ಪುರುಷರ 100 ಮೀಟರ್ ಬಟರ್ಫ್ಲೈ ಸ್ಫರ್ಧೆಯ ತಮ್ಮ ಹೀಟ್ಸ್ನಲ್ಲಿ ಎರಡನೇಯವರಾಗಿ ಸ್ಪರ್ಧೆ ಮುಗಿಸಿದರೂ ಭಾರತದ ಸಾಜನ್ ಪ್ರಕಾಶ್ ಸೆಮಿಪೈನಲ್ ಹಂತ ತಲುಪಲು ವಿಫಲರಾದರು. ಇದರೊಂದಿಗೆ ಟೊಕಿಯೋ ಒಲಂಪಿಕ್ಸ್ ಈಜು ಸ್ಪರ್ಧೆಗಳಲ್ಲಿ ಭಾರತದ ಸವಾಲು ಗುರುವಾರ ಅಂತ್ಯಗೊಂಡಿದೆ. ರಿಯೋ 2016 ಒಲಂಪಿಕ್ಸ್ನಲ್ಲೂ ಭಾಗವಹಿಸಿದ್ದ ಪ್ರಕಾಶ್ ಅವರು, 53.45 ಸೆಕೆಂಡ್ಗಳಲ್ಲಿ ಈಜಿ ಹೀಟ್ಸ್ನಲ್ಲಿ ಎರಡನೇ ನಿಧಾನದ ಕಾಲವನ್ನು ದಾಖಲಿಸಿದರು. ಅರ್ಹತೆ ಪಡೆಯಲು ಅವರು 51.74 ಸೆಕೆಂಡ್ಗಳಲ್ಲಿ ಈಜಬೇಕಿತ್ತು. 55 ಸ್ಪರ್ಧಿಗಳು ಭಾಗಿಯಾಗಿದ್ದ ಸದರಿ ಈವೆಂಟ್ನಲ್ಲಿ 27-ವರ್ಷ ವಯಸ್ಸಿನ ಕೇರಳದ ಈಜುಗಾರ 46ನೇಯವರಾಗಿ ಹೊರಬಿದ್ದರು. ಮೊದಲ 16 ಸ್ಥಾನ ಗಳಿಸಿದವರು ಮಾತ್ರ ಸೆಮಿಫೈನಲ್ಗೆ ಮುನ್ನಡೆದರು.
ತಮ್ಮ ಸ್ಪರ್ಧೆಗಳಲ್ಲಿ ಕಳಾಹೀನ ಮತ್ತು ನಿರಾಶಾದಾಯಕ ಪ್ರದರ್ಶನಗಳನ್ನು ನೀಡಿದ ಭಾರತದ ಎಲ್ಲ ಮೂರು ಈಜುಪಟುಗಳು- ಪ್ರಕಾಶ್, ಶ್ರೀಧರ್ ನಟರಾಜ್ ಮತ್ತು ಮಾನಾ ಪಟೇಲ್ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ. ಇವರೆಲ್ಲ ತಮ್ಮ ಅತ್ಯುತ್ತಮ ಸಾಧನೆ ತೋರಲು ಸಹ ಫೇಲಾದರು.
ಕಳೆದ ತಿಂಗಳು ಒಲಂಪಿಕ್ ಎ ಅರ್ಹತೆ ಗುರಿಯನ್ನು ಸಾಧಿಸಿದ ಭಾರತದ ಮೊದಲ ಸ್ವಿಮ್ಮರ್ ಎನಿಸಿಕೊಂಡು ಟೊಕಿಯೋ ಒಲಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದ ಪ್ರಕಾಶ್ 200ಮೀ ಬಟರ್ಫ್ಲೈ ಸ್ಪರ್ಧೆಯಲ್ಲಿ ಅಂತಿಮವಾಗಿ 24 ನೇಯವರಾಗಿ ತಮ್ಮ ಸವಾಲು ಮುಗಿಸಿದರು. ಇದು ಅವರ ಅತ್ಯಂತ ನೆಚ್ಚಿನ ಈವೆಂಟ್ ಆಗಿತ್ತು.
100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ಭಾಗವಹಿಸಿದ ನಟರಾಜ ಅವರು 20 ಸ್ವಿಮ್ಮರ್ಗಳ ಪೈಕಿ 27 ನೇಯವರಾದರು,
ಪ್ರಕಾಶ್ ಮತ್ತು ನಟರಾಜ ಇಬ್ಬರೂ ಟೊಕಿಯೋ ಒಲಂಪಿಕ್ಸ್ನಲ್ಲಿ ತಮ್ಮ ಅತ್ಯುತ್ತಮ ವೈಯಕ್ತಿಕ ಸಾಧನೆಯನ್ನು ತೋರಲು ವಿಫಲರಾಗಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ನಟರಾಜ ತಮ್ಮ ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿದ್ದರೆ ನಿಸ್ಸಂದೇಹವಾಗಿ ಸೆಮಿಫೈನಲ್ ಪ್ರವೇಶಿಸುತ್ತಿದ್ದರು.
ದೇಶವೊಂದರ ಒಬ್ಬ ಮಹಿಳಾ ಮತ್ತು ಒಬ್ಬ ಪುರುಷ ಸ್ಪರ್ಧಿ ಭಾಗವಹಿಸಲು ಅವಕಾಶ ನೀಡುವ ‘ಯೂನಿವರ್ಸಾಲಿಟಿ ಕೋಟಾ’ ಮೂಲಕ ಟೊಕಿಯೋ ಒಲಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದ ಮಾನಾ ಅವರು, ಮಹಿಳೆಯರ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ 39ನೇಯವರಾಗಿ ಸ್ಪರ್ಧೆ ಕೊನೆಗೊಳಿಸಿದರು.
ಇದನ್ನೂ ಓದಿ: Tokyo Olympics: ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಕ್ಸ್ ಬ್ಯಾನ್ ಮಾಡಿದ್ದು ಹಾಸ್ಯಾಸ್ಪದ ಎಂದ ಸುಸೆನ್ ಟೈಡ್ಕೆ