Chess: ಎದುರಾಳಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ರಷ್ಯಾದ ಚೆಸ್ ಆಟಗಾರ್ತಿ ಅಮಾನತು, ವಿಡಿಯೋ
ಆಟಗಳಲ್ಲಿ ನಿಜವಾದ ಸಾಮರ್ಥ್ಯದಿಂದ ಆಟವಾಡಿ ಎದುರಾಳಿಗಳನ್ನು ಸೋಲಿಸಿ ಸಂಭ್ರಮಿಸಬೇಕು. ಅವರನ್ನು ದೈಹಿಕವಾಗಿ ಹಾನಿ ಮಾಡುವ ಮೂಲಕವಾದರೆ ಅದು ಗೆಲುವೇ ಅಲ್ಲ. ಆದರೆ ಕೆಲವರು ತಮಗೆ ಸಾಮರ್ಥ್ಯವಿಲ್ಲದಿರುವಾಗ ಅಡ್ಡ ದಾರಿಯ ಮೂಲಕ ಹೋಗಲು ನಿರ್ಧರಿಸುತ್ತಾರೆ. ಅಂಥದ್ದೇ ಒಂದು ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ದಗೆಸ್ತಾನ್ ಗಣರಾಜ್ಯದ 40 ವರ್ಷದ ಚೆಸ್ ಆಟಗಾರ್ತಿ ಅಮೀನಾ ಅಬಕರೋವಾ ಪ್ರತಿಸ್ಪರ್ಧಿಗೆ ವಿಷ ಹಾಕಲು ಯತ್ನಿಸಿದ್ದರು.
ಸಾಮರ್ಥ್ಯದಿಂದ ಆಟವನ್ನು ಗೆಲ್ಲುವ ಬದಲು ಬೇರೆಯವರ ಜೀವಕ್ಕೆ ಕುತ್ತು ತಂದಿಟ್ಟು ಆಟವಾಡಲು ಮುಂದಾಗಿದ್ದ ರಷ್ಯಾದ ಚೆಸ್ ಆಟಗಾರ್ತಿ ಅಮೀನಾ ಅಬಕರೋವಾ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಅಷ್ಟೇ ಅಲ್ಲ ರಷ್ಯಾದ ಚೆಸ್ ಫೆಡರೇಷನ್ ಆಕೆಯನ್ನು ಅಮಾನತುಗೊಳಿಸಿದೆ. ಪಂದ್ಯದ ವೇಳೆ ಪ್ರತಿಸ್ಪರ್ಧಿಯನ್ನು ವಿಷ ಹಾಕಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ. ಆಟಗಾರ್ತಿಯನ್ನು ಚೆಸ್ ಪಂದ್ಯಾವಳಿಯಿಂದ ಆಜೀವ ಪರ್ಯಂತ ದೂರವಿಡುವ ಕುರಿತು ಚಿಂತನೆ ನಡೆಯುತ್ತಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 40 ವರ್ಷದ ಅಮಿನಾ ಅಬಕರೋವಾ ತನ್ನ ಎದುರಾಳಿ ಉಮೈಗಾನತ್ ಒಸ್ಮನೋವಾಗೆ ವಿಷ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದ ಬಳಿಕ ಅಬಕರೋವಾರನ್ನು ಬಂಧಿಸಲಾಯಿತು. ನನಗೆ ಮೊದಲೇ ಉಸಿರಾಟದ ತೊಂದರೆ ಇತ್ತು, ಮತ್ತೊಬ್ಬ ಆಟಗಾರರು ಕೂಡ ಅಸ್ವಸ್ಥರಾಗಿದ್ದರು. ಬಾಯಲ್ಲಿ ಕಬ್ಬಿಣದ ರುಚಿ ಇತ್ತು.
ಸಿಸಿಟಿವಿ ದೃಶ್ಯಾವಳಿಯಲ್ಲಿ ಘಟನೆ ನಡೆದಿದೆ. ಇದರಲ್ಲಿ ಅಬಕರೋವಾ ಪಂದ್ಯಕ್ಕೆ ಕೇವಲ 20 ನಿಮಿಷಗಳ ಮೊದಲು ಚೆಸ್ ಬೋರ್ಡ್ ಬಳಿ ಹೋದರು. ಕ್ಯಾಮೆರಾಗಳು ಆನ್ ಆಗಿವೆಯೇ ಎಂದು ಅವರು ಮೊದಲು ಕೇಳಿದ್ದರು. ಆದರೆ ಅದು ಸರಿ ಇಲ್ಲ ಎಂದು ಹೇಳಲಾಗಿತ್ತು. ನಂತರ ಚೆಸ್ ಬೋರ್ಡ್ ಮೇಲೆ ಮರ್ಕ್ಯೂರಿ ರೀತಿಯ ವಿಷಯವನ್ನು ಲೇಪಿಸಿದ್ದರು. ಆದರೆ ಆಕೆಯ ದುರಾದೃಷ್ಟ ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಮತ್ತಷ್ಟು ಓದಿ: ಲೆಜಿಸ್ಲೇಚರ್ ಕಪ್-2024 ಚೆಸ್ ಟೂರ್ನಿ: ಜೇವರ್ಗಿ ಶಾಸಕ ಅಜಯ್ ಸಿಂಗ್ ಚಾಂಪಿಯನ್, ನಗದು ಬಹುಮಾನ ಸಿಕ್ಕಿದ್ದೆಷ್ಟು ಗೊತ್ತಾ?
ಆರೋಪಿ ಅಮಿನಾ ಅಬಕರೋವಾ ಅವರನ್ನು ಈಗ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಆಕೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೊವ್ ಅವರು ಘಟನೆಯ ತನಿಖೆಗಾಗಿ ಅಬಕರೋವಾ ಅವರನ್ನು ರಷ್ಯಾದ ಚೆಸ್ ಸ್ಪರ್ಧೆಗಳಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅವರು ಆಜೀವ ನಿಷೇಧವನ್ನು ಎದುರಿಸಬೇಕಾಗಬಹುದು.
Poisoning incident in Russian 🇷🇺 Chess. Statement by the Chess Federation of Russia, video from Karjakin’s Telegram: pic.twitter.com/5ePqEUMAI1
— Peter Heine Nielsen (@PHChess) August 7, 2024
ವಿಚಾರಣೆಯ ಬಳಿಕ ಒಸ್ಮಾನೋವಾ ಬಗ್ಗೆ ವೈಯಕ್ತಿಕ ಹಗೆತನದಿಂದಾಗಿ ವಿಷ ಹಾಕಿದ್ದೇನೆ ಎಂದು ಅಬಕರೋವಾ ಒಪ್ಪಿಕೊಂಡಿದ್ದಾರೆ. ತನ್ನ ಉದ್ದೇಶ ಉಸ್ಮಾನೋವಾ ಕೊಲೆ ಮಾಡುವುದು ಮಾಡುವುದು ಅಲ್ಲ ಆಕೆಯನ್ನು ಹೆದರಿಸುವುದು ಎಂದು ಅವಳು ಹೇಳಿಕೊಂಡಿದ್ದಾಳೆ.
ಅಬಕರೋವಾ ಅವರ ಕ್ರಮಗಳ ಬಗ್ಗೆ ದಗೆಸ್ತಾನದ ಕ್ರೀಡಾ ಸಚಿವ ಸಾಜಿದಾ ಸಾಜಿಡೋವಾ ಆಘಾತ ವ್ಯಕ್ತಪಡಿಸಿದರು. ಅದು ಹಾಜರಿದ್ದ ಎಲ್ಲರ ಜೀವಕ್ಕೆ ಕುತ್ತು ತರುವ ಆಲೋಚನೆ ಎಂದಿದ್ದಾರೆ.
ಕ್ರೀಡೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ