Pro Kabaddi 2021-22: ಬೆಂಗಳೂರು ಬುಲ್ಸ್​ vs ಗುಜರಾತ್ ಜೈಂಟ್ಸ್​: ಯಾರು ಬಲಿಷ್ಠ?

| Updated By: ಝಾಹಿರ್ ಯೂಸುಫ್

Updated on: Jan 13, 2022 | 11:21 PM

bengaluru bulls vs gujarat fortune giants head to head: ಉಭಯ ತಂಡಗಳು ಇದುವರೆಗೆ ಪ್ರೋ ಕಬಡ್ಡಿ ಲೀಗ್​ನಲ್ಲಿ 6 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಬೆಂಗಳೂರು ಬುಲ್ಸ್ ತಂಡ 3 ಪಂದ್ಯಗಳಲ್ಲಿ ಸೋತಿದೆ.

Pro Kabaddi 2021-22: ಬೆಂಗಳೂರು ಬುಲ್ಸ್​ vs ಗುಜರಾತ್ ಜೈಂಟ್ಸ್​: ಯಾರು ಬಲಿಷ್ಠ?
bengaluru bulls vs gujarat fortune giants
Follow us on

ಪ್ರೋ ಕಬಡ್ಡಿ ಲೀಗ್​ನ 54ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್​ ತಂಡಗಳು ಮುಖಾಮುಖಿಯಾಗಲಿದೆ. ಶುಕ್ರವಾರ ರಾತ್ರಿ ನಡೆಯಲಿರುವ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು. ಸದ್ಯ ಬುಲ್ಸ್ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಗುಜರಾತ್ ಜೈಂಟ್ಸ್ ತಂಡವು 11ನೇ ಸ್ಥಾನದಲ್ಲಿದೆ. ಇದಾಗ್ಯೂ ಸತತ ಮೂರು ಪಂದ್ಯಗಳ ಸೋಲಿನ ಬಳಿಕ ಗುಜರಾತ್ ತಂಡವು ಕಳೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಗೆಲುವಿನ ಲಯಕ್ಕೆ ಮರಳಿದೆ. ಹೀಗಾಗಿ ಈ ಪಂದ್ಯದಲ್ಲೂ ಬೆಂಗಳೂರು ಬುಲ್ಸ್​ಗೆ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದ್ದೆ.

ಆದರೆ ಅತ್ತ ಬೆಂಗಳೂರು ಬುಲ್ಸ್ ತಂಡವು ಬಲಿಷ್ಠ ದಬಾಂಗ್ ಡೆಲ್ಲಿ ತಂಡವನ್ನು 39 ಪಾಯಿಂಟ್​ಗಳ ಅಂತರದಿಂದ ಮಕಾಡೆ ಮಲಗಿಸಿ ಈ ಸೀಸನ್​ ಅತ್ಯಂತ ದೊಡ್ಡ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಭರ್ಜರಿ ಗೆಲುವಿನ ಆತ್ಮ ವಿಶ್ವಾಸದಲ್ಲಿ ತೇಲುತ್ತಿರುವ ಬುಲ್ಸ್​ ಅನ್ನು ಕಟ್ಟಿ ಹಾಕುವುದು ಗುಜರಾತ್ ತಂಡಕ್ಕೆ ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ತಂಡದ ನಾಯಕ ಪವನ್ ಕುಮಾರ್ ಶೆಹ್ರಾವತ್ ಅವರನ್ನು ತಡೆಯುವುದು ಕಷ್ಟಸಾಧ್ಯ ಎಂಬುದಕ್ಕೆ ಕಳೆದ ಪಂದ್ಯವೇ ಸಾಕ್ಷಿ.

ಇನ್ನು ಉಭಯ ತಂಡಗಳು ಇದುವರೆಗೆ ಪ್ರೋ ಕಬಡ್ಡಿ ಲೀಗ್​ನಲ್ಲಿ 6 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಬೆಂಗಳೂರು ಬುಲ್ಸ್ ತಂಡ 3 ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ ಒಂದು ಪಂದ್ಯವನ್ನು ಟೈ ಮಾಡಿಕೊಂಡಿದೆ. ಇನ್ನು ಗೆದ್ದಿರುವುದು 2 ಬಾರಿ ಮಾತ್ರ. ಅದರಲ್ಲೂ 2018 ರಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ ಕಳೆದ ಸೀಸನ್​ನಲ್ಲಿ ಎರಡೂ ಪಂದ್ಯಗಳಲ್ಲಿ ಬುಲ್ಸ್ ವಿರುದ್ದ ಗುಜರಾತ್ ಜೈಂಟ್ಸ್ ಜಯ ಸಾಧಿಸಿದೆ. ಈ ಹಿಂದಿನ ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲ ಹೊಂದಿದೆ ಎನ್ನಬಹುದು. ಇದಾಗ್ಯೂ ಈ ಬಾರಿಯ ತಂಡದ ಪ್ರದರ್ಶನವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಬೆಂಗಳೂರು ಬುಲ್ಸ್ ಬಲಿಷ್ಠವಾಗಿದೆ ಎಂದೇ ಹೇಳಬಹುದು. ಇದಕ್ಕೆ ಸಾಕ್ಷಿಯೇ ಪಾಯಿಂಟ್ ಟೇಬಲ್​ನಲ್ಲಿ ಬೆಂಗಳೂರು ಬುಲ್ಸ್​ 2ನೇ ಸ್ಥಾನದಲ್ಲಿರುವುದು. ಇದೇ ಗುಜರಾತ್ ಜೈಂಟ್ಸ್​ ತಂಡ 11ನೇ ಸ್ಥಾನದಲ್ಲಿದೆ. ಹೀಗಾಗಿ ಗುಜರಾತ್ ಜೈಂಟ್ಸ್​ಗಿಂತ ಈ ಬಾರಿ ಬೆಂಗಳೂರು ಬುಲ್ಸ್ ಬಲಿಷ್ಠ ತಂಡ ಎನ್ನಬಹುದು.

ಶುಕ್ರವಾರದ ಪಂದ್ಯಗಳ ವೇಳಾಪಟ್ಟಿ:

ಜೈಪುರ್ ಪಿಂಕ್ ಪ್ಯಾಂಥರ್ಸ್ vs ಪಟ್ನಾ ಪೈರೇಟ್ಸ್​- ರಾತ್ರಿ 7.30 ಕ್ಕೆ

ಬೆಂಗಳೂರು ಬುಲ್ಸ್​ vs ಗುಜರಾತ್ ಜೈಂಟ್ಸ್- ರಾತ್ರಿ 8.30 ಕ್ಕೆ

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Pro Kabaddi 2021-22: bengaluru bulls vs gujarat fortune giants head to head)

Published On - 11:20 pm, Thu, 13 January 22