ರಾಜ್ಯ ಅಥ್ಲೆಟ್ (State Athlete) ಬಿಂದು ರಾಣಿ ಮೇಲೆ ಹಿರಿಯ ಕೋಚ್ ಯತೀಶ್ ಅವರ ಪತ್ನಿ ಶ್ವೇತಾ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕಂಠೀರಣ ಕ್ರೀಡಾಂಗಣದಲ್ಲಿ (Kanteerava Stadium) ನಡೆದಿದ್ದು, ಇದೀಗ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ವೈರಲ್ ಆಗಿದೆ. ವಿಡಿಯೋದಲ್ಲಿರುವಂತೆ ಇಂದು ಮುಂಜಾನೆ ಅಥ್ಲೆಟ್ ಬಿಂದು ರಾಣಿ ಕಂಠೀರಣ ಕ್ರೀಡಾಂಗಣಕ್ಕೆ ಬಂದಾಗ ಕೋಚ್ ಯತೀಶ್ ಅವರ ಪತ್ನಿ ಶ್ವೇತಾ, ಬಿಂದು ರಾಣಿ ಅವರನ್ನು ಅಡ್ಡಗಟ್ಟಿ ಮನಸೋಇಚ್ಛೆ ನಿಂದಿಸಿದ್ದಾರೆ. ಘಟನೆಯ ಸಂಬಂಧ ಹೇಳಿಕೆ ನೀಡಿರುವ ಬಿಂದು ರಾಣಿ, ಈ ಬಗ್ಗೆ ಅಸೋಷಿಯನ್ ಜೊತೆ ಮಾತನಾಡಿದ್ದೇನೆ. ಆದರೆ ಈ ಘಟನೆಗೂ, ಅಸೋಸಿಯೇಷನ್‌ಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ನಾನು ವೈಯಕ್ತಿಕವಾಗಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವಂತೆ ಮುಂಜಾನೆ ಕ್ರೀಡಾಂಗಣಕ್ಕೆ ಬಂದಿರುವ ಶ್ವೇತಾ ಅವರು ಅಥ್ಲೆಟ್ ಬಿಂದು ರಾಣಿ ವಿರುದ್ಧ ಸುಳ್ಳು ಮಾಹಿತಿ ನೀಡಿರುವುದಾಗಿ ಆರೋಪ ಹೊರಿಸಿದ್ದಾರೆ. ಅಲ್ಲದೆ ಕ್ರೀಡಾ ಸಾಮಗ್ರಿಗಳನ್ನು ಕದ್ದು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿರುವ ಆರೋಪ ಮಾಡಿದ್ದಾರೆ. ಅಲ್ಲದೆ ಕೈಯಲ್ಲಿ ಚಪ್ಪಲಿ ಹಿಡಿದು ಬಿಂದು ರಾಣಿ ವಿರುದ್ಧ ಜೋರಾಗಿ ಕೂಗಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅಥ್ಲೆಟ್ ಬಿಂದು ರಾಣಿ, ಟೆಡ್ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಗ್ಗೆ ನಾನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದೆ. ಆ ಪೋಸ್ಟ್ನಲ್ಲಿ ನಾನು ಹಾಕಿಕೊಂಡಿರುವ ಮಾಹಿತಿ ಸುಳ್ಳು ಎಂದು ಶ್ವೇತಾ ಆರೋಪಿಸಿದ್ದಾರೆ. ನನಗೆ ಖೇಲ್ ರತ್ನ ಅವಾರ್ಡ್ ಸಿಕ್ಕಿದೆ ಎಂದು ಸುಳ್ಳು ಮಾಹಿತಿ ಹಾಕಿರುವೆ ಎಂದು ಶ್ವೇತಾ ಅವರು ಆರೋಪಿಸುತ್ತಿದ್ದಾರೆ. ಆದರೆ ನಾನು ಪೋಸ್ಟರ್ನಲ್ಲಿ ಖೇಲ್ ರತ್ನ ಪುರಸ್ಕಾರ ಅಂತಾ ಹಾಕಿದ್ದೇನೆ. ಅಲ್ಲದೆ ಖೇಲ್ ರತ್ನ ಅವಾರ್ಡ್ ಹೆಸರಲ್ಲಿ 1 ಲಕ್ಷ ರೂ. ತೆಗೆದುಕೊಂಡಿದ್ದೀಯ ಎಂದು ಶ್ವೇತ ಆರೋಪ ಮಾಡಿದ್ದಾರೆ. ಆ ರೀತಿ ನಾನೂ ಯಾವುದೇ ದುಡ್ಡು ತಗೆದುಕೊಂಡಿಲ್ಲ.
ಈ ಬಗ್ಗೆ ಶುಕ್ರುವಾರ ರಾತ್ರಿ ಚಾಟ್ ಮಾಡಿದ್ರು, ನಾನೂ ಅದೇ ದಿನ ರಾತ್ರಿ ಕಾಲ್ ಮಾಡಿ ಮಾತನಾಡಿದೆ. ಇಂದು ಬೆಳಿಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದೆ. ಈ ವೇಳೆ ಏಕಾಏಕಿ ಬಂದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ರು ಎಂದಿದ್ದಾರೆ. ಇನ್ನು ಟೆಡ್ ಕಾರ್ಯಕ್ರಮದಲ್ಲಿ ಅಮೀರ್ ಖಾನ್, ವಿರಾಟ್ ಕೊಹ್ಲಿ ಭಾಗಿಯಾಗಿರುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಬಿಂದು ರಾಣಿ, ಟೆಡ್ ಕಾರ್ಯಕ್ರಮದಲ್ಲಿ ಅವರ್ಯಾರು ಭಾಗಿಯಾಗಿರಲಿಲ್ಲ. ಹೀಗಾಗಿ ಯಾರು ಅಪಪ್ರಚಾರ ಮಾಡಬೇಡಿ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Mon, 3 July 23