Tokyo Olympics: ಬ್ಯಾಡ್ಮಿಂಟನ್ನಲ್ಲಿ ಚಿರಾಗ್-ಸಾತ್ವಿಕ್ಗೆ ಗೆಲುವು; ಫೈನಲ್ನಲ್ಲಿ ಎಡವಿದ ಶೂಟರ್ ಸೌರಭ್
ಭಾರತದ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಚೀನಾದ ಜೋಡಿಯ ವಿರುದ್ಧ 21-16, 16-21, 27-25 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೊದಲ ಸುತ್ತಿನಲ್ಲಿ ಗೆಲುವಿನ ಸಿಹಿಕಂಡಿದೆ.
ಒಲಿಂಪಿಕ್ಸ್ ಕ್ರೀಡಾಕೂಟದ (Tokyo Olympics) ಮೊದಲ ದಿನದಲ್ಲಿ ಭಾರತ ಈವರೆಗೆ ಒಂದು ಪದಕ ಗೆದ್ದಿದೆಯಾದರೂ ಇತರೆ ಕ್ರೀಡೆಗಳಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿದೆ. ಖ್ಯಾತ ಬ್ಯಾಡ್ಮಿಂಟನ್ ತಾರೆ ಸಾಯಿ ಪ್ರಣೀತ್ (Sai Praneet) ಮೊದಲ ಸುತ್ತಿನಲ್ಲೇ ಹೊರಬಿದ್ದಿರುವುದು ಆಘಾತ ತಂದಿದೆ. ಆದರೆ, ಡಬಲ್ಸ್ ಜೋಡಿಯಾದ ಚಿರಾಗ್ ಶೆಟ್ಟಿ ಹಗೂ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಕೊಂಚ ನೆಮ್ಮದಿ ನೀಡಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್ ಇಸ್ರೇಲ್‌ನ ಮಿಶಾ ಜಿಲ್ಮೇರ್ಮನ್ ವಿರುದ್ಧ ಸೋಲು ಕಂಡರು. ಪುರುಷರ ಸಿಂಗಲ್ಸ್‌ನ ಡಿ ಗ್ರೂಫ್‌ನ ಮೊದಲ ಪಂದ್ಯದಲ್ಲಿ ಸಾಯಿ ಪ್ರಣೀತ್ ಜಿಲ್ಮೇರ್ಮನ್ ವಿರುದ್ಧ 17-21, 15-21 ಅಂತರದಿಂದ ಸೋಲು ಕಂಡಿದ್ದಾರೆ. ಆರಂಭದಿಂದಲೂ ಸಾತಿ ಪ್ರಣೀತ್ ಎದುರಾಳಿ ವಿರುದ್ಧ ಮೇಲುಗೈ ಸಾಧಿಸುವಲ್ಲಿ ವಿಫಲರಾದರು.
ಇನ್ನೂ ಭಾರತದ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಚೀನಾದ ಜೋಡಿಯ ವಿರುದ್ಧ 21-16, 16-21, 27-25 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೊದಲ ಸುತ್ತಿನಲ್ಲಿ ಗೆಲುವಿನ ಸಿಹಿಕಂಡಿದೆ.
ಪುರುಷರ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನದೊಂದಿಗೆ ಫೈನಲ್ ಸುತ್ತಿಗೆ ತಲುಪಿದ್ದ ವಿಶ್ವದ ನಂ. 2ನೇ ಆಟಗಾರ ಸೌರಭ್ ಚೌಧರಿ 7ನೇ ಸ್ಥಾನ ಪಡೆದು ನಿರಾಸೆಗೊಳಿಸಿದರು. ಅರ್ಹತಾ ಸುತ್ತಿನಲ್ಲಿ ಒಟ್ಟು 586 ಅಂಕ ಗಳಿಸಿ ಅಮೋಘ ಪ್ರದರ್ಶನ ನೀಡಿ ಪದಕದ ಭರವಸೆ ಮೂಡಿಸಿದ್ದ 19ರ ಹರೆಯದ ಶೂಟರ್ ಚೌಧರಿ 8 ಶೂಟರ್ ಗಳು ಸ್ಪರ್ಧಿಸಿರುವ ಫೈನಲ್ ಸುತ್ತಿನಲ್ಲಿ 137.4 ಸ್ಕೋರ್ಗೆ ತೃಪ್ತಿಪಟ್ಟರು.
ಇತ್ತ ಟೆಬಲ್ ಟೆನಿಸ್‍ನಲ್ಲಿ ಶರತ್ ಕಮಲ್ ಮತ್ತು ಮೋನಿಕಾ ಬಾತ್ರಾ ಅವರ ಭಾರತೀಯ ಜೋಡಿ ಚೀನಾದ ಲಿನ್ ಯನ್ ಜು ಮತ್ತು ಚೆಂಗ್ ಐ ಚಿಂಗ್‍ರ ಎದುರು ಸೋಲು ಕಾಣುವ ಮೂಲಕ ಟೆಬಲ್ ಟೆನಿಸ್‍ನಲ್ಲಿ ಪದಕ ಗೆಲ್ಲುವ ಕನಸು ಕಮರಿ ಹೋಗಿದೆ. ಆರಂಭದಲ್ಲಿ 5-1 ಅಂಕಗಳಿಂದ ಶರತ್-ಮೋನಿಕಾ ಮೇಲುಗೈ ಸಾಧಿಸಿದರು. ಆದರೆ ಚೇತರಿಸಿಕೊಂಡ ಚೀನಾ ಜೋಡಿ ಎಂಟು ಅಂಕಗಳನ್ನು ಪಡೆಯುವ ಮೂಲಕ ಸರಣಿಯ ಮೇಲೆ ಹಿಡಿತ ಸಾಧಿಸಿತ್ತು. 11-8, 11-6, 11-5, 11-4 ಶ್ರೇಯಾಂಕದ ಮೂಲಕ ಪಂದ್ಯ ಮುಕ್ತಾಯವಾಯಿತು.
Tokyo Olympics: ಅಂದು ಕಟ್ಟಿಗೆ ಹೊತ್ತು ಇಂದು ಬೆಳ್ಳಿಗೆ ಕೊರಳೊಡ್ಡಿದ ಮೀರಾಬಾಯಿ: ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ
Tokyo Olympics 2020: ಹಾಕಿಯಲ್ಲಿ ಭಾರತ ಶುಭಾರಂಭ: ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ
(Tokyo Olympics Chirag-Satwik stun World No 3 Praneeth loses opener in Badminton)