Tokyo Olympics 2020: ಟೋಕಿಯೋ ಒಲಿಂಪಿಕ್ಸ್​: ನಾಳೆ 4 ವಿಭಾಗಗಳಲ್ಲಿ ಭಾರತ ಸ್ಪರ್ಧೆ

| Updated By: ಝಾಹಿರ್ ಯೂಸುಫ್

Updated on: Aug 02, 2021 | 10:41 PM

Tokyo Olympics India's Schedule: ಟೋಕಿಯೋ ಒಲಿಂಪಿಕ್ಸ್‌ನ ಹಾಕಿ ಪಂದ್ಯಾವಳಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ ಮಂಗಳವಾರ ಸೆಮಿಫೈನಲ್ ಆಡಲಿದೆ

Tokyo Olympics 2020: ಟೋಕಿಯೋ ಒಲಿಂಪಿಕ್ಸ್​: ನಾಳೆ 4 ವಿಭಾಗಗಳಲ್ಲಿ ಭಾರತ ಸ್ಪರ್ಧೆ
Tokyo Olympics 2020
Follow us on

ಟೋಕಿಯೋ ಒಲಿಂಪಿಕ್ಸ್ (Tokyo Olympics 2020) ಕ್ರೀಡಾಕೂಟ​ ನಾಳೆ 12ನೇ ದಿನಕ್ಕೆ ಕಾಲಿಡಲಿದೆ. ಕಳೆದ 11 ದಿನದಲ್ಲಿ ಭಾರತದ ಪರ ವೇಟ್​ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕಂಚು ಪದಕ ಗೆದ್ದಿದ್ದಾರೆ. ಈ 2 ಮೆಡಲ್​ಗಳೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 62ನೇ ಸ್ಥಾನದಲ್ಲಿದೆ. ಈಗಾಗಲೇ ಬಹುತೇಕ ವಿಭಾಗದಲ್ಲಿ ಭಾರತೀಯ ಹೋರಾಟ ಅಂತ್ಯವಾಗಿದ್ದು, ಮಂಗಳವಾರ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು 4 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಹಾಗಿದ್ರೆ ಒಲಿಂಪಿಕ್ಸ್​ನ 12ನೇ ದಿನದ ಭಾರತದ ವೇಳಾಪಟ್ಟಿ (Tokyo Olympics India’s Schedule)  ನೋಡೋಣ.

ಶಾಟ್ ಪುಟ್(ಸಮಯ-ಬೆಳಿಗ್ಗೆ 3:45): ಪುರುಷರ ಶಾಟ್‌ಪುಟ್‌ ಎಸೆತದ ಅರ್ಹತಾ ಸುತ್ತು ಕೂಡ ಮಂಗಳವಾರ ನಡೆಯಲಿದ್ದು, ಈ ವಿಭಾಗದಲ್ಲಿ ತಜಿಂದರ್ ಪಾಲ್ ಸಿಂಗ್ ತೂರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಜಾವೆಲಿನ್ ಎಸೆತ ( ಬೆಳಿಗ್ಗೆ 5.50 ಕ್ಕೆ): ಅಥ್ಲೆಟಿಕ್ಸ್‌ ಮಹಿಳಾ ವಿಭಾಗದ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಗ್ರೂಪ್ ಎನಲ್ಲಿ ಭಾರತದ ಅನ್ನು ರಾಣಿ ಸ್ಪರ್ಧಿಸಲಿದ್ದಾರೆ.

ಪುರುಷರ ಹಾಕಿ ಸೆಮಿಫೈನಲ್ ಪಂದ್ಯ (ಬೆಳಿಗ್ಗೆ 7 ಗಂಟೆಗೆ): ಟೋಕಿಯೋ ಒಲಿಂಪಿಕ್ಸ್‌ನ ಹಾಕಿ ಪಂದ್ಯಾವಳಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ ಮಂಗಳವಾರ ಸೆಮಿಫೈನಲ್ ಆಡಲಿದೆ. ಓಯಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ರೆಸ್ಲಿಂಗ್ ( ಸಮಯ- ಬೆಳಿಗ್ಗೆ 8:30) : 62 ಕೆಜಿ ವಿಭಾಗದ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿಯ 16ನೇ ಘಟ್ಟದ ಪಂದ್ಯಗಳು ನಡೆಯಲಿದೆ. ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ವಿರುದ್ಧ ಭಾರತದ ಸೋನಮ್ ಮಲಿಕ್ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಸೋನಮ್ ಮಲಿಕ್ ಕ್ವಾರ್ಟರ್‌ಫೈನಲ್ ಪ್ರವೇಶಿಸಲಿದ್ದು, ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಕೂಡ ಮಂಗಳವಾರವೇ ಇರಲಿದೆ.

ಇದನ್ನೂ ಓದಿ: Virat Kohli: ಇಂಗ್ಲೆಂಡ್ ವಿರುದ್ದ ಸಿಡಿಸಿದ್ರೆ ಈ 5 ದಾಖಲೆಗಳು ಕೊಹ್ಲಿ ಪಾಲಾಗುವುದು ಪಕ್ಕಾ

ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ

ಇದನ್ನೂ ಓದಿ: PV Sindhu: ಒಲಿಂಪಿಕ್ಸ್​ನಲ್ಲಿ ಈ ಸಾಧನೆ ಮಾಡಿದ್ದು ಇವರಿಬ್ಬರೇ..!