Tokyo Olympics 2020: ಪಿವಿ ಸಿಂಧೂ ಭರ್ಜರಿ ಆರಂಭ: ಇಸ್ರೇಲ್ ವಿರುದ್ಧ ಭಾರೀ ಅಂತರದ ಗೆಲುವು

|

Updated on: Jul 25, 2021 | 8:13 AM

PV Sindhu: ಕೇವಲ 28 ನಿಮಿಷಗಳಲ್ಲಿ ಪಂದ್ಯ ಮುಗಿಸಿದ ಸಿಂಧೂ 21-7, 21-10 ಅಂಕಗಳ ಅಂತರದಿಂದ ಭಾರೀ ದೊಡ್ಡ ಜಯ ಸಾಧಿಸಿದರು.

Tokyo Olympics 2020: ಪಿವಿ ಸಿಂಧೂ ಭರ್ಜರಿ ಆರಂಭ: ಇಸ್ರೇಲ್ ವಿರುದ್ಧ ಭಾರೀ ಅಂತರದ ಗೆಲುವು
ಪಿವಿ ಸಿಂಧು
Follow us on

ಟೋಕಿಯೋ ಒಲಿಂಪಿಕ್ಸ್ 2020ರ (Tokyo Olympics 2020) ಗ್ರೂಪ್ ಜೆನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧೂ (PV Sindhu) ಇಸ್ರೇಲಿನ ಸಿನಿಯಾ ಪೊಲಿಕಾರ್ಪೋವಾ ವಿರುದ್ಧ ಭರ್ಜರಿ ಜಯ ಸಾಧಿಸಿ ಗೆಲುವಿನ ಮೂಲಕ ಅಭಿಯಾನ ಆರಂಭಸಿದ್ದಾರೆ. ಕೇವಲ 28 ನಿಮಿಷಗಳಲ್ಲಿ ಪಂದ್ಯ ಮುಗಿಸಿದ ಸಿಂಧೂ 21-7, 21-10 ಅಂಕಗಳ ಅಂತರದಿಂದ ಭಾರೀ ದೊಡ್ಡ ಜಯ ಸಾಧಿಸಿದರು.

ಆರಂಭದಿಂದಲೇ ಆಕ್ರಮಣ ಆಟಕ್ಕೆ ಮುಂದಾದ ಸಿಂಧೂ ಮೊದಲ ಸುತ್ತಿನಲ್ಲಿ 21-7 ಅಂಕಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡರು. ಎದುರಾಳಿಗೆ ಸುಧಾರಿಸಿಕೊಳ್ಳಲು ಅವಕಾಶವನ್ನೇ ನೀಡದ ಸಿಂಧೂ ಎರಡನೇ ಸುತ್ತಿನಲ್ಲೂ ಭರ್ಜರಿ ಆಟ ಮುಂದುವರೆಸಿದರು. ಪೊಲಿಕಾರ್ಪೋವಾ ಅವರಿಗೆ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲೇ ಇಲ್ಲ.

ಎರಡನೇ ಸುತ್ತಿನಲ್ಲೂ ಸಿಂಧೂ 21-10 ಅಂಕಗಳ ಮುನ್ನಡೆ ಸಾಧಿಸಿ ಭಾರೀ ಅಂತರದ ಜಯ ತಮ್ಮದಾಗಿಸಿದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ 2020ರ ಚೊಚ್ಚಲ ಪಂದ್ಯದಲ್ಲೇ ಗೆಲುವು ಸಾಧಿಸಿದ್ದಾರೆ.

ಇನ್ನೂ ಪುರುಷರ ರೋಯಿಂಗ್​ನಲ್ಲಿ ಭಾರತದ ಅರ್ಜುನ್ ಜತ್ ಮತ್ತು ಅರ್ವಿಂಗ್ ಸಿಂಗ್ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ಇತ್ತ ಜಿಮ್ನಾಸ್ಟಿಕ್​ನಲ್ಲಿ ಪ್ರಣಿತಿ ನಾಯಕ್ 10.633 ಅಂಕ ಸಂಪಾದಿಸಿದ್ದು ಟಾಪ್ 8 ನಲ್ಲಿ ಕಾಣಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ತನ್ನ ಅಭಿಯಾನ ಆರಂಭಿಸಿದ್ದು, ಇಸ್ರೆಲ್​ನ ಪೊಲಿಕರ್ವೊಪ ವಿರುದ್ಧ ಸೆಣೆಸಾಡುತ್ತಿದ್ದಾರೆ.

ಆದರೆ, ಭಾರತದ ಮಹಿಳಾ ಶೂಟರ್‌ಗಳು ಭಾರೀ ನಿರಾಸೆ ಮೂಡಿಸಿದ್ದಾರೆ. ಮನು ಭಾಕೆರ್ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ ಇಂದು ನಡೆದ ಮಹಿಳೆಯರ 10 ಮೀ. ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಇಬ್ಬರೂ ಸಹ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾದರು.

ಅರ್ಹತಾ ಸುತ್ತಿನಲ್ಲಿ ಮನು ಭಾಕೆರ್ 12ನೇ ಸ್ಥಾನ ಪಡೆದುಕೊಂಡರೆ ಯಶಸ್ವಿನಿ ಸಿಂಗ್ ದೆಸ್ವಾಲ್ 13ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅರ್ಹತಾ ಸುತ್ತಿನಲ್ಲಿ ಟಾಪ್ 8 ಸ್ಥಾನ ಪಡೆದ ಸ್ಪರ್ಧಿಗಳನ್ನು ಫೈನಲ್ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಅರ್ಹತಾ ಸುತ್ತಿನಲ್ಲಿ ಭಾರತೀಯ ವನಿತೆಯರಾದ ಯಶಸ್ವಿನಿ ಮತ್ತು ಮನೋ ವಿಫಲರಾಗಿದ್ದಾರೆ.

ಮನು ಭಾಕೆರ್ 575 ಪಾಯಿಂಟ್ಸ್ ಗಳಿಸಿ ಅರ್ಹತಾ ಸುತ್ತಿನಲ್ಲಿ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಯಶಸ್ವಿನಿ ಸಿಂಗ್ ದೆಸ್ವಾಲ್ 574 ಪಾಯಿಂಟ್ಸ್ ಗಳಿಸಿ 13ನೇ ಸ್ಥಾನ ಪಡೆದುಕೊಂಡರು.

Tokyo Olympics 2020: ರೋಯಿಂಗ್​ನಲ್ಲಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಅರ್ಜುನ್-ಅರವಿಂದ್: ಮಹಿಳಾ ಶೂಟಿಂಗ್​ನಲ್ಲಿ ಹಿನ್ನಡೆ

IND vs SL: ಇಂದು ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಈ ಸ್ಫೋಟಕ ಬ್ಯಾಟ್ಸ್​ಮನ್​?

(Rio silver medalist PV Sindhu wins her Tokyo Olympics opening match against Israel’s Ksenia Polikarpova)

Published On - 7:53 am, Sun, 25 July 21