ಟೋಕಿಯೊದಿಂದ ಭಾರತಕ್ಕೆ ವಾಪಸ್ಸಾದ ಒಲಂಪಿಕ್ಸ್ ಹೀರೋಗಳು; ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ

| Updated By: ಪೃಥ್ವಿಶಂಕರ

Updated on: Aug 09, 2021 | 5:43 PM

ನೀರಜ್ ಚೋಪ್ರಾ, ರವಿ ದಹಿಯಾ, ಭಜರಂಗ್ ಪುನಿಯಾ ಸೇರಿದಂತೆ ಎಲ್ಲಾ ಭಾರತೀಯ ಆಟಗಾರರು ಟೋಕಿಯೊದಿಂದ ದೆಹಲಿಗೆ ಮರಳಿದರು. ಈ ಎಲ್ಲ ಆಟಗಾರರು ಆಗಸ್ಟ್ 9 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಟೋಕಿಯೊದಿಂದ ಭಾರತಕ್ಕೆ ವಾಪಸ್ಸಾದ ಒಲಂಪಿಕ್ಸ್ ಹೀರೋಗಳು; ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ
ಟೋಕಿಯೊದಿಂದ ಭಾರತಕ್ಕೆ ವಾಪಸ್ಸಾದ ಒಲಂಪಿಕ್ಸ್ ಹೀರೋಗಳು
Follow us on

ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ ಮುಗಿದ ನಂತರ ಭಾರತೀಯ ಆಟಗಾರರು ತಾಯ್ನಾಡಿಗೆ ಮರಳಲು ಆರಂಭಿಸಿದ್ದಾರೆ. ನೀರಜ್ ಚೋಪ್ರಾ, ರವಿ ದಹಿಯಾ, ಭಜರಂಗ್ ಪುನಿಯಾ ಸೇರಿದಂತೆ ಎಲ್ಲಾ ಭಾರತೀಯ ಆಟಗಾರರು ಟೋಕಿಯೊದಿಂದ ದೆಹಲಿಗೆ ಮರಳಿದರು. ಈ ಎಲ್ಲ ಆಟಗಾರರು ಆಗಸ್ಟ್ 9 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಎಲ್ಲ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಟಗಾರರನ್ನು ಸ್ವಾಗತಿಸಲು ಕ್ರೀಡಾ ಅಧಿಕಾರಿಗಳು, ವಿವಿಧ ಒಕ್ಕೂಟಗಳು, ಮಾಧ್ಯಮಗಳು ಹಾಗೂ ಹಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಡ್ರಮ್ ಮತ್ತು ತ್ರಿವರ್ಣವನ್ನು ಹೊತ್ತು ಆಟಗಾರರನ್ನು ಸ್ವಾಗತಿಸಿದರು. ಈ ಕಾರಣದಿಂದಾಗಿ, ಆಟಗಾರರು ವಿಮಾನ ನಿಲ್ದಾಣದಿಂದ ಹೊರಗೆ ಬರಲು ಬಹಳ ಸಮಯ ತೆಗೆದುಕೊಂಡರು.

ಮೊದಲು ಭಾರತೀಯ ಅಥ್ಲೆಟಿಕ್ಸ್ ತಂಡ ಮತ್ತು ಹಾಕಿ ತಂಡಗಳ ಸದಸ್ಯರು ವಾಪಸ್ಸಾದರು. ಅಥ್ಲೆಟಿಕ್ಸ್ ತಂಡದ ಸದಸ್ಯರು ಮೊದಲಿಗರಾದರೆ ಹಾಕಿ ತಂಡದ ಆಟಗಾರರು ಎರಡನೇ ವಿಮಾನದಲ್ಲಿ ಭಾರತವನ್ನು ತಲುಪಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಎಲ್ಲಾ ಆಟಗಾರರಿಗೆ ಹೂಮಾಲೆ ಹಾಕಿ ಗೌರವಿಸಲಾಯಿತು. ಟೋಕಿಯೊ ಕ್ರೀಡಾಕೂಟದಲ್ಲಿ ಪುರುಷರ ಹಾಕಿಯಲ್ಲಿ ಭಾರತ ಕಂಚಿನ ಪದಕ ಗೆದ್ದರೆ ಮಹಿಳಾ ತಂಡ ನಾಲ್ಕನೇ ಸ್ಥಾನ ಪಡೆಯಿತು. ಅದೇ ಸಮಯದಲ್ಲಿ, ಈ ಬಾರಿ ಭಾರತ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದೆ. ಜಾವೆಲಿನ್ ಥ್ರೋದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರು. ಟೋಕಿಯೊ ಗೇಮ್ಸ್ ಮತ್ತು ಅಥ್ಲೆಟಿಕ್ಸ್ ನಲ್ಲಿ ಇದು ಭಾರತದ ಮೊದಲ ಚಿನ್ನದ ಪದಕವಾಗಿದೆ.

Published On - 5:39 pm, Mon, 9 August 21