ಫಿಫಾ ವಿಶ್ವಕಪ್ ಫೈನಲ್​ಗೂ ಮುನ್ನ ಭಾರತದಲ್ಲಿ ಸಖತ್ ಟ್ರೆಂಡ್ ಆದ ಎಸ್​ಬಿಐ ಪಾಸ್​ಬುಕ್..! ಕಾರಣವೇನು?

| Updated By: ಪೃಥ್ವಿಶಂಕರ

Updated on: Dec 17, 2022 | 11:29 AM

FIFA World Cup 2022: ಅತ್ತ ಮೆಸ್ಸಿ ತಂಡ ಫೈನಲ್​ಗೇರುತ್ತಿದ್ದಂತೆ ಇತ್ತ ಭಾರತದಲ್ಲಿ ಪ್ರತಿಷ್ಠಿತ ಎಸ್​ಬಿಐ ಬ್ಯಾಂಕ್​ನ ಪಾಸ್​ಬುಕ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ.

ಫಿಫಾ ವಿಶ್ವಕಪ್ ಫೈನಲ್​ಗೂ ಮುನ್ನ ಭಾರತದಲ್ಲಿ ಸಖತ್ ಟ್ರೆಂಡ್ ಆದ ಎಸ್​ಬಿಐ ಪಾಸ್​ಬುಕ್..! ಕಾರಣವೇನು?
Sbi passbook
Follow us on

ನವೆಂಬರ್ 20 ರಂದು ಆರಂಭವಾದ ಫುಟ್ಬಾಲ್ ವಿಶ್ವಕಪ್ (FIFA World Cup) ಅಂತಿಮ ಹಂತ ತಲುಪಿದೆ. ಡಿಸೆಂಬರ್ 18 ರಂದು ನಡೆಯಲಿರುವ ಫೈನಲ್​ನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ (argentina vs france) ಕತಾರ್‌ನ ರಾಷ್ಟ್ರೀಯ ದಿನದಂದು ಲುಸೈಲ್ ಕ್ರೀಡಾಂಗಣದಲ್ಲಿ ಟ್ರೋಫಿ ಗೆಲ್ಲಲು ಸೆಣಸಾಡಲಿವೆ. ಸೆಮಿಫೈನಲ್​ನಲ್ಲಿ ಕ್ರೊವೇಷ್ಯಾ ತಂಡವನ್ನು ಮಣಿಸಿರುವ ಅರ್ಜೆಂಟೀನಾ ತಂಡ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸ್ಸಿನೊಂದಿಗೆ ಅಖಾಡಕ್ಕಿಳಿಯುತ್ತಿದೆ. ಇತ್ತ ಮೊರಾಕೋ ತಂಡವನ್ನು ಮಣಿಸಿದ ಫ್ರಾನ್ಸ್, ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸೆಣಸಾಡಲಿದೆ. ತಿಂಗಳ ಕಾಲ ನಡೆದ ಈ ಈವೆಂಟ್‌ನಲ್ಲಿ ಕೆಲವು ಅಚ್ಚರಿಯ ಫಲಿತಾಂಶಗಳು ಹೊರಬಿದ್ದವು. ಕೊನೆಗೂ ಮೊದಲ ಪಂದ್ಯದಲ್ಲಿ ಸೋತಿದ್ದ ಅರ್ಜೆಂಟೀನಾ ಫೈನಲಿಸ್ಟ್ ತಂಡವಾಗಿ ಸೀಟು ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅತ್ತ ಮೆಸ್ಸಿ (Lionel Messi) ತಂಡ ಫೈನಲ್​ಗೇರುತ್ತಿದ್ದಂತೆ ಇತ್ತ ಭಾರತದಲ್ಲಿ ಪ್ರತಿಷ್ಠಿತ ಎಸ್​ಬಿಐ ಬ್ಯಾಂಕ್​ನ ಪಾಸ್​ಬುಕ್ (SBI passbook) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಪಾಸ್‌ಬುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದಕ್ಕೆ ಕಾರಣವೂ ಇದೆ. ಎಸ್​ಬಿಐನ ಪಾಸ್​ಬುಕ್ ಕವರ್‌, ನೀಲಿ ಮತ್ತು ಬಿಳಿ ಪಟ್ಟಿಗಳಿಂದ ತುಂಬಿದೆ. ನೀಲಿ ಬಣ್ಣದ ನಡುವೆ ಬಿಳಿ ಪಟ್ಟಿ ಇದ್ದು, ಅದರ ಮಧ್ಯದಲ್ಲಿ ಗಾಢ ನೀಲಿ ಬಣ್ಣದಲ್ಲಿ ವೃತ್ತಾಕಾರವನ್ನು ಕಾಣಬಹುದಾಗಿದೆ. ಆದರೆ ಎಸ್​ಬಿಐ ಪಾಸ್​ಬುಕ್ ಟ್ರೆಂಡ್ ಆಗುವುದಕ್ಕೂ, ಫಿಫಾ ವಿಶ್ವಕಪ್​ಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮಗೆ ಕಾಡುತ್ತಿರಬಹುದು. ಅದಕ್ಕೆ ಸೂಕ್ತ ಕಾರಣವೂ ಇಲ್ಲಿದೆ.

ಮೆಸ್ಸಿ- ಎಂಬಪ್ಪೆ! ಯಾರಿಗೆ ಸಿಗಲಿದೆ ಗೋಲ್ಡನ್ ಬೂಟ್- ಗೋಲ್ಡನ್ ಬಾಲ್ ಪ್ರಶಸ್ತಿ? ರೇಸ್​ನಲ್ಲಿ ಈ ಆಟಗಾರರು

2. ಅರ್ಜೆಂಟೀನಾ ತಂಡದ ಜೆರ್ಸಿ ನಡುವೆ ಸಾಮ್ಯತೆ

ವಾಸ್ತವವಾಗಿ, ಎಸ್‌ಬಿಐ ಪಾಸ್‌ಬುಕ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಲು ಪ್ರಮುಖ ಕಾರಣ, ಈ ಪಾಸ್​ಬುಕ್​ ಹಾಗೂ ಅರ್ಜೆಂಟೀನಾ ತಂಡದ ಆಟಗಾರರು ಧರಿಸುವ ಜೆರ್ಸಿ, ಎರಡಕ್ಕೂ ಸಾಕಷ್ಟು ಹೊಲಿಕೆಗಳಿರುವುದು. ಎಸ್​ಬಿಐ ಪಾಸ್​ಬುಕ್ ನೀಲಿ ಹಾಗೂ ಬಿಳಿ ಬಣ್ಣದಿಂದ ಕೂಡಿದ್ದರೆ, ಇತ್ತ ಅರ್ಜೆಂಟೀನಾ ತಂಡದ ಆಟಗಾರರು ಧರಿಸುವ ಜೆರ್ಸಿಯೂ ಕೂಡ ಈ ಎರಡು ಬಣ್ಣಗಳ ಮಿಶ್ರಣದಿಂದ ಕೂಡಿದೆ. ಹೀಗಾಗಿ ಎಸ್‌ಬಿಐ ಪಾಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಇದಕ್ಕೆ ತಕ್ಕಂತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ಪೋಸ್ಟ್​ಗಳನ್ನು ಸಹ ಮಾಡುತ್ತಿದ್ದಾರೆ.

3. ವಿಶ್ವಕಪ್ ಫೈನಲ್ ಬಳಿಕ ಮೆಸ್ಸಿ ನಿವೃತ್ತಿ

ಮಾಧ್ಯಮ ವರದಿಗಳ ಪ್ರಕಾರ, ಅರ್ಜೆಂಟೀನಾದ ಮಾಧ್ಯಮ ಸಂಸ್ಥೆ ಡಿಯಾರಿಯೊ ಡಿಪೋರ್ಟಿವೊ ಓಲೆ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿರುವ ಮೆಸ್ಸಿ, ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಕೊನೆಗೊಳಿಸುತ್ತೇನೆ. ಈ ಸಾಧನೆ ನನಗೆ ಅತ್ಯಂತ ಖುಷಿ ನೀಡಿದೆ. ಅರ್ಜೆಂಟೀನಾ ಮತ್ತೊಮ್ಮೆ ವಿಶ್ವಕಪ್ ಫೈನಲ್ ತಲುಪಿದೆ. ಸತತ ಪ್ರಯತ್ನಗಳ ನಂತರ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ನಾವು ಇನ್ನೊಂದು ಹೆಜ್ಜೆ ಹಿಂದಿದ್ದೇವೆ. ಈ ಪ್ರಶಸ್ತಿ ಗೆಲ್ಲಲು ನಾವು ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.

2014ರ ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋತಿದ್ದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ, 1978 ಮತ್ತು 1986ರಲ್ಲಿ ಈ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಆ ಬಳಿಕ ಕೆಲವ ಬಾರಿ ಈ ತಂಡ ಫೈನಲ್​ಗೇರಿದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಮೆಸ್ಸಿ ತನ್ನ ಮೊದಲ ವಿಶ್ವಕಪ್ ಗೆಲ್ಲುವ ಮೂಲಕ ತನ್ನ ಅಸಾಮಾನ್ಯ ವೃತ್ತಿಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Sat, 17 December 22