ಟೀಮ್ ಇಂಡಿಯಾಗೆ ಸಂತಸದ ಸುದ್ದಿ; ರೋಹಿತ್ ಫಿಟ್ ಎಂದ ಕ್ರಿಕೆಟ್ ಅಕಾಡೆಮಿ ವೈದ್ಯರು

ಆಸ್ಟ್ರೇಲಿಯಾದ ಅಧಿಕಾರಿಗಳು ಶರ್ಮಾಗೆ ಎರಡು ವಾರಗಳ ಕ್ವಾರಂಟೈನ್ ಕಡ್ಡಾಯವೆಂದು ಹೇಳಿದರೆ, ಡಿ.26 ರಿಂದ ಶುರುವಾಗುವ ಬಾಕ್ಸಿಂಗ್ ಟೆಸ್ಟ್​ನಲ್ಲಿ ಅವರು ಆಡುವುದು ಸಹ ಖಚಿತವಿಲ್ಲ.

ಟೀಮ್ ಇಂಡಿಯಾಗೆ ಸಂತಸದ ಸುದ್ದಿ; ರೋಹಿತ್ ಫಿಟ್ ಎಂದ ಕ್ರಿಕೆಟ್ ಅಕಾಡೆಮಿ ವೈದ್ಯರು
ರೋಹಿತ್​ ಶರ್ಮಾ ಎರಡು ವಾರ ಸಿಡ್ನಿಯಲ್ಲಿ ಕ್ವಾರಂಟೈನ್​ ನಲ್ಲಿ​ ಇರಲಿದ್ದಾರೆ. ಕ್ವಾರಂಟೈನ್​​ ಮುಗಿದ ಮೇಲೆ ಭಾರತದ ವೈದ್ಯಕೀಯ ಸಿಬ್ಬಂದಿ ಅವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಈ ಪರೀಕ್ಷೆಯಲ್ಲಿ ಪಾಸ್​ ಆದ ನಂತರವೇ ರೋಹಿತ್​ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಹೀಗಾಗಿ, ಎರಡು ವಾರ ಕ್ವಾರಂಟೈನ್​ ಹಾಗೂ ಒಂದು ದಿನ ಪರೀಕ್ಷೆಗೆ ಒಳಪಡೋದು ಸೇರಿದರೆ ರೋಹಿತ್​ 15 ದಿನ ಅಲಭ್ಯರಾಗಿರುತ್ತಾರೆ.
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 11, 2020 | 4:59 PM

ಬೆಂಗಳೂರು: ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರ ಫಿಟ್​ಸೆನ್ ಕುರಿತ ಚಿಂತೆ ಕೊನೆಗೂ ದೂರವಾಗಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯ ವೈದ್ಯಕೀಯ ತಂಡವು ರೊಹಿತ್ ಫಿಟ್​ನೆಸ್ ಟೆಸ್ಟ್​ನಲ್ಲಿ ಪಾಸಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಇಂದು (ಡಿ.11) ಸಂದೇಶ ರವಾನಿಸಿದೆ.

ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ಇದು ಭಾರಿ ಸಂತಸದ ವಿಷಯ. ರೋಹಿತ್ ಫಿಟ್​ನೆಸ್ ಬಗ್ಗೆ ಕಳೆದೊಂದು ತಿಂಗಳಿನಿಂದ ಚರ್ಚೆಗಳಾಗುತ್ತಲೇ ಇತ್ತು. ಕೆಲ ವಿವಾದಗಳು ಕೂಡ ಸೃಷ್ಟಿಯಾಗಿದ್ದವು. ರೋಹಿತ್ ಯಾಕೆ ಟೀಮ್​ನ ಭಾಗವಾಗಿಲ್ಲ ಅಂತ ನನಗೆ ಗೊತ್ತೇ ಇಲ್ಲವೆಂದು ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಹೇಳಿದ್ದರಿಂದ ಬಿಸಿಸಿಐ ಇಕ್ಕಟ್ಟಿಗೆ ಸಿಲುಕಿತ್ತು.

ಶರ್ಮಗೆ ಫಿಟ್​ನೆಸ್ ಸರ್ಟಿಫಿಕೇಟ್ ಸಿಕ್ಕಿರುವುದರಿಂದ ಇಂಥ ವಿವಾದಗಳಿಗೆ ಇದೀಗ ತೆರೆ ಬಿದ್ದಂತೆ ಆಗಿದೆ. ಅಡಿಲೇಡ್​ನಲ್ಲಿ ಡಿ.17ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್​ ನಂತರ ನಾಯಕ ವಿರಾಟ್​ ಕೊಹ್ಲಿ ಸ್ವದೇಶಕ್ಕೆ ವಾಪಸ್ಸಾಗಲಿರುವುದರಿಂದ ಭಾರತದ ಬ್ಯಾಟಿಂಗ್ ದುರ್ಬಲಗೊಳ್ಳುವುದು ಖಾತ್ರಿಯಾಗಿದೆ. ಭಾರತ ತಂಡವನ್ನು ಶರ್ಮಾ ಸೇರಿಕೊಳ್ಳಲಿದ್ದಾರೋ ಇಲ್ಲವೋ ಅನ್ನೋದು ಖಚಿತವಾಗಿಲ್ಲ. ಆದರೆ ಶರ್ಮಾ ಫಿಟ್​ನೆಸ್ ವಿಚಾರವು ಭಾರತೀಯ ಶಿಬಿರದಲ್ಲಿ ಆತಂಕದ ಛಾಯೆ ಮೂಡಿಸಿದ್ದು ನಿಜ.

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶರ್ಮಾರನ್ನು ಆಸ್ಟ್ರೇಲಿಯಾಗೆ ಕಳಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅವರನ್ನು ಇವತ್ತೇ ಕಳಿಸಿದರೂ ಕನಿಷ್ಠ ಒಂದು ವಾರ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕು. ಹಾಗಾಗಿ, ಮೊದಲ ಟೆಸ್ಟ್​ನಲ್ಲಿ ಅವರು ಭಾಗವಹಿಸುವುದು ಸಾಧ್ಯವೇ ಇಲ್ಲ. ಒಂದು ಪಕ್ಷ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಎರಡು ವಾರಗಳ ಕ್ವಾರಂಟೈನ್ ಕಡ್ಡಾಯವೆಂದು ಹೇಳಿದರೆ, ಡಿ.26 ರಿಂದ ಶುರುವಾಗುವ ಬಾಕ್ಸಿಂಗ್ ಟೆಸ್ಟ್​ನಲ್ಲಿ ಅವರು ಆಡುವುದು ಸಹ ಖಚಿತವಿಲ್ಲ.

ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಫಿಟ್​ ಆಗಿದ್ದಾರೆಂದು ಎನ್​ಸಿಎ ಮೆಡಿಕಲ್ ಟೀಮ್ ಬಿಸಿಸಿಗೆ ತಿಳಿಸಿರುವವುದರಿಂದ ಅದು ಈ ವಿಷಯದಲ್ಲಿ ಎಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತದೋ ಟೀಮ್ ಇಂಡಿಯಾಗೆ ಅಷ್ಟು ಒಳ್ಳೆಯದು.

ಐಪಿಎಲ್​ನಲ್ಲಿ ಸ್ನಾಯುಸೆಳೆತದಿಂದಾಗಿ ಗಾಯಾಳುವಾದರು. ಭಾರತ ತಂಡದ ಆಸ್ಟ್ರೇಲಿಯ ಪ್ರವಾಸದಲ್ಲಿ ನಿಗದಿಯಾಗಿದ್ದ ಸೀಮಿತ ಓವರ್​ಗಳ ಸರಣಿಗೆ ಅವರನ್ನು ಆರಿಸಿರಲಿಲ್ಲ. ಗಾಯದಿಂದ ಶರ್ಮಾ ಚೇತರಿಸಿಕೊಳ್ಳುವವರೆಗೆ ಬೆಂಗಳೂರಿನ ಎನ್​ಸಿಎನಲ್ಲಿ ವಿಶ್ರಾಂತಿ ಮತ್ತು ಅಗತ್ಯ ಚಿಕಿತ್ಸೆ ಪಡೆಯುವಂತೆ ಬಿಸಿಸಿಐ ಸೂಚಿಸಿತ್ತು. ನಂತರದ ದಿನಗಳಲ್ಲಿ ಶರ್ಮಾ ಅವರನ್ನು ಟೆಸ್ಟ್​ ಆಡಲಿರುವ ತಂಡದಲ್ಲಿ ಸ್ಥಾನ ನೀಡಿದ ಬಗ್ಗೆ ಹೇಳಿಕೆ ನೀಡಿತ್ತು.

ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯರಂಥ ಸೂಪರ್ ಸ್ಟಾರ್​ಗಳ ಅವಶ್ಯಕತೆಯಿದೆ: ಶೇನ್ ವಾರ್ನ್