ಸಿಎಸ್ಕೆ ತಂಡಕ್ಕೆ ಟ್ವೀಟ್ ಮೂಲಕ ಶುಭ ಕೋರಿದ ಸುರೇಶ್ ರೈನಾ
ವೈಯಕ್ತಿಕ ಕಾರಣಗಳಿಂದಾಗಿ ಇಂಡಿಯನ್ ಪ್ರಿಮೀಯರ್ ಲೀಗ್ನ 13ನೇ ಆವೃತಿಯೀಂದ ಹಿಂದೆ ಸರಿದಿರುವ ಸುರೇಶ್ ರೈನಾ ಟ್ವೀಟ್ ಮೂಲಕ ತನ್ನ ತಂಡದ ಆಡಗಾರರಿಗೆ ಶುಭಾಶಯ ತಿಳಿಸಿದ್ದಾರೆ. ‘‘@ChennaiIPLನ ನನ್ನೆಲ್ಲ ಸ್ನೇಹಿತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಇವತ್ತು ನಾನು ನಿಮ್ಮೊಂದಿಗಿಲ್ಲದಿರುವುದು ನಂಬಲಾಗದಂಥ ಸ್ಥಿತಿ, ಆದರೆ ನನ್ನ ಶುಭಕಾಮನೆಗಳು ನಿಮ್ಮೊಂದಿಗಿವೆ. ಎಲ್ಲ ಋಣಾತ್ಮಕ ಭಾವನೆಗಳನ್ನು ನಿಮಗೆ ರವಾನಿಸುತ್ತಿದ್ದೇನೆ. ಕಪ್ ಗೆದ್ದುಕೊಂಡೇ ಬನ್ನಿ! #WhistlePodu, @ImRaina,’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ. ರೈನಾ ಅವರ ಅತ್ತೆ, ಮಾವ ಮತ್ತು ಇಬ್ಬರು ಕಸಿನ್ಗಳ ಮೇಲೆ ಮಾರಣಾಂತಿಕ […]
ವೈಯಕ್ತಿಕ ಕಾರಣಗಳಿಂದಾಗಿ ಇಂಡಿಯನ್ ಪ್ರಿಮೀಯರ್ ಲೀಗ್ನ 13ನೇ ಆವೃತಿಯೀಂದ ಹಿಂದೆ ಸರಿದಿರುವ ಸುರೇಶ್ ರೈನಾ ಟ್ವೀಟ್ ಮೂಲಕ ತನ್ನ ತಂಡದ ಆಡಗಾರರಿಗೆ ಶುಭಾಶಯ ತಿಳಿಸಿದ್ದಾರೆ.
‘‘@ChennaiIPLನ ನನ್ನೆಲ್ಲ ಸ್ನೇಹಿತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಇವತ್ತು ನಾನು ನಿಮ್ಮೊಂದಿಗಿಲ್ಲದಿರುವುದು ನಂಬಲಾಗದಂಥ ಸ್ಥಿತಿ, ಆದರೆ ನನ್ನ ಶುಭಕಾಮನೆಗಳು ನಿಮ್ಮೊಂದಿಗಿವೆ. ಎಲ್ಲ ಋಣಾತ್ಮಕ ಭಾವನೆಗಳನ್ನು ನಿಮಗೆ ರವಾನಿಸುತ್ತಿದ್ದೇನೆ. ಕಪ್ ಗೆದ್ದುಕೊಂಡೇ ಬನ್ನಿ! #WhistlePodu, @ImRaina,’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.
ರೈನಾ ಅವರ ಅತ್ತೆ, ಮಾವ ಮತ್ತು ಇಬ್ಬರು ಕಸಿನ್ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದು, ಅವರ ಮಾವ ಮತ್ತು ಒಬ್ಬ ಕಸಿನ್ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆಯಿಂದ ವಿಚಲಿತರಾದ ರೈನಾ ದುಬೈನಿಂದ ವಾಪಸ್ಸಾದರು.
Published On - 7:20 pm, Sat, 19 September 20