AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಮಹಿಳಾ ಹಾಕಿ ತಂಡಕ್ಕೆ ಒಲಿದ ಅದೃಷ್ಟ! ಐರ್ಲೆಂಡ್ ವಿರುದ್ಧ ಗೆದ್ದ ಬ್ರಿಟನ್.. ಕ್ವಾರ್ಟರ್ ಫೈನಲ್​ಗೆ ಎಂಟ್ರಿಕೊಟ್ಟ ಭಾರತ

Tokyo Olympics: ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತಂಡ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ.

Tokyo Olympics: ಮಹಿಳಾ ಹಾಕಿ ತಂಡಕ್ಕೆ ಒಲಿದ ಅದೃಷ್ಟ! ಐರ್ಲೆಂಡ್ ವಿರುದ್ಧ ಗೆದ್ದ ಬ್ರಿಟನ್.. ಕ್ವಾರ್ಟರ್ ಫೈನಲ್​ಗೆ ಎಂಟ್ರಿಕೊಟ್ಟ ಭಾರತ
ಭಾರತೀಯ ಮಹಿಳಾ ಹಾಕಿ ತಂಡ
TV9 Web
| Updated By: ಪೃಥ್ವಿಶಂಕರ|

Updated on:Jul 31, 2021 | 8:14 PM

Share

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಹಾಕಿಗೆ ಜುಲೈ 31 ಐತಿಹಾಸಿಕ ದಿನವೆಂದು ಸಾಬೀತಾಗಿದೆ. ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತಂಡ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಕ್ಯಾಪ್ಟನ್ ರಾಣಿ ರಾಂಪಾಲ್ ಅವರ ತಂಡವು ಗ್ರೂಪ್ ಹಂತದಲ್ಲಿ 2 ಪಂದ್ಯಗಳನ್ನು ಗೆದ್ದುಕೊಂಡಿತು. ಆದರೆ 3 ಪಂದ್ಯಗಳಲ್ಲಿ ಸೋಲನುಭವಿಸಿತು. ಇದರ ನಂತರ, ಕ್ವಾರ್ಟರ್ ಫೈನಲ್ ತಲುಪುವ ಭಾರತೀಯ ತಂಡದ ಭರವಸೆಯು ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ನಡುವಿನ ಫಲಿತಾಂಶದ ಮೇಲೆ ನಿಂತಿತು. ಈ ಎರಡನ ನಡುವಿನ ಪಂದ್ಯದಲ್ಲಿ ಬ್ರಿಟನ್ ಪಂದ್ಯವನ್ನು ಗೆದ್ದಿತು. ಭಾರತವು ಕ್ವಾರ್ಟರ್ ಫೈನಲ್ ತಲುಪಲು ದಾರಿ ಇದರೊಂದಿಗೆ ಸುಗಮವಾಯಿತು. ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದು ಭಾರತ ತಂಡ ಇತಿಹಾಸ ಸೃಷ್ಟಿಸಿದೆ.

ಪೂಲ್ ಎ ಯಲ್ಲಿ, ಭಾರತ ತಂಡವು 5 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು ಮತ್ತು ಅರ್ಹತೆ ಪಡೆದ ಕೊನೆಯ ತಂಡವಾಗಿತ್ತು. ಕ್ವಾರ್ಟರ್ ಫೈನಲ್ ತಲುಪಲು ಐರ್ಲೆಂಡ್‌ನ ಸೋಲು ಅಥವಾ ಪಂದ್ಯ ಡ್ರಾ ಆಗಬೇಕಿತ್ತು. ಐರ್ಲೆಂಡ್ 3 ಅಂಕಗಳನ್ನು ಹೊಂದಿತ್ತು ಮತ್ತು ಅವರು ಈ ಪಂದ್ಯದಲ್ಲಿ ಗೆದ್ದರೆ, ಅವರು 6 ಅಂಕಗಳನ್ನು ಸಹ ಪಡೆಯುತ್ತಿದ್ದರು. ಆದರೆ ಗೋಲು ವ್ಯತ್ಯಾಸದ ದೃಷ್ಟಿಯಿಂದ, ಅವರು ಭಾರತವನ್ನು ಹಿಂದಿಕ್ಕುತ್ತಿದ್ದರು. ಆದಾಗ್ಯೂ, ಅಂತಹದ್ದೇನೂ ಸಂಭವಿಸಲಿಲ್ಲ ಮತ್ತು ಇಂಗ್ಲೆಂಡ್ 2-0 ಅಂತರದಲ್ಲಿ ಗೆದ್ದು ಭಾರತಕ್ಕೆ ಕ್ವಾರ್ಟರ್ ಫೈನಲ್ ತಲುಪಲು ಸಹಾಯ ಮಾಡಿತು. ಅದೇ ಸಮಯದಲ್ಲಿ, ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡುವ ಐರಿಶ್ ತಂಡದ ಕನಸನ್ನು ನುಚ್ಚುನೂರು ಮಾಡಿತು.

ಮೊದಲ ಬಾರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಭಾರತೀಯ ಮಹಿಳಾ ಹಾಕಿ ತಂಡವು ಮೂರನೇ ಬಾರಿಗೆ ಮಾತ್ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ತಂಡವು ಮೊದಲು 1980 ಮಾಸ್ಕೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಿತು. ಅದರ ನಂತರ ತಂಡವು 2016 ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತು. ಈ ಎರಡೂ ಒಲಿಂಪಿಕ್ಸ್‌ಗಳಲ್ಲಿ, ಭಾರತ ತಂಡವು ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಾರಿಯೂ ತಂಡವು ಮೊದಲ 3 ಸತತ ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ನಂತರ ಅವರು ಐರ್ಲೆಂಡ್ ವಿರುದ್ಧ ಒಲಿಂಪಿಕ್ಸ್‌ನಲ್ಲಿ ತಮ್ಮ ಮೊದಲ ವಿಜಯವನ್ನು ಪಡೆದರು. ನಂತರ ಇಂದಿನ ಮಹತ್ವದ ಪಂದ್ಯದಲ್ಲಿ, ಭಾರತೀಯ ಮಹಿಳೆಯರು ರೋಮಾಂಚಕ ರೀತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4-3 ಗೆಲುವು ದಾಖಲಿಸುವ ಮೂಲಕ ತಮ್ಮ ಗೆಲುವು ಸಾಧಿಸಿದರು.

ಆಸ್ಟ್ರೇಲಿಯಾದೊಂದಿಗೆ ಸಮರ ಕ್ವಾರ್ಟರ್ ಫೈನಲ್ ನಲ್ಲಿ ಭಾರತ ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಪೂಲ್ ಬಿ ಯ ಎಲ್ಲಾ ಐದು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪ್ರಬಲ ಗೆಲುವುಗಳನ್ನು ದಾಖಲಿಸಿದೆ. ಆಸ್ಟ್ರೇಲಿಯಾ ತಂಡವು ಟೂರ್ನಿಯಲ್ಲಿ ಇದುವರೆಗೆ 13 ಗೋಲುಗಳನ್ನು ಗಳಿಸಿದೆ, ಆದರೆ ಒಂದೇ ಒಂದು ಗೋಲನ್ನು ಬಿಟ್ಟುಕೊಟ್ಟಿತು. ಅದೇ ಸಮಯದಲ್ಲಿ, ಭಾರತ ತಂಡವು 7 ಗೋಲುಗಳನ್ನು ಗಳಿಸಿದೆ, ಆದರೆ 14 ಗೋಲುಗಳು ಅದರ ವಿರುದ್ದ ಬಿದ್ದಿವೆ. ಈ ಪಂದ್ಯ ಆಗಸ್ಟ್ 2 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 8.30 ಕ್ಕೆ ಆರಂಭವಾಗಲಿದೆ.

ಜರ್ಮನಿ ಇತರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ. ಅದೇ ಸಮಯದಲ್ಲಿ, 3 ಬಾರಿಯ ಚಾಂಪಿಯನ್ ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್ ಅನ್ನು ಎದುರಿಸಲಿದೆ. ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಗ್ರೇಟ್ ಬ್ರಿಟನ್ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸ್ಪೇನ್ ಜೊತೆ ಸೆಣಸಲಿದೆ. ಈ ಎಲ್ಲಾ ಪಂದ್ಯಗಳು ಆಗಸ್ಟ್ 2 ರಂದು ನಡೆಯಲಿದೆ.

Published On - 7:21 pm, Sat, 31 July 21

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ