ನನ್ನೊಳಗಿನ ಮೃಗವನ್ನು ಎಬ್ಬಿಸಬೇಡಿ ಎಂದ ದ್ರಾವಿಡ್; ಇಷ್ಟೊಂದು​ ಕೋಪಗೊಂಡಿದ್ದಕ್ಕೆ ಕಾರಣ ಏನು?

|

Updated on: Apr 25, 2021 | 10:29 AM

ರಾಹುಲ್​ ಡ್ರಾವಿಡ್​ ಅವರ ಮತ್ತೊಂದು ವಿಡಿಯೋ ವೈರಲ್​ ಆಗುತ್ತಿದೆ. ಅದರಲ್ಲಿ ಕೆಲವು ಡೈಲಾಗ್​ಗಳು ಗಮನ ಸೆಳೆಯುತ್ತಿವೆ. ‘ನನ್ನೊಳಗಿನ ಮೃಗವನ್ನು ಎಬ್ಬಿಸಬೇಡಿ’ ಎಂದು ಡ್ರಾವಿಡ್​ ಕಿರುಚಾಡಿದ್ದಾರೆ.

ನನ್ನೊಳಗಿನ ಮೃಗವನ್ನು ಎಬ್ಬಿಸಬೇಡಿ ಎಂದ ದ್ರಾವಿಡ್; ಇಷ್ಟೊಂದು​ ಕೋಪಗೊಂಡಿದ್ದಕ್ಕೆ ಕಾರಣ ಏನು?
ರಾಹುಲ್​ ದ್ರಾವಿಡ್​
Follow us on

ಮಾಜಿ ಕ್ರಿಕೆಟಿಗ ರಾಹುಲ್​ ದ್ರಾವಿಡ್​ ಅವರು ಯಾವ ರೀತಿಯ ವ್ಯಕ್ತಿ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಶಾಂತ ಸ್ವಭಾವದಿಂದಲೇ ಅವರು ಫೇಮಸ್​. ಮೈದಾನದಲ್ಲಿ ಕೆಣಕಿದವರಿಗೆ ಅವರು ಬ್ಯಾಟ್​ನಿಂದ ಉತ್ತರ ಕೊಟ್ಟಿದ್ದರೇ ಹೊರತು ಜೋರಾಗಿ ಬಾಯಿ ಮಾಡಿದವರಲ್ಲ. ಆದರೆ ಇತ್ತೀಚೆಗೆ ದ್ರಾವಿಡ್​ ಅವರ ಕೋಪವೇ ಎಲ್ಲ ಕಡೆ ಹೈಲೈಟ್​ ಆಗಿತ್ತು. ಅದಕ್ಕೆ ಕಾರಣ ಅವರು ನಟಿಸಿದ ಒಂದು ಜಾಹೀರಾತು. ಅದರಲ್ಲಿ ಅವರು ಇಂದಿರಾ ನಗರದ ಗೂಂಡಾ ಆಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಈಗ ಅವರ ಇನ್ನೊಂದು ಡೈಲಾಗ್​ ವೈರಲ್​ ಆಗುತ್ತಿದೆ.

ಕ್ರೆಡ್​ ಕಂಪನಿಯ ಈ ಜಾಹೀರಾತಿನಲ್ಲಿ ಡ್ರಾವಿಡ್​ ಅವರು ಸಿಕ್ಕಾಪಟ್ಟೆ ಕೋಪಿಷ್ಠನ ಪಾತ್ರದಲ್ಲಿ ನಟಿಸಿದ್ದರು. ನಿಜಕ್ಕೂ ಡ್ರಾವಿಡ್​ಗೆ ಅಷ್ಟು ಕೋಪ ಬರುತ್ತಾ ಎಂದು ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಷ್ಟರ ಮಟ್ಟಿಗೆ ಅವರ ನಟನೆ ಸೂಪರ್​ ಆಗಿತ್ತು. ಆ ದೃಶ್ಯಗಳಲ್ಲಿ ನಟಿಸಲು ಅವರು ಎಷ್ಟೆಲ್ಲ ಕಷ್ಟಪಟ್ಟಿದ್ದಾ​ರೆ ಎಂಬುದನ್ನು ತೋರಿಸುವಂತಹ ಮೇಕಿಂಗ್ ವಿಡಿಯೋ ಈಗ ರಿಲೀಸ್​ ಆಗಿದೆ.

ಈ ಮೊದಲು ರಿಲೀಸ್​ ಆಗಿದ್ದ ಜಾಹೀರಾತಿನಲ್ಲಿ ‘ಇಂದಿರಾ ನಗರ್​ ಕಾ ಗೂಂಡಾ ಹೂ ಮೈ’, ‘ಹೊಡೆದುಹಾಕಿ ಬಿಡ್ತೀನಿ..’ ಎಂಬಿತ್ಯಾದಿ ಡೈಲಾಗ್​ಗಳು ವೈರಲ್​ ಆಗಿದ್ದವು. ಅಷ್ಟೇ ಅಲ್ಲ, ಈ ಜಾಹೀರಾತಿನ ಶೂಟಿಂಗ್​ ಸಂದರ್ಭದಲ್ಲಿ ಇನ್ನೂ ಕೆಲವು ಡೈಲಾಗ್​ಗಳನ್ನು ದ್ರಾವಿಡ್​ ಹೇಳಿದ್ದರು. ಈಗ ಮೇಕಿಂಗ್​ ವಿಡಿಯೋ ವೈರಲ್​ ಆಗುತ್ತಿದ್ದು ಅದರಲ್ಲಿ ಕೆಲವು ಡೈಲಾಗ್​ಗಳು ಗಮನ ಸೆಳೆಯುತ್ತಿವೆ.

‘ನನ್ನೊಳಗಿನ ಮೃಗವನ್ನು ಎಬ್ಬಿಸಬೇಡಿ.. ಹೊರಗೆ ಬಾ ನಿನಗೆ ತೋರಿಸುತ್ತೇನೆ.. ಕಣ್ಣು ಕಾಣಿಸಲ್ವಾ.. ರೋಡ್​ ನಿಮ್ಮ ಅಪ್ಪಂದಾ? ಕೈ ಕೆಳಗೆ ಇಳಿಸು.. ವಿವಿಎಸ್​.. ಹುಡುಗರನ್ನು ಕರ್ಕೊಂಡು ಬಾರೋ..’ ಎಂದು ಡ್ರಾವಿಡ್​ ಕಿರುಚಾಡಿದ್ದಾರೆ. ಇದನ್ನೆಲ್ಲ ಕಂಡು ಅವರ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಈ ವಿಡಿಯೋ ಕೂಡ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಒಟ್ಟಿನಲ್ಲಿ ಕ್ರೆಡ್​ ಕಂಪನಿಯ ಈ ಜಾಹೀರಾತಿ ವೈರಲ್​ ಆದ ಬಳಿಕ ಡ್ರಾವಿಡ್​ ಓರ್ವ ಅದ್ಭುತ ನಟ ಎಂಬ ಮೆಚ್ಚುಗೆ ಕೇಳಿಬರುತ್ತಿದೆ. ಸಿನಿಮಾಗಳಲ್ಲಿ ಅವರು ನಟಿಸಬೇಕು ಎಂಬ ಬೇಡಿಕೆ ಅವರ ಅಭಿಮಾನಿಗಳದ್ದು.

ಇದನ್ನೂ ಓದಿ: Rahul Dravid: ವೆಂಕಟೇಶ್​ ಪ್ರಸಾದ್​ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್​ ಬಳಿಕ ಇನ್ನೊಂದು ವಿಡಿಯೋ ವೈರಲ್​

Rahul Dravid: ದ್ರಾವಿಡ್​ ನಟಿಸಬಹುದಾದ 8 ಕನ್ನಡ ಸಿನಿಮಾಗಳು! ಟೈಟಲ್​ ಕೇಳಿ ನಗುತ್ತಿರುವ ನೆಟ್ಟಿಗರು

(Rahul Dravid angry advertisement making video goes viral)