Sania Mirza: ಪತಿ ಶೋಯೆಬ್ ಮೇಲೆ ಆರೋಪಗಳ ಸುರಿಮಳೆಗೈದ ಸಾನಿಯಾ ಮಿರ್ಜಾ..!
Sania Mirza: ಶೋಯಬ್ ರಾತ್ರಿಯಲ್ಲಿ ಗೊರಕೆ ಹೊಡೆಯುತ್ತಾನೆ' ಅದು ನನಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶೋಯೆಬ್, ನಾನು ತುಂಬಾ ಸುಸ್ತಾಗಿದ್ದಾಗ ಮಾತ್ರ ಗೊರಕೆ ಹೊಡೆಯುತ್ತೇನೆ ಎಂದಿದ್ದಾರೆ.
ಭಾರತದ ಟೆನಿಸ್ ಸೆನ್ಸೇಶನ್ ಸಾನಿಯಾ ಮಿರ್ಜಾ (Sania Mirza) ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ (Australian Open) ನಂತರ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದರು. ಗ್ರ್ಯಾಂಡ್ ಸ್ಲಾಮ್ ಗೆದ್ದ ಭಾರತದ ಮೊದಲ ಮಹಿಳಾ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಾನಿಯಾ ಮಿರ್ಜಾ ಸುಮಾರು 91 ವಾರಗಳ ಕಾಲ ಡಬಲ್ಸ್‌ನಲ್ಲಿ ನಂಬರ್ ಒನ್ ಆಟಗಾರ್ತಿಯಾಗಿದ್ದರು. ಕ್ರೀಡೆಯಲ್ಲಿ ಹಲವು ಉನ್ನತ ಸ್ಥಾನಗಳನ್ನು ತಲುಪಿರುವ ಸಾನಿಯಾ ಸದ್ಯ ಕುಟುಂಬದೊಂದಿಗೆ ತಮ್ಮ ನಿವೃತ್ತಿ ಬದುಕನ್ನು ಕಳೆಯುತ್ತಿದ್ದಾರೆ. ಸಾನಿಯಾ ಏಪ್ರಿಲ್ 12, 2010 ರಂದು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಅವರನ್ನು ಇನ್ನೂ ಸ್ಟಾರ್ ಆಟಗಾರ್ತಿಯಾಗಿರುವಾಗಲೇ ವಿವಾಹವಾದರು. ಅವರಿಗೆ ಇಜಾನ್ ಮಿರ್ಜಾ ಮಲಿಕ್ ಎಂಬ ಮಗನಿದ್ದಾನೆ.
ಶೋಯೆಬ್ ಮತ್ತು ಸಾನಿಯಾ ಎಷ್ಟೇ ಬ್ಯುಸಿ ಇದ್ದರೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಾರೆ. ರಜೆಯ ಮೇಲೆ ಹೋಗುವುದು, ನಂತರ ಅಲ್ಲಿನ ಸುಂದರಮಯ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಅವರ ಹವ್ಯಾಸವಾಗಿದೆ. ಈ ಜೋಡಿ ಇತ್ತೀಚೆಗೆ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿತ್ತು. ಈ ಸಂದರ್ಭದಲ್ಲಿ ಸಾನಿಯಾ ತಮ್ಮ ಪತಿಯ ಬಗ್ಗೆ ಹಲವಾರು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಶೋಯೆಬ್ ಬಗ್ಗೆ ನೀವು ಇಷ್ಟಪಡದ ಸಂಗತಿಗಳು ಯಾವುವು ಎಂದು ಆಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾನಿಯಾ, ಶೋಯಬ್ ತುಂಬಾ ತಾಳ್ಮೆಯ ಮನುಷ್ಯ, ಅವರ ಈ ಗುಣ ನನಗೆ ಇಷ್ಟವಿಲ್ಲ ಎಂದು ಸಾನಿಯಾ ಹೇಳಿದ್ದಾರೆ.
ಗೊರಕೆ ಹೊಡೆಯುತ್ತೇನೆ ನಿಮಗೆ ಶೋಯೆಬ್ ಅವರ ಈ ವೈಶಿಷ್ಟ್ಯವನ್ನು ಏಕೆ ಇಷ್ಟಪಡುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಾನಿಯಾ, ನಾನು ಶೋಯೆಬ್‌ಗೆ ಏನಾದರೂ ಮಾಡಲು ಹೇಳಿದರೆ, ಅವರು ಯಾವಾಗಲೂ ನಿರಾತಂಕವಾಗಿ ನಾನು ಮಾಡುತ್ತೇನೆ ಎಂದು ಪ್ರತಿಕ್ರಿಯಿಸುತ್ತಾರೆ ಎಂದು ಸಾನಿಯಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೋಯೆಬ್, ಸರಿಯಾದ ಸಮಯದಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದಿದ್ದಾರೆ. ಶೋಯೆಬ್ ಇಷ್ಟಪಡದ ಇನ್ನೊಂದು ವಿಷಯದ ಬಗ್ಗೆ ಮಾತನಾಡಿದ ಸಾನಿಯಾ, ‘ಶೋಯಬ್ ರಾತ್ರಿಯಲ್ಲಿ ಗೊರಕೆ ಹೊಡೆಯುತ್ತಾನೆ’ ಅದು ನನಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶೋಯೆಬ್, ನಾನು ತುಂಬಾ ಸುಸ್ತಾಗಿದ್ದಾಗ ಮಾತ್ರ ಗೊರಕೆ ಹೊಡೆಯುತ್ತೇನೆ” ಎಂದಿದ್ದಾರೆ. ಹೀಗೆ ಈ ಇಬ್ಬರ ವಿನೋದದ ಸಂದರ್ಶನ ಮುಂದುವರೆಯಿತು.
ಇದನ್ನೂ ಓದಿ:Gujarat Titans, IPL 2022: ಪಾಂಡ್ಯ ನಾಯಕತ್ವಕ್ಕೆ ಅಗ್ನಿಪರೀಕ್ಷೆ! ಹೇಗಿರಲಿದೆ ತಂಡದ ಆಡುವ ಹನ್ನೊಂದರ ಬಳಗ?