ಅವಕಾಶಗಳ ಕೊರತೆ; ಟೀಂ ಇಂಡಿಯಾ ತೊರೆದು ಅಮೆರಿಕಾ ತಂಡ ಸೇರಿದ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಯುವ ಕ್ರಿಕೆಟಿಗ

ಅವಕಾಶಗಳ ಕೊರತೆ; ಟೀಂ ಇಂಡಿಯಾ ತೊರೆದು ಅಮೆರಿಕಾ ತಂಡ ಸೇರಿದ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಯುವ ಕ್ರಿಕೆಟಿಗ
ಸ್ಮಿತ್ ಪಟೇಲ್

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು 2012 ರ ಭಾರತ ಅಂಡರ್ -19 ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಸ್ಮಿತ್ ಪಟೇಲ್ ಬಿಸಿಸಿಐ ಅಡಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಿಂದ ನಿವೃತ್ತರಾಗಿದ್ದಾರೆ.

pruthvi Shankar

| Edited By: Ayesha Banu

Jun 01, 2021 | 9:25 AM

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು 2012 ರ ಭಾರತ ಅಂಡರ್ -19 ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಸ್ಮಿತ್ ಪಟೇಲ್ ಬಿಸಿಸಿಐ ಅಡಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಿಂದ ನಿವೃತ್ತರಾಗಿದ್ದಾರೆ. ಅವರು ಈಗ ಅಮೆರಿಕದಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಲಿದ್ದಾರೆ. ಇದರೊಂದಿಗೆ, ಅವರು ಈಗ ಇತರ ದೇಶಗಳಲ್ಲಿ ನಡೆಯಲಿರುವ ಕ್ರಿಕೆಟ್ ಲೀಗ್‌ಗಳಲ್ಲಿ ಆಡಬಹುದು. ಇದರ ಅಡಿಯಲ್ಲಿ, ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಸ್ಮಿತ್ ಪಟೇಲ್ ಮೊದಲು ಬಾರ್ಬಡೋಸ್ ಟ್ರೈಡೆಂಟ್ಸ್ ಪರ ಆಡಲಿದ್ದಾರೆ. ಅವರು ಪ್ರಸ್ತುತ ಯುಎಸ್ನಲ್ಲಿದ್ದಾರೆ ಮತ್ತು ಭಾರತದಲ್ಲಿ ಕ್ರಿಕೆಟ್ ತೊರೆಯುವುದನ್ನು ಖಚಿತಪಡಿಸಿದ್ದಾರೆ.

ವಿಕೆಟ್ ಕೀಪರ್ ಮತ್ತು ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್ ಪಟೇಲ್ ಕೊನೆಯ ಬಾರಿಗೆ ಬರೋಡಾ ಪರ ಆಡಿದ್ದರು. ಅವರು ಗುಜರಾತ್ ಮತ್ತು ತ್ರಿಪುರವನ್ನು ಸಹ ಪ್ರತಿನಿಧಿಸಿದ್ದಾರೆ. 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 3000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2012 ರಲ್ಲಿ ಉನ್ಮುಕ್ತ್ ಚಂದ್ ನೇತೃತ್ವದಲ್ಲಿ 19 ವರ್ಷದೊಳಗಿನವರ ವಿಶ್ವ ಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿ ಸ್ಮಿತ್ ಪಟೇಲ್ ಇದ್ದರು. ಸಂದೀಪ್ ಶರ್ಮಾ, ಬಾಬಾ ಅಪರಾಜಿತ್, ಹನುಮಾ ವಿಹಾರಿ ಕೂಡ ಈ ತಂಡದಲ್ಲಿ ಸೇರಿದ್ದಾರೆ. ಇದು ನನಗೆ ಹೊಸ ಇನ್ನಿಂಗ್ಸ್ ಎಂದು ಪಟೇಲ್ ಹೇಳಿಕೊಂಡಿದ್ದಾರೆ. ವಿಕೆಟ್ ಕೀಪರ್ ಆಗಿ ಸ್ಥಾನ ಸಿಗದಿರುವ ನಿರಾಶೆಯನ್ನು ಎದುರಿಸಿದ ಅವರು ಟೀಂ ಇಂಡಿಯಾದಲ್ಲಿ ಆಡುವ ಅವಕಾಶಕ್ಕಾಗಿ ಗುಜರಾತ್, ತ್ರಿಪುರ, ಗೋವಾ ಮತ್ತು ಬರೋಡಾ ಎಂಬ ನಾಲ್ಕು ವಿಭಿನ್ನ ತಂಡಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದರು. ಆದರೆ ಯಾವುದೇ ಅನುಕೂಲವಾಗಲಿಲ್ಲ.

ಅಮೆರಿಕದ ಗ್ರೀನ್ ಕಾರ್ಡ್ ಇದೆ ಸ್ಮಿತ್ ಪಟೇಲ್ ಅವರು ಬಿಸಿಸಿಐ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕಳೆದುಕೊಂಡಿದ್ದಾರೆ. ತಮ್ಮ ನಿವೃತ್ತಿ ಪತ್ರವನ್ನೂ ಸಹ ಸ್ಮಿತ್ ಬಿಸಿಸಿಐಗೆ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ, ಭಾರತದಲ್ಲಿ ಅವರ ಇನ್ನಿಂಗ್ಸ್ ಮುಗಿದಿದೆ. ಸ್ಮಿತ್ ಪಟೇಲ್ ಅವರ ಕುಟುಂಬವೂ ಅಮೆರಿಕದಲ್ಲಿ ವಾಸಿಸುತ್ತಿದೆ. ತಂದೆ ಪೆನ್ಸಿಲ್ವೇನಿಯಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ಗ್ಯಾಸ್ ಸ್ಟೇಷನ್ ನಡೆಸುತ್ತಿದ್ದಾರೆ. ಸ್ಮಿತ್ 2010 ರಿಂದಲೂ ಇಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಅವರಿಗೆ ಗ್ರೀನ್ ಕಾರ್ಡ್ ಕೂಡ ಇದೆ. ಇದರರ್ಥ ಅವರು ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಬಹುದು ಮತ್ತು ಕೆಲಸ ಮಾಡಬಹುದು. ಜೊತೆಗೆ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ.

ಸ್ಮಿತ್ ವೃತ್ತಿಜೀವನ ಹೀಗಿತ್ತು ಈ ಹಿಂದೆ ಸ್ಮಿತ್ ಗುಜರಾತ್ ತಂಡದ ಜೊತೆಗಿದ್ದರು ಆದರೆ ಪಾರ್ಥಿವ್ ಪಟೇಲ್ ಅವರ ಉಪಸ್ಥಿತಿಯಿಂದಾಗಿ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ನಂತರ ಮೂರು ಆವೃತ್ತಿಗಳಲ್ಲಿ ತ್ರಿಪುರ ತಂಡದಲ್ಲಿದ್ದರು. ನಂತರ ಗೋವಾ ತಂಡ ಸೇರಿದ್ದರು. ನಂತರ ಈ ಆವೃತ್ತಿಯಲ್ಲಿ ಬರೋಡಾದೊಂದಿಗೆ ಆಡಿದರು. ಸ್ಮಿಟ್ 55 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 39.49 ಸರಾಸರಿಯಲ್ಲಿ 3278 ರನ್ ಗಳಿಸಿದ್ದಾರೆ. ಇಲ್ಲಿ ಅವರು 11 ಶತಕಗಳು ಮತ್ತು 14 ಅರ್ಧಶತಕಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 43 ಲಿಸ್ಟ್ ಎ ಪಂದ್ಯಗಳಲ್ಲಿ 32.47 ಸರಾಸರಿಯಲ್ಲಿ 1234 ರನ್ ಗಳಿಸಿದ್ದಾರೆ. ಈ ಸ್ವರೂಪದಲ್ಲಿ ಅವರು ಎರಡು ಶತಕ ಮತ್ತು ಎಂಟು ಅರ್ಧಶತಕಗಳನ್ನು ಗಳಿಸಿದ್ದಾರೆ. ಟಿ 20 ಕ್ರಿಕೆಟ್‌ನಲ್ಲಿ 28 ಪಂದ್ಯಗಳಲ್ಲಿ 708 ರನ್ ಗಳಿಸಿದ್ದಾರೆ. ಸ್ಮಿತ್ ಪಟೇಲ್ ಯುಎಸ್ ರಾಷ್ಟ್ರೀಯ ತಂಡಕ್ಕಾಗಿ ಆಡಬೇಕಾದರೆ, ಅವರು ಕನಿಷ್ಠ ಮೂರು ವರ್ಷಗಳ ಕಾಲ ಅಲ್ಲಿಯೇ ಇರಬೇಕಾಗುತ್ತದೆ.

Follow us on

Related Stories

Most Read Stories

Click on your DTH Provider to Add TV9 Kannada