ಜುಲೈ 28 ರಿಂದ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ಶುರುವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ (CWG 2022) ಈ ಬಾರಿ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅದರಲ್ಲೂ ಭಾರತವನ್ನು 300 ಕ್ಕೂ ಹೆಚ್ಚು ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿಯೇ ಈ ಸಲ ಪದಕಗಳ ನಿರೀಕ್ಷೆ ಹೆಚ್ಚಿದೆ. ಅತ್ತ ಕಾಮನ್‌ವೆಲ್ತ್ ಗೇಮ್ಸ್ ಸಿದ್ದತೆಗಳು ಶುರುವಾಗುತ್ತಿದ್ದಂತೆ ಇತ್ತ ಭಾರತೀಯ ಉಪಖಂಡಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಅನ್ನು ಪ್ರಸಾರ ಮಾಡುವ ಹಕ್ಕುಗಳನ್ನು ಸೋನಿ ನೆಟ್ವರ್ಕ್ ಪಡೆದುಕೊಂಡಿದೆ.
ಈ ಹಿಂದೆ ಟೋಕಿಯೋ ಒಲಂಪಿಕ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ 2022 ರ ಹಕ್ಕನ್ನು ಪಡೆದಿದ್ದ ಸೋನಿ ನೆಟ್ವರ್ಕ್ ಇದೀಗ ಕಾಮನ್‌ವೆಲ್ತ್ ಗೇಮ್ಸ್ ನೇರ ಪ್ರಸಾರದ ಹಕ್ಕುಗಳನ್ನು ಕೂಡ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಂತೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ, ನೇಪಾಳ, ಅಫ್ಘಾನಿಸ್ತಾನ ಮತ್ತು ಮಾಲ್ಡೀವ್ಸ್ನಲ್ಲಿ ಸೋನಿ ನೆಟ್ವರ್ಕ್ ಚಾನೆಲ್ಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಪ್ರಸಾರವಾಗಲಿದೆ.
ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು?
ಕಾಮನ್‌ವೆಲ್ತ್ ಗೇಮ್ಸ್ 2022 ರ ಸ್ಪರ್ಧೆಗಳನ್ನು ಸೋನಿ ಟೆನ್ 1, ಸೋನಿ ಟೆನ್ 2, ಸೋನಿ ಟೆನ್ 3, ಸೋನಿ ಸಿಕ್ಸ್ ಮತ್ತು ಸೋನಿ ಟೆನ್ 4 ಚಾನಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಸೋನಿ LIV ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಸಹ ವೀಕ್ಷಿಸಬಹುದು.
ಕಣದಲ್ಲಿರುವ ಭಾರತದ ಪ್ರಮುಖ ಸ್ಪರ್ಧಿಗಳು ಯಾರೆಲ್ಲಾ?
ಅಥ್ಲೆಟಿಕ್ಸ್:-
ಬ್ಯಾಡ್ಮಿಂಟನ್:-
ಹಾಕಿ:-
ಕ್ರಿಕೆಟ್:-
ವೈಟ್ ಲಿಫ್ಟಿಂಗ್:-
Published On - 4:26 pm, Thu, 21 July 22