ಸಿಎಸ್​ಕೆ ತಂಡಕ್ಕೆ ಟ್ವೀಟ್ ಮೂಲಕ ಶುಭ ಕೋರಿದ ಸುರೇಶ್ ರೈನಾ

ವೈಯಕ್ತಿಕ ಕಾರಣಗಳಿಂದಾಗಿ ಇಂಡಿಯನ್ ಪ್ರಿಮೀಯರ್ ಲೀಗ್​ನ 13ನೇ ಆವೃತಿಯೀಂದ ಹಿಂದೆ ಸರಿದಿರುವ ಸುರೇಶ್ ರೈನಾ ಟ್ವೀಟ್ ಮೂಲಕ ತನ್ನ ತಂಡದ ಆಡಗಾರರಿಗೆ ಶುಭಾಶಯ ತಿಳಿಸಿದ್ದಾರೆ. ‘‘@ChennaiIPLನ ನನ್ನೆಲ್ಲ ಸ್ನೇಹಿತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಇವತ್ತು ನಾನು ನಿಮ್ಮೊಂದಿಗಿಲ್ಲದಿರುವುದು ನಂಬಲಾಗದಂಥ ಸ್ಥಿತಿ, ಆದರೆ ನನ್ನ ಶುಭಕಾಮನೆಗಳು ನಿಮ್ಮೊಂದಿಗಿವೆ. ಎಲ್ಲ ಋಣಾತ್ಮಕ ಭಾವನೆಗಳನ್ನು ನಿಮಗೆ ರವಾನಿಸುತ್ತಿದ್ದೇನೆ. ಕಪ್ ಗೆದ್ದುಕೊಂಡೇ ಬನ್ನಿ! #WhistlePodu, @ImRaina,’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ. ರೈನಾ ಅವರ ಅತ್ತೆ, ಮಾವ ಮತ್ತು ಇಬ್ಬರು ಕಸಿನ್​ಗಳ ಮೇಲೆ ಮಾರಣಾಂತಿಕ […]

ಸಿಎಸ್​ಕೆ ತಂಡಕ್ಕೆ ಟ್ವೀಟ್ ಮೂಲಕ ಶುಭ ಕೋರಿದ ಸುರೇಶ್ ರೈನಾ
ಸುರೇಶ್ ರೈನಾ-172* ಪಂದ್ಯಗಳು- ಚೆನ್ನೈ ಸೂಪರ್ ಕಿಂಗ್ಸ್​
ಅರುಣ್​ ಕುಮಾರ್​ ಬೆಳ್ಳಿ Edited By: ಸಾಧು ಶ್ರೀನಾಥ್​

Updated on: Sep 19, 2020 | 9:14 PM

ವೈಯಕ್ತಿಕ ಕಾರಣಗಳಿಂದಾಗಿ ಇಂಡಿಯನ್ ಪ್ರಿಮೀಯರ್ ಲೀಗ್​ನ 13ನೇ ಆವೃತಿಯೀಂದ ಹಿಂದೆ ಸರಿದಿರುವ ಸುರೇಶ್ ರೈನಾ ಟ್ವೀಟ್ ಮೂಲಕ ತನ್ನ ತಂಡದ ಆಡಗಾರರಿಗೆ ಶುಭಾಶಯ ತಿಳಿಸಿದ್ದಾರೆ.

‘‘@ChennaiIPLನ ನನ್ನೆಲ್ಲ ಸ್ನೇಹಿತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಇವತ್ತು ನಾನು ನಿಮ್ಮೊಂದಿಗಿಲ್ಲದಿರುವುದು ನಂಬಲಾಗದಂಥ ಸ್ಥಿತಿ, ಆದರೆ ನನ್ನ ಶುಭಕಾಮನೆಗಳು ನಿಮ್ಮೊಂದಿಗಿವೆ. ಎಲ್ಲ ಋಣಾತ್ಮಕ ಭಾವನೆಗಳನ್ನು ನಿಮಗೆ ರವಾನಿಸುತ್ತಿದ್ದೇನೆ. ಕಪ್ ಗೆದ್ದುಕೊಂಡೇ ಬನ್ನಿ! #WhistlePodu, @ImRaina,’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ರೈನಾ ಅವರ ಅತ್ತೆ, ಮಾವ ಮತ್ತು ಇಬ್ಬರು ಕಸಿನ್​ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದು, ಅವರ ಮಾವ ಮತ್ತು ಒಬ್ಬ ಕಸಿನ್ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆಯಿಂದ ವಿಚಲಿತರಾದ ರೈನಾ ದುಬೈನಿಂದ ವಾಪಸ್ಸಾದರು.

Published On - 7:20 pm, Sat, 19 September 20

ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Loading...
Unable to load recommendations.
Follow Us