ತಂದೆ ಸಂಗ್ರಹಿಸಿದ ದೇಣಿಗೆ ಹಣದಿಂದ ತರಬೇತಿ ಪಡೆದು, ಒಲಿಂಪಿಕ್ಸ್​ನಲ್ಲಿ 7 ಪದಕ ಗೆದ್ದ ಸ್ವಿಮ್ಮರ್​ ಬಗ್ಗೆ ನಿಮಗೆಷ್ಟು ಗೊತ್ತು?

success story of olympic champion peter van den Hoogenband ಸಿಡ್ನಿಯಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅವರ ಕನಸು ನನಸಾಯಿತು. 100 ಮೀಟರ್ ಮತ್ತು 200 ಮೀಟರ್ ಈಜು ಸ್ಪರ್ಧೆಯಲ್ಲಿ ವಿಶ್ವ ದಾಖಲೆಗಳೊಂದಿಗೆ ಪದಕಗಳನ್ನು ಗೆದ್ದರು. 2004 ರ ಅಥೆನ್ಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು.

ತಂದೆ ಸಂಗ್ರಹಿಸಿದ ದೇಣಿಗೆ ಹಣದಿಂದ ತರಬೇತಿ ಪಡೆದು, ಒಲಿಂಪಿಕ್ಸ್​ನಲ್ಲಿ 7 ಪದಕ ಗೆದ್ದ ಸ್ವಿಮ್ಮರ್​ ಬಗ್ಗೆ ನಿಮಗೆಷ್ಟು ಗೊತ್ತು?
ಪೀಟರ್ ವ್ಯಾನ್ ಡೆನ್ ಹೂಗೆನ್‌ಬ್ಯಾಂಡ್
Follow us
ಪೃಥ್ವಿಶಂಕರ
|

Updated on:Feb 04, 2021 | 3:29 PM

ಒಲಿಂಪಿಕ್ ಕ್ರೀಡಾಕೂಟದಲ್ಲಿ ಯಶಸ್ಸು ಕಾಣಬೇಕೆಂಬುದು ಪ್ರತಿಯೊಂದು ದೇಶಕ್ಕೂ ಬಹಳ ಮುಖ್ಯವಾಗಿದೆ. ಇದಕ್ಕಾಗಿ ಇಂದು ಬಹುತೇಕ ಎಲ್ಲ ದೇಶಗಳು ಪ್ರತ್ಯೇಕ ಬಜೆಟ್ ನಿಗದಿಪಡಿಸಿವೆ. ಇದಕ್ಕಾಗಿ ಆಟಗಾರರು ಚಿಕ್ಕ ವಯಸ್ಸಿನಿಂದಲೇ ಸಿದ್ಧರಾಗುತ್ತಾ ಸಾಗುತ್ತಾರೆ. ಆದರೆ ಹಣದ ಕೊರತೆಯಿಂದಾಗಿ ಅನೇಕ ಒಲಿಂಪಿಕ್ ಚಾಂಪಿಯನ್‌ಗಳು ಹಲವು ತೊಂದರೆಗಳನ್ನು ಎದುರಿಸಿ, ತಮ್ಮ ಅಗಾಧ ಪರಿಶ್ರಮದಿಂದ ಇಂದು ಜಗತ್ತಿನ ಶ್ರೇಷ್ಠ ಸಾಧಕರೆಂಬ ಬಿರುದುಗಳನ್ನು ಪಡೆದಿದ್ದಾರೆ.

ಅಂತಹವರ ಸಾಲಿಗೆ ನೆದರ್ಲೆಂಡ್ಸ್‌ನ ಈಜುಗಾರ ಪೀಟರ್ ವ್ಯಾನ್ ಡೆನ್ ಹೂಗೆನ್‌ಬ್ಯಾಂಡ್ ಅವರು ಸಹ ಸೇರುತ್ತಾರೆ. ಈತ ತನ್ನ ಸಾಧನೆಯ ಹಾದಿಯಲ್ಲಿ ಪಟ್ಟ ಕಷ್ಟಗಳೇ ಇವರನ್ನು ಇಂದು ಮಹಾನ್​ ಸಾಧಕರ ಸಾಲಿನಲ್ಲಿ ತಂದು ನಿಲ್ಲಿಸಿದೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪೀಟರ್ ವ್ಯಾನ್ ಡೆನ್ ಚಿಕ್ಕಂದಿನಲ್ಲೇ ಪ್ರಸಿದ್ಧ ಈಜುಪಟು ಆಗಬೇಕೆಂದು ಆಸೆ ಪಟ್ಟಿದ್ದರು. ಆದರೆ ಅವರಿಗೆ ತರಬೇತಿಗಾಗಿ ಹಣ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹಣದ ಕೊರತೆಯಿಂದಾಗಿ ತಂಡದ ಕೋಚ್ ತರಬೇತಿಯನ್ನು ಅರ್ದಕ್ಕೆ ನಿಲ್ಲಿಸಿ ಹೊರಟುಹೋದರು.

ಇದನ್ನು ಗಮನಿಸಿದ ಪೀಟರ್ ವ್ಯಾನ್ ಡೆನ್ ಅವರ ತಂದೆ ಮಗನಿಗೆ ಮಾತ್ರವಲ್ಲದೆ ಇಡೀ ತಂಡಕ್ಕೆ ಹಣವನ್ನು ಸಂಗ್ರಹಿಸಿ ಮಗನ ಆಸೆಗೆ ನೆರವಾದರು. ತಂದೆಯ ಶ್ರಮವನ್ನು ವ್ಯರ್ಥ ಮಾಡದ ಮಗ ಪೀಟರ್ ವ್ಯಾನ್ ಡೆನ್, ಒಲಿಂಪಿಕ್​ನಲ್ಲಿ ಚಿನ್ನ ಗೆಲ್ಲುವ ಮೂಲಕ ತಂದೆಯ ಶ್ರಮಕ್ಕೆ ಪ್ರತಿಫಲ ತಂದುಕೊಟ್ಟರು. ಇಂದಿಗೂ, ಏಳು ಪದಕಗಳನ್ನು ಗೆದ್ದ ನೆದರ್ಲೆಂಡ್ಸ್‌ನ ವ್ಯಾನ್ ಡೆನ್ ಅವರನ್ನು, ಶ್ರೇಷ್ಠ ಒಲಿಂಪಿಕ್ ಚಾಂಪಿಯನ್ ಎಂದು ಕರೆಯಲಾಗುತ್ತದೆ.

ತಂದೆಯೊಂದಿಗೆ ಪೀಟರ್ ವ್ಯಾನ್ ಡೆನ್ ಹೂಗೆನ್‌ಬ್ಯಾಂಡ್

ಮಗನಿಗಾಗಿ, ತಂದೆ ತರಬೇತಿ ಹಣವನ್ನು ಸಂಗ್ರಹಿಸಿದರು.. 1993 ರಲ್ಲಿ, ವ್ಯಾನ್‌ ಅವರ ಒಲಿಂಪಿಕ್ ಪ್ರಯಾಣ ಆರಂಭವಾಯಿತು. ಯುರೋಪಿನಲ್ಲಿ ನಡೆದ ಯೂತ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದರು. ಮೂರು ವರ್ಷಗಳ ನಂತರ, ಒಲಿಂಪಿಕ್ ಕ್ರೀಡಾಕೂಟ ಅಟ್ಲಾಂಟಾದಲ್ಲಿ ನಡೆಯಬೇಕಿತ್ತು. ಈ ಕ್ರೀಡಾಕೂಟ ಆರಂಭಕ್ಕೂ ಮೊದಲು, ರಾಷ್ಟ್ರೀಯ ತಂಡದ ಕೋಚ್, ಸ್ಟ್ರಿಡ್ ವ್ಯಾನ್ ಡೆನ್ ಹೊಗೆನ್‌ಬ್ಯಾಂಡ್, ಹಣದ ಕೊರತೆಯಿಂದಾಗಿ ಪೀಟರ್ ಅವರನ್ನು ತಂಡದಿಂದ ಹೊರಹಾಕಲು ಪ್ರಯತ್ನಿಸಿದರು. ಇದನ್ನು ಅರಿತ ಪೀಟರ್ ಅವರ ತಂದೆ ಸೆಯುಸ್ ರೆನ್ ವ್ಯಾನ್ ಡಾನ್ ಮಗನ ಸಹಾಯಕ್ಕೆ ನಿಂತರು.

ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದ ಜನರೊಂದಿಗೆ ಪರಿಚಯ ಹೊಂದಿದ್ದ ಸೆಯುಸ್ ರೆನ್ ವ್ಯಾನ್ ಡಾನ್ ತರಬೇತುದಾರನ ಹಣಕ್ಕಾಗಿ ಒಂದು ನಿಧಿಯನ್ನು ರಚಿಸಿದರು. ಸುಮಾರು 20 ಪ್ರಾಯೋಜಕರನ್ನು ಒಗ್ಗೂಡಿಸಿ, ಪ್ರತಿಯೊಬ್ಬರಿಂದ 2500 ಡಾಲರ್​ ಹಣ ಸಂಗ್ರಹಿಸಿದರು. ಈ ಹಣದ ಸಹಾಯದಿಂದ ಅವರು ಹೊಸ ತರಬೇತುದಾರರನ್ನು ತಂಡಕ್ಕೆ ನೇಮಕ ಮಾಡಿದರು. ಈ ನಿಧಿಯ ಸಹಾಯದಿಂದ ವ್ಯಾನ್ ಮನೆಯಲ್ಲಿಯೇ ಹೊಸ ಈಜು ಕೇಂದ್ರವನ್ನೂ ತೆರೆಯಲಾಯಿತು. ತನ್ನ ತಂದೆಯ ಈ ಪ್ರಯತ್ನಗಳನ್ನು ವ್ಯರ್ಥ ಮಾಡದ ವ್ಯಾನ್, ದೇಶಕ್ಕಾಗಿ ಒಲಂಪಿಕ್​ನಲ್ಲಿ ಮೂರು ಚಿನ್ನದ ಪದಕ ಗೆಲ್ಲುವುದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದನು.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಇತಿಹಾಸ ಬರೆದ ವ್ಯಾನ್​.. ತಮ್ಮ ನಾಲ್ಕನೇ ವಯಸ್ಸಿನಲ್ಲಿ ಈಜಲು ಪ್ರಾರಂಭಿಸಿದ ವ್ಯಾನ್​, ಮೊದಲು ಅಟ್ಲಾಂಟಾದಲ್ಲಿನ 1996 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಆ ವರ್ಷ ಅವರು 100 ಮೀಟರ್ ಫ್ರೀಸ್ಟೈಲ್ ಮತ್ತು 400 ಮೀಟರ್ ಈಜು ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಇದರ ನಂತರ, 2000 ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅವರ ಕನಸು ನನಸಾಯಿತು. 100 ಮೀಟರ್ ಮತ್ತು 200 ಮೀಟರ್ ಈಜು ಸ್ಪರ್ಧೆಯಲ್ಲಿ ವಿಶ್ವ ದಾಖಲೆಗಳೊಂದಿಗೆ ಪದಕಗಳನ್ನು ಗೆದ್ದರು. 2004 ರ ಅಥೆನ್ಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು.

ವ್ಯಾನ್ ಡೆನ್ ಹೂಗೆನ್‌ಬ್ಯಾಂಡ್ ನಿವೃತ್ತಿ ಜೀವನ.. 2008 ರಲ್ಲಿ ನಡೆದ ಬೀಜಿಂಗ್‌ ಒಲಂಪಿಕ್​ನಲ್ಲಿ 100 ಮೀಟರ್​ ಈಜು ಸ್ಪರ್ಧೆಯ ಫೈನಲ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟ ವ್ಯಾನ್​, ಕೆಲವೇ ನಿಮಿಷಗಳಲ್ಲಿ ತಮ್ಮ ನಿವೃತ್ತಿ ಘೋಷಿಸಿದರು. ಆದರೆ ಇಂದು ಸಹ ವ್ಯಾನ್ ಡೆನ್ ಹೂಗೆನ್‌ಬ್ಯಾಂಡ್ ಈಜುವುದನ್ನು ಮುಂದುವರೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಈಜು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ನಿವೃತ್ತಿಯಾದ ಸ್ವಲ್ಪ ಸಮಯದ ನಂತರ, ಅವರನ್ನು 2010 ರ ಅಂತರರಾಷ್ಟ್ರೀಯ ಪ್ಯಾರ ಒಲಿಂಪಿಕ್ ಸಮಿತಿಯ ಈಜು ಚಾಂಪಿಯನ್‌ಶಿಪ್‌ನ ರಾಯಭಾರಿಯಾಗಿ ನೇಮಿಸಲಾಯಿತು. ಯುರೋಪಿಯನ್ ಯೂತ್ ಒಲಿಂಪಿಕ್ ಪಂದ್ಯಾವಳಿಗಳನ್ನು ಆಯೋಜಿಸುವುದರ ಹೊರತಾಗಿ, ವ್ಯಾನ್ ಡೆನ್ ಹೂಗೆನ್‌ಬ್ಯಾಂಡ್ ಯುರೋಸ್ಪೋರ್ಟ್‌ನ ನಿರೂಪಕರಾಗಿ ಕೆಲಸ ಮಾಡಿದರು. ವ್ಯಾನ್ ಡೆನ್ ಹೂಗೆನ್ಬ್ಯಾಂಡ್ ನೆದರ್‌ಲ್ಯಾಂಡ್ಸ್‌ನ ಪ್ರಮುಖ ಈಜುಗಾರರಲ್ಲಿ ಒಬ್ಬರಾಗಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಒಟ್ಟು ನಾಲ್ಕು ಒಲಿಂಪಿಕ್ಸ್​ನಲ್ಲಿ ಭಾಗವಹಿಸಿ, ಏಳು ಒಲಿಂಪಿಕ್ ಪದಕಗಳನ್ನು ಗಳಿಸಿದರು.

ಹೊಸ ದಾಖಲೆ ಸೃಷ್ಟಿಸಿದ 65 ವರ್ಷದ ಈಜುಗಾರ

Published On - 3:12 pm, Thu, 4 February 21

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್