ಡಬ್ಲ್ಯೂಟಿಸಿ 2021: ಭಾರತ ಪಂದ್ಯ ಸೋತರೂ ವಿರಾಟ್ ಕೊಹ್ಲಿ ಕಿವೀಸ್ ನಾಯಕ ವಿಲಿಯಮ್ಸನ್​ರನ್ನು ತಬ್ಬಿಕೊಂಡು ಅಭಿನಂದಿಸಿದರು

ವಿರಾಟ್​ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮೈದಾನದಲ್ಲಿ ಕಟ್ಟಾ ಎದುರಾಳಿಗಳಾದರೂ ಪಂದ್ಯದ ಫಲಿತಾಂಶ ಏನೇ ಆಗಿರಲಿ, ಮೈದಾನದ ಹೊರಗಡೆ ಆತ್ಮೀಯ ಸ್ನೇಹಿತರು ಮತ್ತು ಪರಸ್ಪರ ಗೌರವಾದರಗಳನ್ನು ಇಟ್ಟುಕೊಂಡವರು. ಅವರಿಬ್ಬರ ನಡುವಿರುವ ಬಾಂಧವ್ಯ ಗುರುವಾರದಂದು ಸೌತಾಂಪ್ಟನ್​ನಲ್ಲಿ ಮತ್ತೊಮ್ಮೆ ಎಲ್ಲರಿಗೂ ಗೊತ್ತಾಯಿತು.

ಡಬ್ಲ್ಯೂಟಿಸಿ 2021: ಭಾರತ ಪಂದ್ಯ ಸೋತರೂ ವಿರಾಟ್ ಕೊಹ್ಲಿ ಕಿವೀಸ್ ನಾಯಕ ವಿಲಿಯಮ್ಸನ್​ರನ್ನು ತಬ್ಬಿಕೊಂಡು ಅಭಿನಂದಿಸಿದರು
ವಿರಾಟ್​ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jun 24, 2021 | 5:21 PM

ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ಡಬ್ಲ್ಯೂಟಿಸಿ) ಈಗ ಇತಿಹಾಸ. 144 ವರ್ಷಗಳ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಮೊದಲಬಾರಿಗೆ ವಿಶ್ವ ಚಾಂಪಿಯನ್​ಗಳನ್ನು ಆಯ್ಕೆ ಮಾಡಲು ಎರಡು ವರ್ಷಗಳ ಅವಧಿಗೆ ಜಾರಿಯಲ್ಲಿದ್ದ ಟೆಸ್ಟ್ ಕ್ರಿಕೆಟ್ ಸೈಕಲ್ ಗುರುವಾರದಂದು ಇಂಗ್ಲೆಂಡ್​ನ ಸೌತಾಂಪ್ಟನ್​ನ ರೋಸ್ ಬೋಲ್​ನಲ್ಲಿ ನ್ಯೂಜೆಲೆಂಡ್​ ತಂಡ ಭಾರತವನ್ನು 8 ವಿಕೆಟ್​ಗಳಿಂದ ಸೋಲಿಸುವುದರೊಂದಿಗೆ ಕೊನೆಗೊಂಡಿದೆ. ಮುಂದಿನ ಸೈಕಲ್​ ಅನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಪರಿಷತ್ (ಐಸಿಸಿ) ಇಷ್ಟರಲ್ಲೇ ಪ್ರಕಟಿಸಲಿದೆ. ಫೈನಲ್ ಪಂದ್ಯದಲ್ಲಿ ಸೆಣಸಿದ ಭಾರತದ ನಾಯಕ ವಿರಾಟ್​ ಕೊಹ್ಲಿ ಮತ್ತು ನ್ಯೂಜಿಲೆಂಡ್​ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೈದಾನದಲ್ಲಿ ಕಟ್ಟಾ ಎದುರಾಳಿಗಳಾದರೂ ಪಂದ್ಯದ ಫಲಿತಾಂಶ ಏನೇ ಆಗಿರಲಿ, ಮೈದಾನದ ಹೊರಗಡೆ ಆತ್ಮೀಯ ಸ್ನೇಹಿತರು ಮತ್ತು ಪರಸ್ಪರ ಗೌರವಾದರಗಳನ್ನು ಇಟ್ಟುಕೊಂಡವರು. ಅವರಿಬ್ಬರ ನಡುವಿರುವ ಬಾಂಧವ್ಯ ಗುರುವಾರದಂದು ಸೌತಾಂಪ್ಟನ್​ನಲ್ಲಿ ಮತ್ತೊಮ್ಮೆ ಎಲ್ಲರಿಗೂ ಗೊತ್ತಾಯಿತು.

ಮಳೆಯಿಂದಾಗಿ ಎರಡು ದಿನಗಳ ಆಟ ರದ್ದಾಗಿದ್ದರಿಂದ ಪಂದ್ಯಕ್ಕೆ ಮೊದಲು ಮಾಡಿಕೊಂಡಿದ್ದ ಒಡಂಬಡಿಕೆಯಂತೆ ಡಬ್ಲ್ಯೂಟಿಸಿ ಪಂದ್ಯವನ್ನು ರಿಸರ್ವ್ ದಿನಕ್ಕೆ ವಿಸ್ತರಿಸಲಾಯಿತು. ಜೂನ್ 23 ರಂದು ವಿಲಿಯಮ್ಸನ್ ಅವರ ಕಪ್ಪು ಟೋಪಿಧಾರಿಗಳ ಕಿವೀಸ್ ತಂಡ ನಿರೀಕ್ಷೆಗಿಂತ ಸುಲಭವಾಗಿ ಭಾರತವನ್ನು ಸೋಲಿಸಿತು. ಸೋಲಿನಿಂದ ಕೊಹ್ಲಿ ತೀವ್ರ ನಿರಾಶೆಗೊಳಗಾಗಿದ್ದರೂ ಗೆದ್ದ ವಿಲಿಯಮ್ಸನ್​ರನ್ನು ಆತ್ಮೀಯವಾಗಿ ತಬ್ಬಿಕೊಂಡು ಅಭಿನಂದಿಸಿದರು. ಕೊಹ್ಲಿ ಪಂದ್ಯ ಗೆದ್ದಿದ್ದರೂ ವಿಲಿಯಮ್ಸನ್​ ಇದನ್ನೇ ಮಾಡುತ್ತಿದ್ದರು. ಸೋಲು ಮತ್ತು ಗೆಲುವು ಯಾವುದೇ ಕ್ರೀಡೆಯ ಎರಡು ಮುಖಗಳು, ಅದಕ್ಕೆ ಪೂರಕವಾಗಿರೋದು ಆಟಗಾರರ ಕ್ರೀಡಾ ಮನೋಭಾವ. ಅದನ್ನು ಈ ಮಹಾನ್ ಬ್ಯಾಟ್ಸ್​ಮನ್​ಗಳು ಪ್ರದರ್ಶಿಸಿದರು.

ನೈರೋಬಿ 2002 ರಲ್ಲಿ ನಡೆದ ನಾಕೌಟ್​ ಟ್ರೋಫಿ ಗೆದ್ದ ನಂತರ ನ್ಯೂಜಿಲೆಂಡ್ ಐಸಿಸಿ ಆಯೋಜಿಸುವ ಯಾವುದೇ ಪ್ರಮುಖ ಸರಣ ಗೆದ್ದಿರಲಿಲ್ಲ. ಡಬ್ಲ್ಯೂಟಿಸಿ ಪಂದ್ಯದಲ್ಲಿ 49 ಮತ್ತು ಅಜೇಯ 52 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿಲಿಯಮ್ಸನ್​ ಟೀಮಿನ ಸದಸ್ಯರು ಅತ್ಯಂತ ಮಹತ್ವಪೂರ್ಣ ಘಟ್ಟದಲ್ಲಿ ಅಮಘ ಪ್ರದರ್ಶನ ನೀಡಿದರು ಎಂದು ಹೇಳಿದರು.

‘ಭಾವನೆಗಳನ್ನು ಅದುಮಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಬ್ಲ್ಯೂಟಿಸಿ ಗೆದ್ದಿರೋದು ಬಹಳ ಸಂತೋಷಕರ ಮತ್ತು ವಿಶೇಷ ಅನುಭವ. ವಿರಾಟ್ ಮತ್ತು ಅವರ ತಂಡಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ನಮ್ಮ ಆಟಗಾರರು ನಂಬಲಸದಳ ಛಲಗಾರಿಕೆ ಪ್ರದರ್ಶಿಸಿದರು. ಮೊದಲ ಬಾರಿಗೆ ನಾವು ವಿಶ್ವ ಚಾಂಪಿಯನ್ ಕಿರೀಟ ಧರಿಸಿದ್ದೇವೆ. ತಂಡದ ಎಲ್ಲ 22 ಸದಸ್ಯರ ಕೊಡುಗೆ ಅತ್ಯಮೂಲ್ಯವಾದದ್ದು. ಈ ಗೆಲುವು ನಮ್ಮ ಹೃದಯ ಮತ್ತು ಮನಸ್ಸುಗಳಲ್ಲಿ ಶಾಶ್ವತವಾಗಿ ಉಳಿಯಲಿದೆ,’ ಎಂದು ಪಂದ್ಯದ ನಂತರ ವಿಲಿಯಮ್ಸನ್ ಹೇಳಿದರು.

ಮೊದಲ ಇನ್ನಿಂಗ್ಸ್​ನಲ್ಲಿ 44 ರನ್​ ಗಳಿಸಿ, ಮಹತ್ವಪೂರ್ಣ ಎರಡನೇ ಇನ್ನಿಂಗ್ಸ್​ನಲ್ಲಿ ಟೀಮಿಗೆ ಕಾಂಟ್ರಿಬ್ಯೂಟ್​ ಮಾಡಲು ವಿಫಲರಾದ ಕೊಹ್ಲಿ, ವಿಲಿಯಮ್ಸನ್ ಮತ್ತು ಅವರ ತಂಡದ ಸದದ್ಯರು ಪ್ರದರ್ಶಿಸಿದ ಛಲ ಮತ್ತು ಸ್ಥಿರತೆಯನ್ನು ಪ್ರಶಂಸಿದರಲ್ಲದೆ ನ್ಯೂಜಿಲೆಂಡ್ ಪಂದ್ಯ ಆರಂಭವಾದ ಕ್ಷಣದಿಂದ ತಮ್ಮ ತಂಡದದ ಮೇಲೆ ಒತ್ತಡ ಹೇರಿತು ಎಂದು ಹೇಳಿದರು.

‘ಮೊಟ್ಟಮೊದಲನೆಯದಾಗಿ, ಕೇನ್ ಮತ್ತು ಅವರ ತಂಡದ ಸದಸ್ಯರಿಗೆ ಮನಃಪೂರ್ವಕ ಅಭಿನಂದನೆಗಳು. ಅವರು ಅಮೋಘ ಛಲಗಾರಿಕೆ ಮತ್ತು ಸ್ಥಿರತೆಯನ್ನು ಪ್ರದರ್ಶಿಸಿ ಕೇವಲ ಮೂರು ದಿನಗಳಲ್ಲಿ ಪಂದ್ಯವನ್ನು ಗೆದ್ದರು. ಟೆಸ್ಟ್​ ಪಂದ್ಯದುದ್ದಕ್ಕೂ ಅವರು ನಮ್ಮನ್ನು ಒತ್ತಡದಲ್ಲಿಟ್ಟಿದ್ದರು ಮತ್ತು ಮೈದಾನದಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದರು,’ ಎಂದು ಕೊಹ್ಲಿ ಹೇಳಿದರು.

ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 170 ರನ್​ ಮೊತ್ತಕ್ಕೆ ತನ್ನೆಲ್ಲ ವಿಕೆಟ್​ ಕಳೆದುಕೊಂಡ ಭಾರತ ಗೆಲುವಿಗೆ ನ್ಯೂಜಿಲೆಂಡ್​ ಎದುರು 139 ರನ್​ಗಳ ಗುರಿಯಿಟ್ಟರು. ಕಡಿಮೆ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭ ಆಟಗರರಾದ ಟಾಮ್ ಲಾಥಮ್ ಮತ್ತು ಡೆವೊನ್ ಕಾನ್ವೇ ಅವರ ವಿಕೆಟ್ ಕಳೆದುಕೊಂಡರೂ ವಿಲಿಯಮ್ಸನ್ ಅವರ ಅಜೇಯ ಅರ್ಧ ಶತಕ ಮತ್ತು ಅನುಭವಿ ಆಟಗಾರ ರಾಸ್​ ಟೇಲರ್ ಅವರ ಅಜೇಯ 47 ರನ್​ಗಳ ನೆರವಿನನಿಂದ 8 ವಿಕೆಟ್​ಗಳ ಸುಲಭ ಜಯ ಸಾಧಿಸಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿದರು.

ಇದನ್ನೂ ಓದಿ: WTC Final : ಉತ್ತಮ ಆಟವಾಡುವ ಮನಸ್ಥಿತಿಯುಳ್ಳ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು; ಸೋಲಿನ ಬೆನ್ನಲ್ಲೇ ಕೊಹ್ಲಿ ಹೀಗಂದಿದ್ದು ಯಾರಿಗೆ?

Published On - 4:42 pm, Thu, 24 June 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು