Tokyo Olympics 2020, Day 3: ಜುಲೈ 25 ರಂದು 7 ಕ್ರೀಡೆಗಳಲ್ಲಿ ಪದಕ ಭೇಟೆಗಿಳಿಯಲಿದೆ ಭಾರತ, ಪೂರ್ಣ ವೇಳಾಪಟ್ಟಿ ಇಲ್ಲಿದೆ

Tokyo Olympics 2020, Day 3: ಭಾರತ ಭಾನುವಾರ 7 ಆಟಗಳಲ್ಲಿ ಕಣಕ್ಕಿಳಿಯಲಿದೆ. ಮೊದಲು ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಮತ್ತು ಪಿ.ವಿ ಸಿಂಧು ಕೂಡ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

Tokyo Olympics 2020, Day 3: ಜುಲೈ 25 ರಂದು 7 ಕ್ರೀಡೆಗಳಲ್ಲಿ ಪದಕ ಭೇಟೆಗಿಳಿಯಲಿದೆ ಭಾರತ, ಪೂರ್ಣ ವೇಳಾಪಟ್ಟಿ ಇಲ್ಲಿದೆ
ಸಿಂಧು, ಮೇರಿ ಕೋಮ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 24, 2021 | 5:26 PM

ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನ (ಟೋಕಿಯೋ 2020) ಭಾರತಕ್ಕೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಭಾರತವು ನಿರೀಕ್ಷಿಸಿದಷ್ಟು ಪದಕಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಮೀರಾಬಾಯಿ ಚಾನು ಎರಡನೇ ದಿನ ಬೆಳ್ಳಿ ಪದಕ ಗೆದ್ದು ಮೊದಲ ಪದಕವನ್ನು ಭಾರತದ ಬ್ಯಾಗ್‌ಗೆ ಹಾಕಿದರು. ಟೋಕಿಯೊ ಒಲಿಂಪಿಕ್ಸ್‌ನ ಮೂರನೇ ದಿನ (ಅಂದರೆ 3 ನೇ ದಿನ) ಅಂದರೆ ಜುಲೈ 25 ರಂದು ನಡೆಯಲಿರುವ ಕ್ರೀಡಾಕೂಟದತ್ತ ಈಗ ಕಣ್ಣು ಹಾಯಿಸಿಬೇಕಾಗಿದೆ. ಭಾರತ ಭಾನುವಾರ 7 ಆಟಗಳಲ್ಲಿ ಕಣಕ್ಕಿಳಿಯಲಿದೆ. ಮೊದಲು ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಮತ್ತು ಪಿ.ವಿ ಸಿಂಧು ಕೂಡ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನ ಮೂರನೇ ದಿನ ಭಾರತವು ಬ್ಯಾಡ್ಮಿಂಟನ್, ಬಾಕ್ಸಿಂಗ್, ಜಿಮ್ನಾಸ್ಟಿಕ್ಸ್, ಹಾಕಿ, ರೋಯಿಂಗ್, ನೌಕಾಯಾನ ಮತ್ತು ಶೂಟಿಂಗ್‌ನಲ್ಲಿ ಪದಕಗಳನ್ನು ಗೆಲ್ಲಲು ಸಮರ ಆರಂಭಿಸಲಿದೆ. ಪಿವಿ ಸಿಂಧು ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಸಿಂಧು ಅವರ ಪಂದ್ಯವು ಭಾರತೀಯ ಸಮಯ ಬೆಳಿಗ್ಗೆ 7: 10 ಕ್ಕೆ ಪ್ರಾರಂಭವಾಗಲಿದೆ. ಬಾಕ್ಸಿಂಗ್ ಪುರುಷರ ಮತ್ತು ಮಹಿಳೆಯರ ಸ್ಪರ್ಧೆಗಳನ್ನು ಹೊಂದಿರುತ್ತದೆ. ಪುರುಷರ ಹಗುರವಾದ ವಿಭಾಗದಲ್ಲಿ ಮನೀಶ್ ಕೌಶಿಕ್ ಭಾರತದ ಪರ ಪದಕ ಗೆಲ್ಲಲು ಪ್ರಯತ್ನಿಸಲಿದ್ದಾರೆ. ಮಹಿಳಾ ಫ್ಲೈ ವೇಟ್ ವಿಭಾಗದಲ್ಲಿ, ಎಲ್ಲರ ಕಣ್ಣುಗಳು 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಮೇಲೆ ಇರಲಿದೆ. ಮನೀಶ್ ಕೌಶಿಕ್ ಅವರ ಪಂದ್ಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು, ಮೇರಿ ಕೋಮ್ ಅವರ ಪಂದ್ಯ ಭಾರತೀಯ ಸಮಯದ ಪ್ರಕಾರ ಮಧ್ಯಾಹ್ನ 1.30 ಕ್ಕೆ ನಡೆಯಲಿದೆ. ಇದಲ್ಲದೆ, ಜಿಮ್ನಾಸ್ಟಿಕ್ಸ್‌ನಲ್ಲಿ ಭಾರತದ ಪ್ರಣತಿ ನಾಯಕ್ ಹೋರಾಟ ನಡೆಸಲಿದ್ದಾರೆ.

ಭಾರತ ಆಸ್ಟ್ರೇಲಿಯಾ ನಡುವೆ ಹಾಕಿ ಪಂದ್ಯ ಜುಲೈ 25 ರಂದು ಭಾರತ ಮತ್ತು ಆಸ್ಟ್ರೇಲಿಯಾದ ಪುರುಷರ ತಂಡ ಹಾಕಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿದೆ. ಉಭಯ ತಂಡಗಳು ತಮ್ಮ ಮೊದಲ ಪಂದ್ಯವನ್ನು ಗೆದ್ದಿವೆ. ಆಸ್ಟ್ರೇಲಿಯಾ ವಿಶ್ವದ ಪ್ರಥಮ ಸ್ಥಾನದಲ್ಲಿದೆ, ಆದ್ದರಿಂದ ಅದನ್ನು ಸೋಲಿಸುವುದು ಭಾರತಕ್ಕೆ ಸುಲಭವಲ್ಲ. ಭಾರತದ ಪುರುಷರ ಹಾಕಿ ತಂಡವು ತಮ್ಮ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹಾಕಿ ಪಂದ್ಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ. ಹಾಕಿ ಅಲ್ಲದೆ, ಪುರುಷರ ಹಗುರವಾದ ರೋಯಿಂಗ್ ಸ್ಪರ್ಧೆಯಲ್ಲಿ, ಅರುಣ್ ಲಾಲ್ ಮತ್ತು ಅರವಿಂದ್ ಸಿಂಗ್ ಅವರು ಭಾರತದ ಪರ ಸೆಣಸಲಿದ್ದಾರೆ.

10 ಮೀ ಏರ್ ಪಿಸ್ತೂಲ್ ಈವೆಂಟ್ ಟೋಕಿಯೊ ಒಲಿಂಪಿಕ್ಸ್‌ನ ಮೂರನೇ ದಿನದ ಶೂಟಿಂಗ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗೆ ಅರ್ಹತಾ ಸುತ್ತಿನ ಪಂದ್ಯವೂ ನಡೆಯಲಿದೆ. ಇದಕ್ಕೂ ಮೊದಲು ಜುಲೈ 24 ರಂದು ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಸಾಧನೆ ನಿರಾಶಾದಾಯಕವಾಗಿತ್ತು. ಮನು ಭಾಕರ್ ಮತ್ತು ಯಶಸ್ವಿನಿ ದೇಶ್ವಾಲ್ ಅವರು ಭಾನುವಾರ ಭಾರತದ ಪದಕ ಭರವಸೆಯನ್ನು ಜೀವಂತವಾಗಿರಿಸಲಿದ್ದಾರೆ. ಇದಲ್ಲದೆ, ನೌಕಾಯಾನದಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಸ್ಪರ್ಧೆಗಳು ನಡೆಯಲಿವೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್