Tokyo Olympics 2020: ರೋಯಿಂಗ್​ನಲ್ಲಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಅರ್ಜುನ್-ಅರವಿಂದ್: ಮಹಿಳಾ ಶೂಟಿಂಗ್​ನಲ್ಲಿ ಹಿನ್ನಡೆ

| Updated By: Vinay Bhat

Updated on: Jul 25, 2021 | 7:44 AM

ಭಾರತದ ಮಹಿಳಾ ಶೂಟರ್‌ಗಳು ಭಾರೀ ನಿರಾಸೆ ಮೂಡಿಸಿದ್ದಾರೆ. ಮನು ಭಾಕೆರ್ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ ಇಂದು ನಡೆದ ಮಹಿಳೆಯರ 10 ಮೀ. ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಇಬ್ಬರೂ ಸಹ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾದರು.

Tokyo Olympics 2020: ರೋಯಿಂಗ್​ನಲ್ಲಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಅರ್ಜುನ್-ಅರವಿಂದ್: ಮಹಿಳಾ ಶೂಟಿಂಗ್​ನಲ್ಲಿ ಹಿನ್ನಡೆ
Arjun Lal Jat and Arvind Singh
Follow us on

ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಎರಡನೇ ದಿನ ಭಾರತೀಯರು ಉತ್ತಮ ಆರಂಭ ಪಡೆದುಕೊಂಡಿದ್ದಾರೆ. ಪುರುಷರ ರೋಯಿಂಗ್​ನಲ್ಲಿ ಭಾರತದ ಅರ್ಜುನ್ ಜತ್ ಮತ್ತು ಅರವಿಂದ್ ಸಿಂಗ್ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

ಇತ್ತ ಜಿಮ್ನಾಸ್ಟಿಕ್​ನಲ್ಲಿ ಪ್ರಣಿತಿ ನಾಯಕ್ 10.633 ಅಂಕ ಸಂಪಾದಿಸಿದ್ದು ಟಾಪ್ 8 ನಲ್ಲಿ ಕಾಣಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ತನ್ನ ಅಭಿಯಾನ ಆರಂಭಿಸಿದ್ದು, ಇಸ್ರೆಲ್​ನ ಪೊಲಿಕರ್ವೊಪ ವಿರುದ್ಧ ಸೆಣೆಸಾಡುತ್ತಿದ್ದಾರೆ.

ಆದರೆ, ಭಾರತದ ಮಹಿಳಾ ಶೂಟರ್‌ಗಳು ಭಾರೀ ನಿರಾಸೆ ಮೂಡಿಸಿದ್ದಾರೆ. ಮನು ಭಾಕೆರ್ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ ಇಂದು ನಡೆದ ಮಹಿಳೆಯರ 10 ಮೀ. ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಇಬ್ಬರೂ ಸಹ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾದರು.

ಅರ್ಹತಾ ಸುತ್ತಿನಲ್ಲಿ ಮನು ಭಾಕೆರ್ 12ನೇ ಸ್ಥಾನ ಪಡೆದುಕೊಂಡರೆ ಯಶಸ್ವಿನಿ ಸಿಂಗ್ ದೆಸ್ವಾಲ್ 13ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅರ್ಹತಾ ಸುತ್ತಿನಲ್ಲಿ ಟಾಪ್ 8 ಸ್ಥಾನ ಪಡೆದ ಸ್ಪರ್ಧಿಗಳನ್ನು ಫೈನಲ್ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಅರ್ಹತಾ ಸುತ್ತಿನಲ್ಲಿ ಭಾರತೀಯ ವನಿತೆಯರಾದ ಯಶಸ್ವಿನಿ ಮತ್ತು ಮನೋ ವಿಫಲರಾಗಿದ್ದಾರೆ.

ಮನು ಭಾಕೆರ್ 575 ಪಾಯಿಂಟ್ಸ್ ಗಳಿಸಿ ಅರ್ಹತಾ ಸುತ್ತಿನಲ್ಲಿ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಯಶಸ್ವಿನಿ ಸಿಂಗ್ ದೆಸ್ವಾಲ್ 574 ಪಾಯಿಂಟ್ಸ್ ಗಳಿಸಿ 13ನೇ ಸ್ಥಾನ ಪಡೆದುಕೊಂಡರು.

IND vs SL: ಇಂದು ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಈ ಸ್ಫೋಟಕ ಬ್ಯಾಟ್ಸ್​ಮನ್​?

Tokyo Olympics 2020: ಕ್ರೀಡಾಕೂಟದ ಎರಡನೇ ದಿನ ಭಾರತದ ಕೆಲ ಪ್ರಮುಖ ಸ್ಪರ್ಧಿಗಳು ಪದಕದ ಬೇಟೆ ಆರಂಭಿಸಲಿದ್ದಾರೆ

(Tokyo Olympics 2020 Indian team of Arjun Lal Jat and Arvind Singh qualified for the Mens Lightweight Double Sculls semifinal)

Published On - 7:43 am, Sun, 25 July 21