AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

French Open 2021: ನವೋಮಿ ಒಸಾಕಾ ನಂತರ, ಗ್ರ್ಯಾಂಡ್ ಸ್ಲ್ಯಾಮ್‌ನಿಂದ ಹಿಂದೆ ಸರಿದ ರೋಜರ್ ಫೆಡರರ್!

French Open 2021: ನನ್ನ ತಂಡದೊಂದಿಗೆ ಚರ್ಚಿಸಿದ ನಂತರ, ನಾನು ಇಂದು ಫ್ರೆಂಚ್ ಓಪನ್‌ನಿಂದ ಹಿಂದೆ ಸರಿಯಬೇಕು ಎಂದು ನಿರ್ಧರಿಸಿದ್ದೇನೆ - ರೋಜರ್ ಫೆಡರರ್

French Open 2021: ನವೋಮಿ ಒಸಾಕಾ ನಂತರ, ಗ್ರ್ಯಾಂಡ್ ಸ್ಲ್ಯಾಮ್‌ನಿಂದ ಹಿಂದೆ ಸರಿದ ರೋಜರ್ ಫೆಡರರ್!
ರೋಜರ್ ಫೆಡರರ್
ಪೃಥ್ವಿಶಂಕರ
| Updated By: Skanda|

Updated on: Jun 07, 2021 | 8:54 AM

Share

ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್, ಟೆನಿಸ್ ಪ್ರಪಂಚದ ಅನಭಿಶಕ್ತ ದೊರೆ. ಈಗ ವರ್ಷದ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯ ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಗ್ರ್ಯಾಂಡ್ ಸ್ಲ್ಯಾಮ್ ಈ ವಿಚಾರವನ್ನು ಟ್ವೀಟ್ ಮೂಲಕ ವಿವರಿಸಿದೆ. ಫೆಡರರ್ ನಾಲ್ಕನೇ ಸುತ್ತಿಗೂ ಮೊದಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾಲ್ಕನೇ ಸುತ್ತಿನಲ್ಲಿ, ಅವರು ಇಟಲಿಯ ಮ್ಯಾಟಿಯೊ ಬೆರೆಟ್ಟಿನಿಯನ್ನು ಎದುರಿಸಬೇಕಿತ್ತು ಆದರೆ ಈಗ ಈ ಆಟಗಾರನಿಗೆ ವಾಕ್‌ಓವರ್ ಸಿಗುತ್ತಿದೆ. ಫೆಡರರ್ ತನ್ನ ಮೂರನೇ ಸುತ್ತಿನ ಪಂದ್ಯವನ್ನು ಗೆದ್ದ ನಂತರ, ಪತ್ರಿಕಾಗೋಷ್ಠಿಯಲ್ಲಿ ವರ್ಷದ ಮಿಡ್ವೇಯ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಅನ್ನು ಬಿಡಬಹುದು ಎಂದು ಸೂಚನೆ ನೀಡಿದ್ದಾರೆ. ಫೆಡರರ್ಗೂ ಮೊದಲು, ಜಪಾನ್‌ನ ಪ್ರಸಿದ್ಧ ಮಹಿಳಾ ಆಟಗಾರ್ತಿ ನವೋಮಿ ಒಸಾಕಾ ಕೂಡ ಪಂದ್ಯಾವಳಿಯನ್ನು ಮಿಡ್ವೇಯಿಂದ ತೊರೆದಿದ್ದರು. ಫೆಡರರ್ ಕೂಡ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪಂದ್ಯದ ನಂತರ ಫೆಡರರ್, ನಾನು ಮುಂದಿನ ಪಂದ್ಯವನ್ನು ಆಡಲು ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ಆಟವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಾನು ನಿರ್ಧರಿಸಬೇಕು. ನನ್ನ ಆದ್ಯತೆ ವಿಂಬಲ್ಡನ್ ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ, ಅವರು ತನ್ನ ಮೊಣಕಾಲಿನ ಮೇಲೆ ಹೆಚ್ಚು ಒತ್ತಡ ಹೇರಲು ಬಯಸುತ್ತಿಲ್ಲ ಮತ್ತು ಈ ಸಮಯದಲ್ಲಿ ವಿಶ್ರಾಂತಿ ಪಡೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಫೆಡರರ್ ಕಳೆದ ವರ್ಷ ಫೆಬ್ರವರಿ ಮತ್ತು ಮೇ ತಿಂಗಳಲ್ಲಿ ಎರಡು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಅವರು 2020 ರ ಆಸ್ಟ್ರೇಲಿಯನ್ ಓಪನ್ ನಂತರ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಪ್ರವೇಶಿಸಿದ್ದರು.

ತಂಡದೊಂದಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಫೆಡರರ್ ಅವರು ತಮ್ಮ ತಂಡದೊಂದಿಗೆ ಚರ್ಚಿಸಿ ನಂತರ ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದಿದ್ದಾಗಿ ಟ್ವೀಟ್ ಮಾಡಿದ್ದಾರೆ. ನನ್ನ ತಂಡದೊಂದಿಗೆ ಚರ್ಚಿಸಿದ ನಂತರ, ನಾನು ಇಂದು ಫ್ರೆಂಚ್ ಓಪನ್‌ನಿಂದ ಹಿಂದೆ ಸರಿಯಬೇಕು ಎಂದು ನಿರ್ಧರಿಸಿದ್ದೇನೆ. ಎರಡು ಮೊಣಕಾಲು ಶಸ್ತ್ರಚಿಕಿತ್ಸೆಗಳ ನಂತರ ಮತ್ತು ಒಂದು ವರ್ಷದ ಅಭ್ಯಾಸದ ನಂತರ, ನಾನು ನನ್ನ ಫಿಟ್ನೆಸ್​ ಅನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮೂರು ಪಂದ್ಯಗಳನ್ನು ಆಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ಮೂರನೇ ಸುತ್ತಿನಲ್ಲಿ ಶ್ರಮಿಸಿದ್ದರು ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಮೂರನೇ ಸುತ್ತನ್ನು ಗೆಲ್ಲಲು ರೋಜರ್ ಫೆಡರರ್ ನಾಲ್ಕು ಸೆಟ್‌ಗಳಿಗೆ ತೀವ್ರವಾಗಿ ಬೆವರು ಹರಿಸಬೇಕಾಯಿತು. 2004 ರ ನಂತರ ಫೆಡರರ್ ಮೊದಲ ಬಾರಿಗೆ ನಾಲ್ಕನೇ ಸುತ್ತಿಗೆ ಪ್ರವೇಶಿಸುವುದಿಲ್ಲ ಎಂದು ತೋರುತ್ತಿದ್ದ ಸಮಯವಿತ್ತು, ಆದರೆ ಅಂತಿಮವಾಗಿ ಅವರು 59 ನೇ ಶ್ರೇಯಾಂಕದ ಡೊಮಿನಿಕ್ ಕೊಪ್ಫರ್ ಅವರನ್ನು 7-6 (5), 6-7 (3), 7-6ರಿಂದ ಸೋಲಿಸಿದರು (4), 7-5

ಇದನ್ನೂ ಓದಿ: ಟೆನಿಸ್ | ಆಸ್ಟ್ರೇಲಿಯನ್ ಓಪನ್​ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ ರೋಜರ್ ಫೆಡರರ್ 

ಐಪಿಎಲ್​ಗಿಂತ ಪಾಕಿಸ್ತಾನ ಕ್ರಿಕೆಟ್ ಲೀಗ್​ನಲ್ಲಿ ವೇಗದ ಬೌಲರ್‌ಗಳ ಗುಣಮಟ್ಟ ಹೆಚ್ಚಿರುತ್ತದೆ; ಫಾಫ್ ಡು ಪ್ಲೆಸಿಸ್