Tokyo Olympics 2020: ಮೊದಲ ಚಿನ್ನದ ಪದಕ ಗೆದ್ದ ಚೀನಾದ ಯಾಂಗ್ ಕಿಯಾನ್: 10ಎಂ ಶೂಟಿಂಗ್​ನಲ್ಲಿ ಫೈನಲ್ ಪ್ರವೇಶಿಸಲು ಭಾರತ ವಿಫಲ

ಭಾರತದ ಶೂಟರ್‌ಗಳು ಕಳಪೆ ಪ್ರದರ್ಶನದ ನೀಡಿದರು. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಎಲವೆನಿಲ್ ವಲರಿವನ್ ಹಾಗೂ ಅಪೂರ್ವಿ ಚಂಡೇಲಾ ಫೈನಲ್ ಹಂತಕ್ಕೇರಿವಲ್ಲಿ ವಿಫಲರಾದರು.

Tokyo Olympics 2020: ಮೊದಲ ಚಿನ್ನದ ಪದಕ ಗೆದ್ದ ಚೀನಾದ ಯಾಂಗ್ ಕಿಯಾನ್: 10ಎಂ ಶೂಟಿಂಗ್​ನಲ್ಲಿ ಫೈನಲ್ ಪ್ರವೇಶಿಸಲು ಭಾರತ ವಿಫಲ
Yang Qian
Follow us
TV9 Web
| Updated By: Vinay Bhat

Updated on:Jul 24, 2021 | 8:59 AM

ಚೀನಾದ ಯಾಂಗ್ ಕಿಯಾನ್ (Yang Qian) ಅವರು 10 ಎಂ ಏರ್‌ ರೈಫಲ್ ವಿಭಾಗದ ಫೈನಲ್ ಪಂದ್ಯದಲ್ಲಿ ಗೆದ್ದು ಟೋಕಿಯೋ ಒಲಿಂಪಿಕ್ಸ್​ನ (Tokyo Olympics 2020) ಮೊದಲ ಚಿನ್ನದ ಪದಕ ತಮ್ಮದಾಗಿಸಿದ್ದಾರೆ. ಒಲಿಂಪಿಕ್​ನಲ್ಲಿ ದಾಖಲೆಯ 251.8 ಅಂಕ ಕಲೆಹಾಕಿದ ಇವರು ನೂತನ ಸಾಧನೆ ಮಾಡಿದ್ದಾರೆ. ಈ ಮೂಲಕ ಟೋಕಿಯೊ ಒಲಂಪಿಕ್ಸ್ನಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಸ್ಪರ್ಧಿ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ನಂತರದ ಸ್ಥಾನದಲ್ಲಿ ರಷ್ಯಾದ ಗಲಶಿನಾ 251.1 ಮತ್ತು ಸ್ವಿಟ್ಜರ್​ಲೆಂಡ್​ನ ನೀನ ಕ್ರಿಸ್ಟಿಯನ್ 230.6 ಅಂಕ ಸಂಪಾದಿಸಿರು.

ಇದಕ್ಕೂ ಮುನ್ನ ಭಾರತದ ಶೂಟರ್‌ಗಳು ಕಳಪೆ ಪ್ರದರ್ಶನದ ನೀಡಿದರು. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಎಲವೆನಿಲ್ ವಲರಿವನ್ ಹಾಗೂ ಅಪೂರ್ವಿ ಚಂಡೇಲಾ ಫೈನಲ್ ಹಂತಕ್ಕೇರಿವಲ್ಲಿ ವಿಫಲರಾದರು. ಇಂದು ನಡೆದ 10ಎಂ ಏರ್‌ ರೈಫಲ್ ವಿಭಾಗದಲ್ಲಿ ಇಬ್ಬರು ಸ್ಪರ್ಧಿಗಳು ಕೂಡ ನಿರಾಸೆ ಅನುಭವಿಸಿದರು.

ಎಲವೆನಿಲ್ 16ನೇ ಸ್ಥಾನವನ್ನು ಪಡೆದುಕೊಂಡು 626.5 ಅಂಕಗಳನ್ನು ಸಂಪಾದನೆ ಮಾಡಿದರು. ಅಪೂರ್ವಿ 36ನೇ ಸ್ಥಾನಕ್ಕೆ ಕುಸಿದು 621.9 ಅಂಕಗಳು ಸಿಕ್ಕಿತಷ್ಟೆ. ಐದು ಹಾಗೂ ಆರನೇ ಸಿರೀಸ್‌ನಲ್ಲಿ  ಹಿಂದುಳಿಯುವಂತಾಯಿತು.

ಇಂದು ಮುಂಜಾನೆ ನಡೆದ ಆರ್ಚರಿ ಮಿಶ್ರ ಡಬಲ್ಸ್​​ನಲ್ಲಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾದವ್ ಗೆದ್ದು ಕ್ವಾರ್ಟರ್ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

ಆರ್ಚರಿ ಮಿಶ್ರ ಡಬಲ್ಸ್​​ನ ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಅವರು ಚೈನೀಸ್ ತೈಪೆ ವಿರುದ್ಧ 5-3 ಅಂತರದಿಂದ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಕ್ವಾರ್ಟರ್​ ಫೈನಲ್​ನಲ್ಲಿ ದೀಪಿಕಾ ಹಾಗೂ ಪ್ರವೀಣ್ ಅವರು ಸೌತ್ ಕೊರಿಯಾ ತಂಡವನ್ನು ಎದುರಿಸಲಿದೆ.

Tokyo Olympics 2020: ಆರ್ಚರಿ ಮಿಶ್ರ ಡಬಲ್ಸ್​ನಲ್ಲಿ ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟ ಭಾರತದ ದೀಪಿಕಾ-ಪ್ರವೀಣ್

IND vs SL: ಲಂಕಾ ನಾಯಕನಿಗೂ ಕ್ರಿಕೆಟ್ ಟಿಪ್ಸ್ ನೀಡಿವ ದ್ರಾವಿಡ್: ಕನ್ನಡಿಗನ ನಡೆಗೆ ನೆಟ್ಟಿಗರ ಸಲಾಂ

(Tokyo 2020 Olympics Chinas Yang Qian wins first gold medal of Tokyo 2020 Olympics)

Published On - 8:52 am, Sat, 24 July 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ