Tokyo Olympics 2020: ಅತ್ಯುತ್ತಮ ಸ್ಪರ್ಶದಲ್ಲಿರುವ ವಿನೇಶ್ ಫೋಗಟ್​ರಿಂದ ಕುಸ್ತಿಯಲ್ಲಿ ಪದಕ ಖಚಿತ ಅಂತ ಎಲ್ಲರೂ ಹೇಳುತ್ತಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 27, 2021 | 9:41 PM

ರಿಯೋ ಒಲಂಪಿಕ್​ 2016 ನಲ್ಲಿ ಪದಕ ಗೆಲ್ಲಲು ವಿಫಲರಾದ ವಿನೇಶ್ ಅಲ್ಲಿ ಎದುರಾದ ನಿರಾಶೆಯನ್ನು 2018 ರಲ್ಲಿ ನಡೆದ ಕಾಮನ್​ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸರಿಪಡಿಸಿಕೊಂಡರು.

Tokyo Olympics 2020: ಅತ್ಯುತ್ತಮ ಸ್ಪರ್ಶದಲ್ಲಿರುವ ವಿನೇಶ್ ಫೋಗಟ್​ರಿಂದ ಕುಸ್ತಿಯಲ್ಲಿ ಪದಕ ಖಚಿತ ಅಂತ ಎಲ್ಲರೂ ಹೇಳುತ್ತಿದ್ದಾರೆ!
ವಿನೇಶ್ ಫೋಗಟ್
Follow us on

ಭಾರತಕ್ಕೆ ಪದಕ ಗೆದ್ದುಕೊಡುವರೆಂದು ನಿರೀಕ್ಷಿಸಲಾಗಿರುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಟೊಕಿಯೋಗೆ ಹೊರಡುವ ಮೊದಲು ಅತ್ಯುತ್ತಮ ಫಾರ್ಮ್​ನಲ್ಲಿದ್ದಿದ್ದು ನಿಜ. ಬೇರೆ ಯಾವುದೇ ನೆಚ್ಚಿನ ಕ್ರೀಡಾಪಟುವಿನಿಂದ ಪದಕ ಗೆಲ್ಲವುದು ಸಾಧ್ಯವಾಗದೆ ಹೋದರೂ ವಿನೇಶ್ ಅವರಿಂದ ತಪ್ಪಲಾರದು ಅಂತ ಭಾರತದ ಕ್ರೀಡಾವಲಯಗಳಲ್ಲಿ ಚರ್ಚೆಯಾಗುತ್ತಿದೆ. ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದ ಗೀತಾ ಫೋಗಟ್​ ಮತ್ತು ಬಬಿತಾ ಫೋಗಟ್ ಅವರ ಸೋದರಿ ಸಂಬಂಧಿ ಆಗಿರುವ ವಿನೇಶ್ ಅವರ ಛಾಯೆಯಿಂದ ಹೊರಬಂದು ತಮ್ಮ ಛಾಪು ಮೂಡಿಸಿದ್ದಾರೆ. ಕಾಮನ್​ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನದ ಪದಕ ಗೆದ್ದು ಭಾರರದ ಏಕೈಕ ಮಹಿಳಾ ಕುಸ್ತಿಪಟು ಎಂಬ ಹಿರಿಮೆಯ ಹರಿಯಾಣದ 26-ವರ್ಷ ವಯಸ್ಸಿನ ವಿನೇಶ್ ಆವರನ್ನು ಅರ್ಜುನ ಮತ್ತು ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ.

ರಿಯೋ ಒಲಂಪಿಕ್​ 2016 ನಲ್ಲಿ ಪದಕ ಗೆಲ್ಲಲು ವಿಫಲರಾದ ವಿನೇಶ್ ಅಲ್ಲಿ ಎದುರಾದ ನಿರಾಶೆಯನ್ನು 2018 ರಲ್ಲಿ ನಡೆದ ಕಾಮನ್​ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸರಿಪಡಿಸಿಕೊಂಡರು.

53-ಕೆಜಿ ವಿಭಾಗದಲ್ಲಿ ಭಾಗವಹಿಸಲಾರಂಭಿಸಿದ ನಂತರ ಆಕೆ 2019 ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದು ಅದೇ ವರ್ಷ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದರು.

ನಿಮಗೂ ಗೊತ್ತಿರಬಹುದು, 2021ರಲ್ಲಿ ವಿನೇಶ್ ಮೂರು ಸುವರ್ಣ ಪದಕಗಳನ್ನು ಗೆದ್ದರು. ಮಾರ್ಚ್​ನಲ್ಲಿ ಮಟ್ಟೋ ಪೆಲ್ಲಿಕೋನ್​ನಲ್ಲಿ ವಿನೇಶ್ ಚಿನ್ನ ಗೆದ್ದ ಒಂದು ತಿಂಗಳ ನಂತರ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಬಂಗಾರದ ಪದಕ ಗೆದ್ದರು. ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದ ಅವರು ಕಳೆದ ತಿಂಗಳು ವಾರ್ಸಾನಲ್ಲಿ ನಡೆದ ಪೋಲೆಂಡ್​ ಓಪನ್​ನಲ್ಲೂ ಚಿನ್ನದ ಪದಕ ಗೆದ್ದರು.

2016ರಲ್ಲಿ ಅರ್ಜುನ ಮತ್ತು 2020ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ವಿನೇಶ್ ಟೋಕಿಯೋ ಒಲಂಪಿಕ್ಸ್​ನಲ್ಲಿ ಚಾಂಪಿಯನ್​ ಪ್ರದರ್ಶನ ನೀಡಿ ಭಾರತಕ್ಕೆ ಪದಕ ಗೆದ್ದೇ ಗೆಲ್ಲುತ್ತಾರೆಂದು ಅವರ ಕೋಚ್​ ಸಹ ಹೇಳಿದ್ದಾರೆ. 2016 ರ ರಿಯೋ ಒಲಂಪಿಕ್ಸ್​ನಲ್ಲಾದ ನಿರಾಶೆಯನ್ನು ಹಿಮ್ಮೆಟ್ಟಿಸಬೇಕಾದರೆ ವಿನೇಶ್ ಪದಕ ಗೆಲ್ಲಲೇಬೇಕು ಎಂದು ಭಾರತದ ಕ್ರೀಡಾಭಿಮಾನಿ ಅಪೇಕ್ಷಿಸುತ್ತಿದ್ದಾನೆ.

ಇದನ್ನೂ ಓದಿ: ಟೊಕಿಯೋ ಒಲಂಪಿಕ್ಸ್ 2020: ಜಿಮ್ನಾಸ್ಟಿಕ್ಸ್ ಸ್ಪರ್ಧೆಯಿಂದ ನಾಟಕೀಯವಾಗಿ ಹಿಂದೆ ಸರಿದ ಅಮೇರಿಕದ ಸಿಮೋನ್ ಬೈಲ್ಸ್ ಒಲಂಪಿಕ್ಸ್​ನಲ್ಲಿ ಮುಂದುವರಿಯುವುದು ಅನುಮಾನ