Mary Kom: ನಿವೃತ್ತಿ ಘೋಷಿಸುವಷ್ಟು ವಯಸ್ಸು ನನಗಿನ್ನು ಆಗಿಲ್ಲ! ನಾನು ಸೋತಿದ್ದೇನೆ ಎಂಬುದು ನನಗೆ 2 ಗಂಟೆ ಬಳಿಕ ಗೊತ್ತಾಯ್ತು; ಮೇರಿ ಕೋಮ್

Mary Kom: ಟೋಕಿಯೊದಿಂದ ಬರಿಗೈಯಲ್ಲಿ ಮರಳಿದ್ದು ನಿರಾಸೆ ತಂದಿದೆ ಎಂದು ಅವರು ಹೇಳಿದರು. ಪದಕವಿಲ್ಲದೆ ಹಿಂತಿರುಗಿದ್ದು ನನಗೆ ತುಂಬಾ ನೋವಾಗುತ್ತಿದೆ. ನಾನು ಪದಕದೊಂದಿಗೆ ಮರಳಲು ಬಯಸಿದ್ದೆ.

Mary Kom: ನಿವೃತ್ತಿ ಘೋಷಿಸುವಷ್ಟು ವಯಸ್ಸು ನನಗಿನ್ನು ಆಗಿಲ್ಲ! ನಾನು ಸೋತಿದ್ದೇನೆ ಎಂಬುದು ನನಗೆ 2 ಗಂಟೆ ಬಳಿಕ ಗೊತ್ತಾಯ್ತು; ಮೇರಿ ಕೋಮ್
ಮೇರಿ ಕೋಮ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 31, 2021 | 9:36 PM

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾರತದ ಶ್ರೇಷ್ಠ ಬಾಕ್ಸರ್ ಎಂಸಿ ಮೇರಿ ಕೋಮ್ ಆಘಾತಕಾರಿ ಸೋಲಿನ ನಂತರ ದೇಶಕ್ಕೆ ಮರಳಿದ್ದಾರೆ. ಕೊಲಂಬಿಯಾದ ಇಂಗ್ರಿಟ್ ವೆಲೆನ್ಸಿಯಾ ವಿರುದ್ಧ ಮೇರಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ಎರಡನೇ ಒಲಿಂಪಿಕ್ ಪದಕ ಗೆಲ್ಲುವ ಕನಸು ಭಗ್ನಗೊಂಡಿತು. ಇದು ಮೇರಿಯವರ ಕೊನೆಯ ಒಲಿಂಪಿಕ್ಸ್, ಆದರೆ ಭಾರತೀಯ ದಂತಕಥೆಗೆ ಇನ್ನೂ ರಿಂಗ್ ಬಿಡುವ ಮನಸ್ಸಿಲ್ಲ ಮತ್ತು ಕನಿಷ್ಠ 40 ವರ್ಷ ವಯಸ್ಸಿನವರೆಗೂ ಸ್ಪರ್ಧಾತ್ಮಕ ಬಾಕ್ಸಿಂಗ್‌ನಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮೇರಿ ಕೋಮ್ ಮುಂದೆ ಇರುವ ದೊಡ್ಡ ಸ್ಪರ್ಧೆಯೆಂದರೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಬಿಎ ವಿಶ್ವ ಚಾಂಪಿಯನ್‌ಶಿಪ್, ಇದು ಅಕ್ಟೋಬರ್‌ನಲ್ಲಿ ನಡೆಯಲಿದೆ.

ಭಾರತದ ಬಾಕ್ಸರ್ ಮೇರಿ ಕೋಮ್, ಟೋಕಿಯೊದಲ್ಲಿ ತಮ್ಮ ಆಟ ಮುಗಿದ ನಂತರ 31 ಜುಲೈ ಶನಿವಾರ ನವದೆಹಲಿಗೆ ಮರಳಿದರು. ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ 51 ಕೆಜಿ ವಿಭಾಗದಲ್ಲಿ ನಡೆದ ನಿಕಟ ಸ್ಪರ್ಧೆಯಲ್ಲಿ 3-2ರಲ್ಲಿ ಕೊಲಂಬಿಯಾದ ಬಾಕ್ಸರ್‌ನಿಂದ ಸೋಲಿಸಲ್ಪಟ್ಟರು. ದೇಶಕ್ಕೆ ಹಿಂತಿರುಗಿದ ನಂತರ, ಅವರು ತಮ್ಮ ಮುಂದಿನ ಯೋಜನೆಯನ್ನು ಸ್ಪಷ್ಟಪಡಿಸಿದ್ದಾರೆ. ANI ಯ ವರದಿ ಪ್ರಕಾರ, ಮೇರಿ ನಿವೃತ್ತಿಯ ಊಹಾಪೋಹವನ್ನು ನಿರಾಕರಿಸಿದರು. ಜೊತೆಗೆ ನಿವೃತ್ತಿ ಘೋಷಿಸುವಷ್ಟು ವಯಸ್ಸು ನನಗಿನ್ನು ಆಗಿಲ್ಲ. ನಾನು 40 ವರ್ಷದವವರೆಗೆ ಆಡುವ ಸಾಮಥ್ರ್ಯ ಹೊಂದಿದ್ದೇನೆ ಎಂದಿದ್ದಾರೆ.

ಅಪ್ರಾಮಾಣಿಕ ತೀರ್ಪಿನ ಬಗ್ಗೆ ಅಸಮಾಧಾನ ಮತ್ತೊಂದೆಡೆ, ಮೇರಿ ಕೋಮ್ ಕೊನೆಯ -16 ಪಂದ್ಯದಲ್ಲಿ ಸೋಲಿನ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಮತ್ತೊಮ್ಮೆ ಅಪ್ರಾಮಾಣಿಕ ತೀರ್ಪಿನ ಬಗ್ಗೆ ಗುಡುಗಿದರು. ನಾನು ಈ ಮೊದಲು ಎರಡು ಸುತ್ತುಗಳಲ್ಲಿ ಗೆದ್ದಿದ್ದೆ, ಹಾಗಾಗಿ ನಾನು ಪಂದ್ಯವನ್ನು ಸೋತಿದ್ದಾದರು ಹೇಗೆ ಎಂಬ ಪ್ರಶ್ನೆ ಹಾಕಿದರು. ಜೊತೆಗೆ ನಾನು ದೇಶದ ಕ್ಷಮೆ ಕೇಳಲು ಬಯಸುತ್ತೇನೆ ಎಂದರು. ಮೇರಿ ಮೊದಲ ಸುತ್ತಿನಲ್ಲಿ ಸೋತರು, ಆದರೆ ಮುಂದಿನ ಎರಡು ಸುತ್ತುಗಳಲ್ಲಿ ಗೆದ್ದರು, ಆದರೆ ತೀರ್ಪುಗಾರರು ನೀಡಿದ ಅಂಕದಿಂದಾಗಿ, ಮೇರಿ ಅಂತಿಮ ಫಲಿತಾಂಶದಲ್ಲಿ ಸೋಲಬೇಕಾಯ್ತು.

ಟೋಕಿಯೊದಿಂದ ಬರಿಗೈಯಲ್ಲಿ ಮರಳಿದ್ದು ನಿರಾಸೆ ತಂದಿದೆ ಎಂದು ಅವರು ಹೇಳಿದರು. ಪದಕವಿಲ್ಲದೆ ಹಿಂತಿರುಗಿದ್ದು ನನಗೆ ತುಂಬಾ ನೋವಾಗುತ್ತಿದೆ. ನಾನು ಪದಕದೊಂದಿಗೆ ಮರಳಲು ಬಯಸಿದ್ದೆ. ಇದು ದುರದೃಷ್ಟಕರವಲ್ಲ, ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಎಂದರು.

2 ಗಂಟೆಗಳ ನಂತರ ಸೋಲಿನ ಭಾವನೆ ಈ ಪಂದ್ಯದಲ್ಲಿ ನಿರ್ಧರಿಸಿದ ನಂತರ, ಮೇರಿ ತನ್ನ ಕೈಯನ್ನು ರಿಂಗ್‌ನಲ್ಲಿ ಎತ್ತಿ ಎದುರಾಳಿಯನ್ನು ಅಪ್ಪಿಕೊಂಡರು. ಮೇರಿ ತಾನು ಗೆದ್ದೆನೆಂದು ಭಾವಿಸಿದ್ದರು. ಆದರೆ ಸುಮಾರು ಎರಡು ಗಂಟೆಗಳ ನಂತರ ಅವರು ಸೋತಿದ್ದಾರೆ ಎಂದು ಟ್ವಿಟರ್ ಮೂಲಕ ತಿಳಿದುಕೊಂಡರು. ಇದರ ನಂತರ, ಮೇರಿ ಭಾವುಕರಾದರು ಮತ್ತು ನಿರ್ಧಾರದಲ್ಲಿ ಅಪ್ರಾಮಾಣಿಕತೆಯ ಆರೋಪ ಮಾಡಿದರು.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?