Navdeep Saini: ರಾಹುಲ್ ದ್ರಾವಿಡ್​ರ ಮಾಜಿ ತಂಡದ ಪರ ಹೊಸ ದಾಖಲೆ ಬರೆದ ಸೈನಿ

Navdeep Saini: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಲ್ಲಿ 3 ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ವೇಗಿ ಶುಭಾರಂಭ ಮಾಡಿದ್ದರು.

Navdeep Saini: ರಾಹುಲ್ ದ್ರಾವಿಡ್​ರ ಮಾಜಿ ತಂಡದ ಪರ ಹೊಸ ದಾಖಲೆ ಬರೆದ ಸೈನಿ
Navdeep Saini
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 21, 2022 | 4:57 PM

ಟೀಮ್ ಇಂಡಿಯಾದಿಂದ (Team India) ಹೊರಗುಳಿದಿರುವ ಆಟಗಾರರು ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಒಂದೆಡೆ ಚೇತೇಶ್ವರ ಪೂಜಾರಾ (Cheteshwara Pujara) ಆಕರ್ಷಕ ದ್ವಿಶತಕ ಸಿಡಿಸಿದರೆ, ಮತ್ತೊಂದೆಡೆ ಭಾರತೀಯ ಬೌಲರ್​ಗಳಾದ ವಾಷಿಂಗ್ಟನ್ ಸುಂದರ್ (Washington Sundar) ಹಾಗೂ ನವದೀಪ್ ಸೈನಿ (Navdeep Saini) 5 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ. ಭಾರತದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 2 ದಿನಗಳ ಹಿಂದೆ ಲಂಕಾಶೈರ್‌ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಆ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಇದೀಗ ಭಾರತದ ವೇಗದ ಬೌಲರ್ ನವದೀಪ್ ಸೈನಿ ಬೆಂಕಿ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ಕೆಂಟ್‌ ತಂಡದ ಪಾದಾರ್ಪಣೆ ಮಾಡಿದ ನವದೀಪ್ ಸೈನಿ ವಾರ್ವಿಕ್‌ಶೈರ್ ವಿರುದ್ಧ 5 ವಿಕೆಟ್ ಕಬಳಿಸಿದ್ದಾರೆ. ಅವರ ಪ್ರದರ್ಶನದಿಂದಾಗಿ ವಾರ್ವಿಕ್‌ಷೈರ್ ಮೊದಲ ಇನ್ನಿಂಗ್ಸ್‌ನಲ್ಲಿ 225 ರನ್‌ಗಳಿಗೆ ಆಲೌಟ್ ಆಗಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಲ್ಲಿ 3 ವಿಕೆಟ್ ಪಡೆದ ನವದೀಪ್ ಸೈನಿ ಎರಡನೇ ದಿನ 2 ವಿಕೆಟ್ ಕಬಳಿಸಿ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಪಡೆದ ಸಾಧನೆ ಮಾಡಿದರು.

ಇದನ್ನೂ ಓದಿ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Image
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Image
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Image
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ನವದೀಪ್ ಸೈನಿ ಮೊದಲ ಇನಿಂಗ್ಸ್ ನಲ್ಲಿ 18 ಓವರ್ ಗಳಲ್ಲಿ 72 ರನ್ ನೀಡಿ ಐದು ವಿಕೆಟ್ ಕಬಳಿಸಿದ್ದಾರೆ. ವಿಶೇಷ ಎಂದರೆ ಈ ಇನ್ನಿಂಗ್ಸ್‌ನಲ್ಲಿ ಸೈನಿ 14 ನೋ-ಬಾಲ್‌ಗಳನ್ನು ಎಸೆದಿದ್ದರು. ಸೈನಿಯನ್ನು ಹೊರತುಪಡಿಸಿದರೆ ಕೆಂಟ್​ ತಂಡದ ಯಾವುದೇ ಬೌಲರ್​ ನೋಬಾಲ್ ಎಸೆದಿಲ್ಲ ಎಂಬುದು ಮತ್ತೊಂದು ವಿಶೇಷ.

ರಾಹುಲ್ ದ್ರಾವಿಡ್ ಅವರ ಮಾಜಿ ತಂಡ: ನವದೀಪ್ ಸೈನಿ ಇತ್ತೀಚೆಗೆ ಟೀಮ್ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಹೋಗಿದ್ದರು. ಅಲ್ಲದೆ ಲೀಸೆಸ್ಟರ್‌ಶೈರ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಅತ್ತ ಭಾರತ-ಇಂಗ್ಲೆಂಡ್ ಸರಣಿ ಮುಗಿಯುತ್ತಿದ್ದಂತೆ ಸೈನಿ ಕೌಂಟಿ ಕ್ರಿಕೆಟ್​ನತ್ತ ಮುಖಮಾಡಿದ್ದರು. ಅದರಂತೆ ಈ ಸೀಸನ್​ನಲ್ಲಿ ಕೆಂಟ್ ತಂಡದ ಪರ 3 ಟೆಸ್ಟ್​ ಪಂದ್ಯಗಳನ್ನು ಮತ್ತು ಐದು ಏಕದಿನ ಪಂದ್ಯಗಳನ್ನು ಆಡಲಿದ್ದಾರೆ.

ವಿಶೇಷ ಎಂದರೆ ಸೈನಿ ಕೆಂಟ್ ಪರ ಆಡುತ್ತಿರುವ ಎರಡನೇ ಭಾರತೀಯ ಕ್ರಿಕೆಟಿಗ. ಇವರಿಗಿಂತ ಮೊದಲು ಟೀಮ್ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ಇಂಗ್ಲಿಷ್ ಕೌಂಟಿ ತಂಡದ ಪರ ಕಣಕ್ಕಿಳಿದಿದ್ದರು. ಇದೀಗ ಕೆಂಟ್ ಪರ ಕಣಕ್ಕಿಳಿದು ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದ ವಿಶೇಷ ದಾಖಲೆಯನ್ನು ನವದೀಪ್ ಸೈನಿ ನಿರ್ಮಿಸಿದ್ದಾರೆ.

ಇನ್ನು ಚೊಚ್ಚಲ ಪಂದ್ಯದಲ್ಲಿ 5 ವಿಕೆಟ್ ಉರುಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ ನವದೀಪ್ ಸೈನಿಯನ್ನು ಸಹ ಆಟಗಾರರು ಹಾಗೂ ಅಭಿಮಾನಿಗಳು ಸ್ಟ್ಯಾಂಡಿಂಗ್ ಓವೇಷನ್ ಮೂಲಕ ಗೌರವಿಸಿದರು. ಇದೀಗ ಇಂಗ್ಲೆಂಡ್​ ಕೌಂಟಿ ಕ್ರಿಕೆಟ್​ನಲ್ಲಿ ತಮ್ಮ ಬೆಂಕಿ ಬೌಲಿಂಗ್ ಮೂಲಕ ನವದೀಪ್ ಸೈನಿ ಎಲ್ಲರ ಗಮನ ಸೆಳೆದಿದ್ದು, ಹೀಗಾಗಿ ಮುಂಬರುವ ದಿನಗಳಲ್ಲೂ ಸೈನಿ ಕೌಂಟಿ ಮೂಲಕವೇ ಟೀಮ್ ಇಂಡಿಯಾ ಕದತಟ್ಟಿದರೂ ಅಚ್ಚರಿಪಡಬೇಕಿಲ್ಲ.