Video: ಕೇರಳದಲ್ಲಿ ಫುಟ್‌ಬಾಲ್ ಪಂದ್ಯ ವೀಕ್ಷಣೆ ವೇಳೆ ಗ್ಯಾಲರಿ ಕುಸಿದು 200 ಜನರಿಗೆ ಗಾಯ; ಐವರ ಸ್ಥಿತಿ ಗಂಭೀರ

| Updated By: ಪೃಥ್ವಿಶಂಕರ

Updated on: Mar 20, 2022 | 11:48 AM

ಫುಟ್ಬಾಲ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗಾಗಿ ತಾತ್ಕಾಲಿಕವಾಗಿ ನಿರ್ಮಿಸಿದದ್ದ ಗ್ಯಾಲರಿ ಕುಸಿದು ಈ ಅವಘಡ ಸಂಭವಿಸಿದೆ. ಇದರಲ್ಲಿ ಸುಮಾರು 200 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Video: ಕೇರಳದಲ್ಲಿ ಫುಟ್‌ಬಾಲ್ ಪಂದ್ಯ ವೀಕ್ಷಣೆ ವೇಳೆ ಗ್ಯಾಲರಿ ಕುಸಿದು 200 ಜನರಿಗೆ ಗಾಯ; ಐವರ ಸ್ಥಿತಿ ಗಂಭೀರ
ಗ್ಯಾಲರಿ ಕುಸಿತದ ಫೋಟೋ
Follow us on

ಕೇರಳದಲ್ಲಿ ಫುಟ್ಬಾಲ್ ಪಂದ್ಯದ (football match) ವೇಳೆ ಈ ಅವಘಡ ಸಂಭವಿಸಿದ್ದು, ಮಲಪ್ಪುರಂ ಜಿಲ್ಲೆಯ ವಂದೂರು ಬಳಿ ಈ ದುರ್ಘಟನೆ ನಡೆದಿದೆ. ಫುಟ್ಬಾಲ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗಾಗಿ ತಾತ್ಕಾಲಿಕವಾಗಿ ನಿರ್ಮಿಸಿದದ್ದ ಗ್ಯಾಲರಿ ಕುಸಿದು (gallery collapsed) ಈ ಅವಘಡ ಸಂಭವಿಸಿದೆ. ಇದರಲ್ಲಿ ಸುಮಾರು 200 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಇದೇ ವೇಳೆ ವಿದ್ಯುತ್ ಸರಬರಾಜಿಗಾಗಿ ಅಲವಡಿಸಲಾಗಿದ್ದ ಪೋಲ್ ಬಿದ್ದು ಐವರ ಸ್ಥಿತಿ ಗಂಭೀರವಾಗಿದೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಘಡ ಸಂಭವಿಸಿದಾಗ ಪಂದ್ಯ ವೀಕ್ಷಿಸಲು 2 ಸಾವಿರಕ್ಕೂ ಹೆಚ್ಚು ಮಂದಿ ಗ್ಯಾಲರಿಯಲ್ಲಿ ಸೇರಿದ್ದರು ಎಂದು ವರದಿಯಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಎರಡು ಸ್ಥಳೀಯ ತಂಡಗಳ ನಡುವಿನ ಫೈನಲ್ ಪಂದ್ಯ ವೀಕ್ಷಿಸಲು ಜನರು ಬಂದಿದ್ದರು.

ಕಾಳಿಕಾವು-ವಂದೂರು ರಸ್ತೆಯ ಪೂಂಗೋಡು ಫುಟ್ಬಾಲ್ ಮೈದಾನದಲ್ಲಿ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ವಂಡೂರು ಮತ್ತು ಸುತ್ತಮುತ್ತಲಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೂವರನ್ನು ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 9.30ರ ಸುಮಾರಿಗೆ ಗ್ಯಾಲರಿ ಕುಸಿದು ಬಿದ್ದಾಗ ಅದರಲ್ಲಿ 1000ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಿದಿರು ಮತ್ತು ಅಡಿಕೆ ಮರದ ಹಲಗೆಗಳಿಂದ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಕಳೆದ ಎರಡು ದಿನಗಳಲ್ಲಿ ಈ ಪ್ರದೇಶದಲ್ಲಿ ಬಿದ್ದ ಬೇಸಿಗೆಯ ತುಂತುರು ಮಳೆಯಿಂದಾಗಿ ಭಾರ ತಡೆಯಲಾಗಿದೆ ಈ ಗ್ಯಾಲರಿ ಕುಸಿದು ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಗಾಯಗೊಂಡವರಲ್ಲಿ ಹಲವರಿಗೆ ಕಾಲು ಮತ್ತು ಕೈಗಳು ಮುರಿದಿದ್ದು, ಇವರಲ್ಲಿ 100 ಕ್ಕೂ ಅಧಿಕವಾಗಿ ಮಕ್ಕಳೇ ಇದ್ದಾರೆ ಎಂದು ಹೇಳಲಾಗುತ್ತಿದೆ.

ಸಂಘಟಕರ ಅಜಾಗೂರಕತೆ
ಗ್ಯಾಲರಿ ಸಂಪೂರ್ಣ ಭರ್ತಿಯಾಗಿದ್ದರೂ ವೀಕ್ಷಕರು ಬರುವುದನ್ನು ತಡೆಯಲು ಸಂಘಟಕರಿಂದ ಆಗದ ಕಾರಣ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದರಲ್ಲಿ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ರಷ್ಯಾ- ಉಕ್ರೇನ್ ಯುದ್ಧ; ಶಿಕ್ಷಣ ವಂಚಿತ ಉಕ್ರೇನ್ ಮಕ್ಕಳ ನೆರವಿಗೆ ಬಂದ ಟೆನಿಸ್ ಲೆಜೆಂಡ್ ರೋಜರ್ ಫೆಡರರ್

Published On - 11:37 am, Sun, 20 March 22