Pro Kabaddi League: ಅ. 7 ರಿಂದ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆರಂಭ; ಈ ನಗರಗಳಲ್ಲಿ ಲೀಗ್ ಪಂದ್ಯಗಳು
Pro Kabaddi League: 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಆರಂಭವಾಗಿದ್ದು, ಅಕ್ಟೋಬರ್ 7, 2022 ರಂದು ಪಂದ್ಯಾವಳಿ ಆರಂಭವಾಗಲಿದ್ದು, ಡಿಸೆಂಬರ್ ಮಧ್ಯದವರೆಗೆ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಆರಂಭವಾಗಿದ್ದು, ಅಕ್ಟೋಬರ್ 7, 2022 ರಂದು ಪಂದ್ಯಾವಳಿ ಆರಂಭವಾಗಲಿದ್ದು, ಡಿಸೆಂಬರ್ ಮಧ್ಯದವರೆಗೆ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಜೊತೆಗೆ ಲೀಗ್ ಹಂತದ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ ಎಂದು ಪ್ರೊ ಕಬಡ್ಡಿ ಲೀಗ್‌ನ ಸ್ಪೋರ್ಟ್ಸ್ ಲೀಗ್‌ಗಳ ಮುಖ್ಯಸ್ಥ ಅನುಪಮ್ ಗೋಸ್ವಾಮಿ ಮಾಹಿತಿ ನೀಡಿದ್ದಾರೆ.
ಮಶಾಲ್ ಸ್ಪೋರ್ಟ್ಸ್ ವಿವೋ ಪ್ರೊ ಕಬಡ್ಡಿ ಲೀಗ್‌ನ ಪ್ರಯಾಣವನ್ನು ಸಮಕಾಲೀನ ಮತ್ತು ಮುಂಬರುವ ಪೀಳಿಗೆಯ ಕ್ರೀಡಾ ಅಭಿಮಾನಿಗಳ ಜಗತ್ತಿಗೆ ಕಬಡ್ಡಿಯನ್ನು ಕೊಂಡೊಯ್ಯುವ ದೃಷ್ಟಿಯೊಂದಿಗೆ ಪ್ರಾರಂಭಿಸಿದೆ. ಈ ವರ್ಷದ ಆರಂಭದಲ್ಲಿ ಸಾಬೀತಾಗಿರುವಂತೆ ನಾವು ಈ ಗುರಿಯಲ್ಲಿ ಪ್ರಭಾವಶಾಲಿ ಯಶಸ್ಸನ್ನು ಸಾಧಿಸುವುದನ್ನು ಮುಂದುವರಿಸುತ್ತೇವೆ. ಕಳೆದ ಸೀಸನ್ ಅನ್ನು ಕೊರೊನಾ ಭಯದಿಂದಾಗಿ ಬಯೋ ಬಬಲ್ನಲ್ಲಿ ನಡೆಸಲಾಗಿತ್ತು. ಆದರೆ 9ನೇ ಆವೃತ್ತಿಯಲ್ಲಿ ಆ ಅಡೆತಡೆಗಳಿಲ್ಲದೆ ನಡೆಸುವುದಾಗಿ ಲೀಗ್‌ನ ಕಮಿಷನರ್ ಅನುಪಮ್ ಗೋಸ್ವಾಮಿ ಹೇಳಿದರು. ಜೊತೆಗೆ ಮುಂದಿನ ವಾರಗಳಲ್ಲಿ 9ನೇ ಸೀಸನ್‌ನ ಹೆಚ್ಚಿನ ವಿವರಗಳು ಮತ್ತು ವೇಳಾಪಟ್ಟಿಯನ್ನು ಬಿಡುಗಡೆಗೊಳಿಸುವುದಾಗಿ ಲೀಗ್‌ನ ಸಂಘಟಕರು ತಿಳಿಸಿದ್ದಾರೆ.
? Mark your calendars ?#vivoProKabaddi Season 9️⃣ is here and we can't wait to welcome you back ❤️ pic.twitter.com/iDMMapz5uR
— ProKabaddi (@ProKabaddi) August 26, 2022
ಒಂಬತ್ತನೇ ಸೀಸನ್‌ಗಾಗಿ ಆಟಗಾರರ ಹರಾಜು ಆಗಸ್ಟ್ 5 ಮತ್ತು 6 ರಂದು ನಡೆದಿದ್ದು, ಈ ಬಾರಿಯ ಹರಾಜಿನಲ್ಲಿ ಆಟಗಾರರ ಬಿಡ್ 2 ಕೋಟಿ ರೂಪಾಯಿಗೂ ಹೆಚ್ಚು ತಲುಪಿತ್ತು. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಈ ರೀತಿಯ ಪೈಪೋಟಿ ಹಿಂದೆಂದೂ ಕಂಡಿರಲಿಲ್ಲ.ಈ ಹರಾಜಿನಲ್ಲಿ ಸ್ಟಾರ್ ಕಬಡ್ಡಿ ಆಟಗಾರ ಪವನ್ ಕುಮಾರ್ ಸೆಹ್ರಾವತ್ ಅವರನ್ನು ತಮಿಳ್ ತಲೈವಾಸ್ ದಾಖಲೆಯ 2.26 ಕೋಟಿ ರೂ. ನೀಡಿ ಖರೀದಿಸಿತು. ಹೀಗಾಗಿ ಪವನ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದರು.
ಅಚ್ಚರಿ ಎಂದರೆ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲೇ ಇದುವರೆಗೆ ಯಾವುದೇ ಆಟಗಾರ 2 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿರಲಿಲ್ಲ. ಹೀಗಾಗಿ ಭರ್ಜರಿ ಮೊತ್ತಕ್ಕೆ ಹರಾಜಾಗುವ ಮೂಲಕ ಪವನ್ ಶೆಹ್ರಾವತ್ ಹೊಸ ಇತಿಹಾಸ ನಿರ್ಮಿಸಿದ್ದರು. ಇದಕ್ಕೂ ಮುನ್ನ ಪ್ರೋ ಕಬಡ್ಡಿ ಲೀಗ್‌ನ ದುಬಾರಿ ಆಟಗಾರನ ದಾಖಲೆ ಪರ್ದೀಪ್ ನರ್ವಾಲ್ ಹೆಸರಿನಲ್ಲಿತ್ತು. ಕಳೆದ ಸೀಸನ್ನಲ್ಲಿ ಪರ್ದೀಪ್ ನರ್ವಾಲ್ರನ್ನು ಯುಪಿ ಯೋಧಾ ತಂಡ 1.65 ಕೋಟಿಗೆ ಖರೀದಿಸಿತ್ತು.
Published On - 4:50 pm, Fri, 26 August 22
