ಮೊಣಕಾಲಿನ ಸಮಸ್ಯೆ ಮರುಕಳಿಸಿರುವುದರಿಂದ ರೋಜರ್ ಫೆಡರರ್ ಒಲಂಪಿಕ್ಸ್​ನಲ್ಲಿ ಭಾಗವಹಿಸುವುದಿಲ್ಲ

| Updated By: Skanda

Updated on: Jul 14, 2021 | 8:20 AM

ಈಗಿನ ದಿಗ್ಗಜ ಆಟಗಾರರಲ್ಲಿ ಕೇವಲ ಫೆಡರರ್ ಮಾತ್ರ ಒಲಂಪಿಕ್ಸ್​ನಿಂದ ಹಿಂದೆ ಸರಿದಿಲ್ಲ. ರಾಫೆಲ್ ನಡಾಲ್, ಸೆರೀನಾ ವಿಲಿಯಮ್ಸ್, ಡಾಮಿನಿಕ್ ಥೀಮ್ ಮೊದಲಾದವರೆಲ್ಲ ಭಾಗಹಿಸುತ್ತಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

ಮೊಣಕಾಲಿನ ಸಮಸ್ಯೆ ಮರುಕಳಿಸಿರುವುದರಿಂದ ರೋಜರ್ ಫೆಡರರ್ ಒಲಂಪಿಕ್ಸ್​ನಲ್ಲಿ ಭಾಗವಹಿಸುವುದಿಲ್ಲ
ರೋಜರ್ ಫೆಡರರ್
Follow us on

ಮೊಣಕಾಲಿನ ಗಾಯದಿಂದ ನರಳುತ್ತಿರುವ ವಿಶ್ವ ಟೆನಿಸ್​ನ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್, ಟೊಕಿಯೊ ಒಲಂಪಿಕ್ಸ್ ಬಾಗವಹಿಸುತ್ತಿಲ್ಲ. 20 ಗ್ರ್ಯಾಂಡ್​ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ ‘ಫೆಡೆಕ್ಸ್’ ಕಳೆದ ವಾರ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಹ್ಯುಬರ್ಟ್ ಹುಕ್ರಾಜ್​ಗೆ ನೇರ ಸೆಟ್​ಗಳಿಂದ ಸೋತಿದ್ದರು. 8ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಈ ಸ್ವಿಸ್ ಆಟಗಾರ ಒಮ್ಮೆಯೂ ಒಲಂಪಿಕ್ಸ್​ನಲ್ಲಿ ಸಿಂಗಲ್ಸ್ ಚಿನ್ನದ ಪದಕ ಗೆದ್ದಿಲ್ಲ. ಬಲ ಮೊಣಕಾಲಿನ ಸಮಸ್ಯೆಯಿಂದ ಪದೇಪದೆ ಬಳಳುತ್ತಿರುವ ಫೆಡರರ್ ಕಳೆದ ವರ್ಷ ಎರಡು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.

‘ಗ್ರಾಸ್ ಕೋರ್ಟ್ ಮೇಲೆ ಆಡುವಾಗ ದುರದೃಷ್ಟವಶಾತ್ ಮೊಣಕಾಲಿನ ಸಮಸ್ಯೆ ಮರುಕಳಿಸಿತು. ಒಲಂಪಿಕ್ಸ್​ನನಿಂದ ಹಿಂತೆಗೆಯದೆ ಬೇರೆ ದಾರಿಯಲಿಲ್ಲ ಅಂತ ನನಗೆ ಮನವರಿಕೆಯಾಗಿದೆ,’ ಎಂದು ಸಾಮಾಜಿಕ ಜಾಲತಾಣವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ಒಲಂಪಿಕ್ಸ್​ನಲ್ಲಿ ಟೆನಿಸ್ ಪಂದ್ಯಗಳು ಜುಲೈ 24ರಿಂದ ಆರಂಭವಾಗಲಿವೆ.

ಮುಂದಿನ ತಿಂಗಳು 40 ನೇ ವಯಸ್ಸಿಗೆ ಕಾಲಿಡುವ ಫೆಡರರ್ ವಿಂಬಲ್ಡನ್ ಟೂರ್ನಿ ಆಡಲು ಫಿಟ್​ ಆಗಿರುವುದಕ್ಕಾಗಿ ಫ್ರೆಂಚ್ ಓಪನ್​ನಲ್ಲಿ ನಾಲ್ಕನೇ ಸುತ್ತಿನ ನಂತರ ಟೂರ್ನಿಯಿಂದ ಹಿಂತೆಗೆದಿದ್ದರು. ವಿಂಬಲ್ಡನ್​ನಲ್ಲಿ ಅವರು, ಕ್ವಾರ್ಟರ್ ಪೈನಲ್​ವರೆಗೆ ಉತ್ತಮವಾಗೇ ಆಡಿದರಾದರೂ ಆ ಹಂತದಲ್ಲಿ ಪೋಲೆಂಡ್​ನ ಆಟಗಾರ ಹುಕ್ರಾಜ್​ಗೆ 6-3, 7-6 (7/4) ಮತ್ತು 6-0 ಸೆಟ್​ಗಳಿಂದ ಸೋತರು

ಪಂದ್ಯದ ನಂತರ ಮಾಧ್ಯಮದವರು, ಇದು ನಿಮ್ಮ ಕೊನೆಯ ವಿಂಬಲ್ಡನ್ ಟೂರ್ನಿಯೇ ಎಂದು ಕೇಳಿದ ಪ್ರಶ್ನೆಗೆ, ‘ಗೊತ್ತಿಲ್ಲ’ ಎಂದು ಚುಟುಕಾಗಿ ಉತ್ತರಿಸಿದ್ದರು. ಆದರೆ, ವಿಶ್ವದ ಮಾಜಿ ನಂಬರ್ ವನ್ ಆಟಗಾರ, ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಬೇಸಿಗೆ ನಂತರ ಎಟಿಪಿ ಟೂರ್​ಗೆ ವಾಪಸ್ಸಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದರು.

‘ಬೇಸಿಗೆ ನಂತರ ಟೂರ್​ ವಾಪಸ್ಸಾಗುವ ಉದ್ದೇಶವಿಟ್ಟುಕೊಂಡು ರಿಹ್ಯಾಬ್ ಶುರಮಾಡಿದ್ದೇನೆ, ನಾನಿರುವ ಸ್ಥಳದಿಂದಲೇ ಒಲಂಪಿಕ್ಸ್​ನಲ್ಲಿ ಭಾಗವಹಿಸಿರುವ ಸ್ವಿಸ್ ಆಟಗಾರರಿಗಾಗಿ ಚೀರ್ ಮಾಡುತ್ತೇನೆ,’ ಎಂದು ಫೆಡರರ್ ಹೇಳಿದ್ದಾರೆ.

ಈಗಿನ ದಿಗ್ಗಜ ಆಟಗಾರರಲ್ಲಿ ಕೇವಲ ಫೆಡರರ್ ಮಾತ್ರ ಒಲಂಪಿಕ್ಸ್​ನಿಂದ ಹಿಂದೆ ಸರಿದಿಲ್ಲ. ರಾಫೆಲ್ ನಡಾಲ್, ಸೆರೀನಾ ವಿಲಿಯಮ್ಸ್, ಡಾಮಿನಿಕ್ ಥೀಮ್ ಮೊದಲಾದವರೆಲ್ಲ ಭಾಗಹಿಸುತ್ತಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ರವಿವಾರದಂದು ವಿಂಬಲ್ಡನ್ ಕಿರೀಟ ಧರಿಸಿದ ನೊವಾಕ್ ಜೊಕೊವಿಚ್ ತಾನು ಭಾಗವಹಿಸುವ ಸಾಧ್ಯತೆ 50/50 ರಷ್ಟಿದೆ ಅಂತ ಹೇಳಿದ್ದಾರೆ.

ಕಳೆದ ವರ್ಷವೇ ನಡೆಯಬೇಕಿದ್ದ ಒಲಂಪಿಕ್ಸ್ ಕೊವಿಡ್​ ಪಿಡುಗಿನಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತು. ಆದರೆ, ಕ್ರೀಡಾಪಟಗಳು ಖಾಲಿ ಮೈದಾನಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಅನಿವಾರ್ಯತೆ ಏರ್ಪಟ್ಟಿದೆ. ಜಪಾನಿನಲ್ಲಿ ಕೋವಿಡ್​ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರೇಕ್ಷಕರಿಗೆ ಅವಕಾಶ ನೀಡದಿರಲು ಜಪಾನ ಸರ್ಕಾರ ನಿರ್ಧರಿಸಿದೆ.

ತಮ್ಮ ಉಜ್ವಲ ಕರೀಯರ್​ನಲ್ಲಿ ಎಲ್ಲ ಟೆನಿಸ್ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್​ಗೆ ಸಿಂಗಲ್ಸ್​ನಲ್ಲಿ ಒಲಂಪಿಕ್ಸ್ ಚಿನ್ನದ ಪದಕ ಇನ್ನೂ ಸಿಕ್ಕಿಲ್ಲ. 2000 ರ ಸಿಡ್ನಿ ಒಲಂಪಿಕ್ಸ್​ನಲ್ಲಿ ಅವರು ಸೆಮಿಫೈನಲ್​ನಲ್ಲಿ ಸೋತರು. ನಂತರ 2012ರಲ್ಲಿ ಫೈನಲ್ ತಲುಪಿದರಾದರೂ ಇಂಗ್ಲೆಂಡ್​ನ ಆಂಡಿ ಮುರ್ರೇ ಅವರಿಗೆ ಪರಾಭವಗೊಂಡರು. ಆದರೆ, 2008 ಬೀಜಿಂಗ್ ಒಲಂಪಿಕ್ಸ್​ನಲ್ಲಿ ಅವರು ಸ್ಟ್ಯಾನ್ ವಾರ್ವಿಂಕಾ ಅವರ ಜೊತೆ ಡಬಲ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ: ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಫೆಡರರ್ ಆಸೆಗೆ ಅಡ್ಡಿಯಾದ ಪೋಲೆಂಡ್​ನ ಹುರ್ಕಾಜ್