Paris Olympics 2024: ಭಾರತ ಹಾಕಿ ತಂಡದ ಕಂಚಿನ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ
Paris Olympics 2024: ಭಾರತ ಹಾಕಿ ತಂಡದ ಸಾಧನೆಗೆ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದ್ದು, ದೇಶದ ಗಣ್ಯರು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ದೇಶದ ಪ್ರಧಾನಿ ಮೋದಿ ಕೂಡ ಹಾಕಿ ತಂಡದ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದು, ಇದು ಭಾರತಕ್ಕೆ ಸಂದ ಜಯ ಎಂದು ಟ್ವೀಟ್ ಮಾಡಿ, ತಂಡವನ್ನು ಹಾಡಿಹೊಗಳಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೊನೆಗೂ ಭಾರತದ ಖಾತೆಗೆ ನಾಲ್ಕನೇ ಪದಕ ಬಂದು ಬಿದ್ದಿದೆ. ಕಂಚಿನ ಪದಕದ ಪಂದ್ಯದಲ್ಲಿ ಭಾರತ ಹಾಕಿ ತಂಡ, ಸ್ಪೇನ್ ತಂಡವನ್ನು 2-1 ಅಂತರದಿಂದ ಸೋಲಿಸುವ ಮೂಲಕ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಯನ್ನೂ ಮಾಡಿತು. ಇದೀಗ ಭಾರತ ಹಾಕಿ ತಂಡದ ಸಾಧನೆಗೆ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದ್ದು, ದೇಶದ ಗಣ್ಯರು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ದೇಶದ ಪ್ರಧಾನಿ ಮೋದಿ ಕೂಡ ಹಾಕಿ ತಂಡದ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದು, ಇದು ಭಾರತಕ್ಕೆ ಸಂದ ಜಯ ಎಂದು ಟ್ವೀಟ್ ಮಾಡಿ, ತಂಡವನ್ನು ಹಾಡಿಹೊಗಳಿದ್ದಾರೆ.
ಮುಂದಿನ ಪೀಳಿಗೆ ನೆನಪಿಸಿಕೊಳ್ಳಲಿದೆ; ಮೋದಿ
ತಮ್ಮ ಎಕ್ಸ್ ಖಾತೆಯಲ್ಲಿ ಭಾರತ ಹಾಕಿ ತಂಡದ ಸಾಧನೆಯನ್ನು ಶ್ಲಾಘಿಸಿರುವ ಪಿಎಂ ಮೋದಿ, “ಭಾರತದ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕವನ್ನು ಗೆದ್ದಿದೆ! ಇದು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಇದು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕವಾಗಿದೆ. ಈ ಯಶಸ್ಸು ಅವರ ಕೌಶಲ್ಯ, ಪರಿಶ್ರಮ ಮತ್ತು ಸಾಂಘಿಕ ಮನೋಭಾವದ ವಿಜಯವಾಗಿದೆ. ತಂಡವು ಅಪಾರ ತಾಳ್ಮೆ ಮತ್ತು ದೃಢತೆಯನ್ನು ತೋರಿಸಿದೆ. ಪ್ರತಿಯೊಬ್ಬ ಭಾರತೀಯನು ಹಾಕಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾನೆ. ಈ ಸಾಧನೆಯು ನಮ್ಮ ದೇಶದ ಯುವಕರಲ್ಲಿ ಆಟವನ್ನು ಇನ್ನಷ್ಟು ಜನಪ್ರಿಯಗೊಳಿಸಲಿದೆ’’ ಎಂದಿದ್ದಾರೆ.
A feat that will be cherished for generations to come!
The Indian Hockey team shines bright at the Olympics, bringing home the Bronze Medal! This is even more special because it is their second consecutive Medal at the Olympics.
Their success is a triumph of skill,…
— Narendra Modi (@narendramodi) August 8, 2024
ಭಾರತಕ್ಕೆ ಹೆಮ್ಮೆ ತಂದಿದೆ: ದ್ರೌಪದಿ ಮುರ್ಮು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಮ್ಮ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಐದು ದಶಕಗಳ ನಂತರ, ಭಾರತ ಸತತ ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದೆ. ಭಾರತೀಯ ಹಾಕಿಯ ಪುನಶ್ಚೇತನಕ್ಕಾಗಿ ತಂಡವು ಪ್ರಶಂಸೆಗೆ ಅರ್ಹವಾಗಿದೆ. ತಂಡ ಭಾರತಕ್ಕೆ ಹೆಮ್ಮೆ ತಂದಿದೆ. ಈ ತಂಡವು ತೋರಿದ ಸ್ಥಿರತೆ, ಕೌಶಲ್ಯ, ಒಗ್ಗಟ್ಟು ಮತ್ತು ಹೋರಾಟದ ಮನೋಭಾವವು ನಮ್ಮ ಯುವಕರನ್ನು ಪ್ರೇರೇಪಿಸುತ್ತದೆ. ಅತ್ಯುತ್ತಮ ಭಾರತೀಯ ಹಾಕಿ ತಂಡ. ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Heartiest congratulations to our Hockey Team for securing the bronze medal at the Paris Olympics! It is after over five decades that India has won bronze medals in back-to-back Olympic Games. The team deserves highest praise for resurgence of Indian Hockey. They have done India…
— President of India (@rashtrapatibhvn) August 8, 2024
ರಾಹುಲ್ ಗಾಂಧಿ ಅಭಿನಂದನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭಾರತ ಹಾಕಿ ತಂಡದ ಅದ್ಭುತ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು, ‘ತಂಡ ಕಂಚಿನ ಪದಕ ಗೆದ್ದಿರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
Phenomenal match by the Indian Hockey Team – proud to see you all bag the Bronze Medal 🥉
Thank you, Sreejesh. Your relentless commitment to excellence has kept us inspired.#ParisOlympics2024 pic.twitter.com/cN9UYOIjD5
— Rahul Gandhi (@RahulGandhi) August 8, 2024
We are overjoyed to witness an exhilarating match where our talented Hockey Team has clinched a Bronze medal 🥉in the #Paris2024 #Olympics for the nation.
This is a historic milestone because the last time India won a back to back Olympic medal in the game was in 1968 and 1972.… pic.twitter.com/zGOOVO2eQG
— Mallikarjun Kharge (@kharge) August 8, 2024
ಮಲ್ಲಿಕಾರ್ಜುನ ಖರ್ಗೆ ಸಂತಸ
ಹಾಕಿ ತಂಡದ ಗೆಲುವಿಗೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ರೋಚಕ ಪಂದ್ಯವನ್ನು ನೋಡಲು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಪ್ರತಿಭಾವಂತ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟಿದೆ. ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Thu, 8 August 24