Pro Kabaddi 2022: ಬೆಂಗಳೂರು ಬುಲ್ಸ್​ನ ಮಕಾಡೆ ಮಲಗಿಸಿದ ತಮಿಳ್ ತಲೈವಾಸ್

| Updated By: ಝಾಹಿರ್ ಯೂಸುಫ್

Updated on: Jan 30, 2022 | 9:43 PM

Tamil Thalaivas vs Bengaluru Bulls: ಮೊದಲಾರ್ಧದ ಮುನ್ನಡೆ ಕಾಯ್ದುಕೊಂಡ ತಮಿಳ್ ತಲೈವಾಸ್ ದ್ವಿತಿಯಾರ್ಧದ ಆರಂಭದಲ್ಲೇ ಪಾಯಿಂಟ್​ಗಳಿಸಿತು. ಈ ಬಾರಿ ರೈಡರ್ ಮಂಜೀತ್ ಕೂಡ ಉತ್ತಮವಾಗಿ ರೈಡ್ ಮಾಡಿದರು.

Pro Kabaddi 2022: ಬೆಂಗಳೂರು ಬುಲ್ಸ್​ನ ಮಕಾಡೆ ಮಲಗಿಸಿದ ತಮಿಳ್ ತಲೈವಾಸ್
Pro Kabaddi
Follow us on

ಪ್ರೋ ಕಬಡ್ಡಿ ಲೀಗ್​ನ 83ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತಮಿಳ್ ತಲೈವಾಸ್ ವಿರುದ್ದ ಹೀನಾಯ ಸೋಲನುಭವಿಸಿದೆ. ಪಂದ್ಯದ ಆರಂಭದಲ್ಲಿ ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆಹ್ರಾವತ್ ಆರಂಭಿಕ ಪಾಯಿಂಟ್ ಕಲೆಹಾಕಿದ್ದರು. ಆದರೆ ಆ ಬಳಿಕ ಅದ್ಭುತವಾಗಿ ಕಂಬ್ಯಾಕ್ ಮಾಡಿದ ತಮಿಳ್ ತಲೈವಾಸ್ ಟ್ಯಾಕಲ್​ಗಳ ಮೂಲಕ ಗಮನ ಸೆಳೆದರು.

ಅದರಂತೆ ಒಂದೆಡೆ ಟ್ಯಾಕಲ್​ಗಳ ಮೂಲಕ ಯಶಸ್ಸು ಸಾಧಿಸಿದರೆ, ಮತ್ತೊಂದೆಡೆ ತಮಿಳ್ ತಲೈವಾಸ್ ತಂಡದ ಸ್ಟಾರ್ ರೈಡರ್ ಅಜಿಂಕ್ಯ ಪವಾರ್ 6 ರೈಡ್ ಪಾಯಿಂಟ್ ಪಡೆದರು. ಪರಿಣಾಮ ಬೆಂಗಳೂರು ಬುಲ್ಸ್ ತಂಡವು ಮೊದಲಾರ್ಧದಲ್ಲಿ 4 ಬಾರಿ ಆಲೌಟ್ ಆಯಿತು. ಈ ಮೂಲಕ ಮೊದಲಾರ್ಧದ ಮುಕ್ತಾಯದ ವೇಳೆಗೆ ತಮಿಳ್ ತಲೈವಾಸ್ 21 ಅಂಕಗಳನ್ನು ಗಳಿಸಿತು. ಆದರೆ ಮತ್ತೊಂದೆಡೆ ಬೆಂಗಳೂರು ಬುಲ್ಸ್ ಕಲೆಹಾಕಿದ್ದು ಕೇವಲ 8 ಪಾಯಿಂಟ್ ಮಾತ್ರ.

ಇನ್ನು ಮೊದಲಾರ್ಧದ ಮುನ್ನಡೆ ಕಾಯ್ದುಕೊಂಡ ತಮಿಳ್ ತಲೈವಾಸ್ ದ್ವಿತಿಯಾರ್ಧದ ಆರಂಭದಲ್ಲೇ ಪಾಯಿಂಟ್​ಗಳಿಸಿತು. ಈ ಬಾರಿ ರೈಡರ್ ಮಂಜೀತ್ ಕೂಡ ಉತ್ತಮವಾಗಿ ರೈಡ್ ಮಾಡಿದರು. ಅದರಂತೆ ದ್ವಿತಿಯಾರ್ಧದ ತಮಿಳು ತಲೈವಾಸ್ ಬೇಗನೆ 30 ಪಾಯಿಂಟ್​ಗಳ ಗಡಿದಾಟಿತು. ಇದೇ ವೇಳೆ ಬೆಂಗಳೂರು ಬುಲ್ಸ್ ತಂಡವು 12 ಪಾಯಿಂಟ್​ನಲ್ಲೇ ಉಳಿದುಕೊಂಡಿತು.

ಕೊನೆಯ 10 ನಿಮಿಷಗಳ ಪಂದ್ಯ ಬಾಕಿಯಿರುವಾಗ ಬೆಂಗಳೂರು ಬುಲ್ಸ್ 12 ಪಾಯಿಂಟ್​ನಲ್ಲಿದ್ದರೆ, ತಮಿಳ್ ತಲೈವಾಸ್ ಅದಾಗಲೇ 34 ಅಂಕಗಳಿಸಿತ್ತು. ಈ ಮೂಲಕ 22 ಪಾಯಿಂಟ್​ಗಳ ಮುನ್ನಡೆಯನ್ನು ಪಡೆದಿತ್ತು. ಇದಾದ ಬಳಿಕ ಮತ್ತೆ 2 ಬಾರಿ ಬೆಂಗಳೂರು ಬುಲ್ಸ್​ ತಂಡವನ್ನು ಆಲೌಟ್ ಮಾಡಿದ ತಮಿಳ್ ತಲೈವಾಸ್ ಪಾಯಿಂಟ್ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಅದರಂತೆ ಅಂತಿಮವಾಗಿ ತಮಿಳ್ ತಲೈವಾಸ್ 42 ಪಾಯಿಂಟ್​ಗಳ ಕಲೆಹಾಕಿತು. ಇತ್ತ 24 ಪಾಯಿಂಟ್​ಗಳಿಸಲಷ್ಟೇ ಶಕ್ತರಾದ ಬೆಂಗಳೂರು ಬುಲ್ಸ್ ತಂಡವು 18 ಪಾಯಿಂಟ್​ಗಳಿಂದ ಪರಾಜಯಗೊಂಡಿತು.

ಈ ಪಂದ್ಯದಲ್ಲಿ ತಮಿಳ್ ತಲೈವಾಸ್ ಪರ ಅಜಿಂಕ್ಯ ಪವಾರ್ 10 ರೈಡಿಂಗ್ ಪಾಯಿಂಟ್​ಗಳಿಸಿದರೆ, ಮಂಜೀತ್ 8 ಪಾಯಿಂಟ್​ಗಳನ್ನು ಕಲೆಹಾಕಿದರು. ಹಾಗೆಯೇ ಅಭಿಷೇಕ್ ಮತ್ತು ಸಾಗರ್ ತಲಾ 4 ಟ್ಯಾಕಲ್ ಪಾಯಿಂಟ್​ಗಳನ್ನು ಗಳಿಸಿದ್ದರು. ಬೆಂಗಳೂರು ಬುಲ್ಸ್​ ಪವನ್ ಕುಮಾರ್ 9 ರೈಡ್ ಪಾಯಿಂಟ್​ ಕಲೆಹಾಕಿದ್ದರು.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್