆಮ್ಮ ಮೂಡಿಸಿದ್ದಾರೆ ಎಂಬುದನ್ನು ತಿಳಿಸಿದರು.

ಇದನ್ನೂ ಓದಿ: Paralympics 2024: ಭಾರತಕ್ಕೆ ಐದನೇ ಪದಕ; 10 ಮೀ. ಏರ್ ರೈಫಲ್​ನಲ್ಲಿ ಕಂಚು ಗೆದ್ದ ರುಬಿನಾ ಫ್ರಾನ್ಸಿಸ್

ಪ್ರಧಾನಿ ನರೇಂದ್ರ ಮೋದಿ ಕ್ರಿಕೆಟ್ ಆಗಲೀ, ಫುಟ್ಬಾಲ್ ಆಗಲೀ ಯಾವುದೇ ಪ್ರಮುಖ ಕ್ರೀಡಾಕೂಟ ನಡೆದಾಗ ದೇಶವನ್ನು ಪ್ರತಿನಿಧಿಸಿ ಗೆಲುವು ಸಾಧಿಸುವ ಪ್ರತಿಯೊಬ್ಬರನ್ನೂ, ಪ್ರತೀ ತಂಡವನ್ನೂ ಅಭಿನಂದಿಸುವುದನ್ನು ಮರೆಯುವುದಿಲ್ಲ. ಪ್ಯಾರಾಲಿಂಪಿಕ್ಸ್​ನಲ್ಲಿ ಪ್ರತಿಯೊಂದು ಪದಕ ಬಂದಾಗಲೂ ಅವರು ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ತಪ್ಪದೇ ಅಭಿನಂದನೆ ಹೇಳುತ್ತಾರೆ.

ಸಮ್ಮರ್ ಒಲಿಂಪಿಕ್ಸ್ ನಡೆದ ಬಳಿಕ ಕೆಲ ದಿನಗಳ ಅಂತರದಲ್ಲಿ ಪ್ಯಾರಾಲಿಂಪಿಕ್ಸ್ ನಡೆಯುತ್ತದೆ. ಕೆಲ ತಿಂಗಳ ಬಳಿಕ ವಿಂಟರ್ ಒಲಿಂಪಿಕ್ಸ್ ಕೂಡ ನಡೆಯುತ್ತದೆ. ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಜಯಿಸಿ ಪದಕಗಳ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Paralympics 2024: ಭಾರತಕ್ಕೆ ಮೊದಲ ಚಿನ್ನದ ಪದಕ; 10 ಮೀ. ಏರ್ ರೈಫಲ್​ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಆವನಿ ಲೇಖರ ಚಿನ್ನದ ಪದಕ ಗೆದ್ದಿದ್ದಾರೆ. ಈವರೆಗೆ ಆಕೆ ಮೂರು ಬಾರಿ ಪದಕಗಳನ್ನು ಗೆದ್ದಿದ್ದಾರೆ. ಆ ಸಾಧನೆ ಮಾಡಿದ ಭಾರತದ ಮೊದಲ ಪ್ಯಾರಾಲಿಂಪಿಕ್ ಕ್ರೀಡಾಪಟು ಎನಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ