Tokyo Olympics 2020: ಶೂಟಿಂಗ್ನಲ್ಲಿ ಫೈನಲ್ಗೆ ಲಗ್ಗೆಯಿಟ್ಟ ಭಾರತದ ಸೌರಭ್ ಚೌಧರಿ
10 ಮೀಟರ್ನ ಪುರುಷರ ಏರ್ ಪಿಸ್ಟೂಲ್ ಶೂಟಿಂಗ್ ವಿಭಾಗದಲ್ಲಿ ಸೌರಭ್ ಚೌಧರಿ ಅವರು ಫೈನಲ್ ಪ್ರವೇಶಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ 2020 (Tokyo Olympics 2020) ರಲ್ಲಿ ಭಾರತ ದೇಶ ಉತ್ತಮ ಆರಂಭ ಪಡೆದುಕೊಂಡಿದೆ. ಭಾರತ ಹಾಕಿ ತಂಡ ತನ್ನ ಚೊಚ್ಚಲ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ 3-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ. ಇದರ ಬೆನ್ನಲ್ಲೆ ಸದ್ಯ 10 ಮೀಟರ್ನ ಪುರುಷರ ಏರ್ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಸೌರಭ್ ಚೌಧರಿ (Saurabh Chaudhary) ಅವರು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತ ಚೊಚ್ಚಲ ಪದಕದ ನಿರೀಕ್ಷೆಯಲ್ಲಿದೆ. ಫೈನಲ್ ಪಂದ್ಯ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಇಂದು ನಡೆದ ಪುರುಷರ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿರುವ ಸೌರಭ್ ಅಮೋಘ ಸಾಧನೆ ಮಾಡಿದರು. ಪದಕ ಸುತ್ತಿನಲ್ಲೂ ಇದೇ ಪ್ರದರ್ಶನ ನೀಡಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಇನ್ನೂ ಇದೇ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ಅಭಿಶೇಕ್ ವರ್ಮಾ ಅವರು 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಒಟ್ಟು 586 ಸ್ಕೋರ್ ಗಳಿಸಿರುವ ಸೌರಭ್ ಫೈನಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಪದಕದ ಸುತ್ತಿಗೆ ತಲುಪಿದರು. ಅರ್ಹತಾ ಸುತ್ತಿನಲ್ಲಿ ಅಗ್ರ-8 ರಲ್ಲಿ ಸ್ಥಾನ ಪಡೆದ ಶೂಟರ್ ಗಳು ಫೈನಲ್ ತಲುಪುತ್ತಾರೆ.
10m Air Pistol Shooters @SChaudhary2002 and @abhishek_70007 will kick start their #Tokyo2020 campaign in a few minutes.
Stay tuned for updates and don’t forget to #Cheer4India @PMOIndia @ianuragthakur @NisithPramanik@WeAreTeamIndia @OfficialNRAI @ddsportschannel @PIB_India pic.twitter.com/VumYwJodA0
— SAIMedia (@Media_SAI) July 24, 2021
ಇದಕ್ಕೂ ಮುನ್ನ ನಡೆದ ಹಾಕಿ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ಕಂಡಿತು. ಭಾರತ ಗಳಿಸಿದ ಮೂರು ಗೋಲುಗಳು ಕೂಡ ಪೆನಾಲ್ಟಿ ಕಾರ್ನರ್‌ಗಳಿಂದ ಬಂದಿರುವುದು ವಿಶೇಷ. ಹರ್ಮನ್‌ಪ್ರೀತ್ ಎರಡು ಬಾರಿ ಗೋಲು ಗಳಿಸಲು ಸಫಲರಾದರೆ ಮತ್ತೊಂದು ಗೋಲನ್ನು ರೂಪಿಂದರ್ ಮೂಲಕ ಭಾರತ ತಂಡ ಗಳಿಸಿತು.
ಇನ್ನೂ ಆರ್ಚರಿ ಮಿಶ್ರ ಡಬಲ್ಸ್ನ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಅವರು ಚೈನೀಸ್ ತೈಪೆ ವಿರುದ್ಧ 5-3 ಅಂತರದಿಂದ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಹಾಗೂ ಪ್ರವೀಣ್ ಅವರು ಸೌತ್ ಕೊರಿಯಾ ತಂಡವನ್ನು ಎದುರಿಸಲಿದೆ.
IND vs SL: 3ನೇ ಏಕದಿನ ಪಂದ್ಯದಲ್ಲಿ ಭಾರತ ಪರ 5 ಜನ ಪದಾರ್ಪಣೆ ಮಾಡಿದ್ದು ಯಾಕೆ ಗೊತ್ತಾ?: ಇಲ್ಲಿದೆ ಕಾರಣ
(Tokyo 2020 Indias Saurabh Chaudhary qualifies for 10m Air Pistol Mens Final)
Published On - 11:23 am, Sat, 24 July 21