Tokyo Olympics 2020: ಭಾರತಕ್ಕೆ ಭಾರೀ ನಿರಾಸೆ: ಮಹಿಳಾ ಟೆನಿಸ್ ಡಬಲ್ಸ್​ನಲ್ಲಿ ಸೋಲುಂಡ ಸಾನಿಯಾ-ಅಂಕಿತಾ

| Updated By: Vinay Bhat

Updated on: Jul 25, 2021 | 10:22 AM

Sania Mirza: ಸಾನಿಯಾ ಜೋಡಿಗೆ ಈ ಬಾರಿ ಗೆಲುವು ಕಠಿಣ ಎನ್ನುವುದು ಮೊದಲೇ ಗೊತ್ತಿತ್ತು. ಹಾಗಿದ್ದರೂ ಭಾರತದ ಜೋಡಿ ಎದುರಾಳಿಗೆ ಮೊದಲ ರೌಂಡ್​ನಲ್ಲಿ ಕಠಿಣ ಪೈಪೋಟಿ ನೀಡಿದರು.

Tokyo Olympics 2020: ಭಾರತಕ್ಕೆ ಭಾರೀ ನಿರಾಸೆ: ಮಹಿಳಾ ಟೆನಿಸ್ ಡಬಲ್ಸ್​ನಲ್ಲಿ ಸೋಲುಂಡ ಸಾನಿಯಾ-ಅಂಕಿತಾ
Sania Mirza
Follow us on

ಟೋಕಿಯೋ ಒಲಿಂಪಿಕ್ಸ್ 2020ರ ಮಹಿಳಾ ಡಬಲ್ಸ್ ಸ್ಪರ್ಧೆಯಿಂದ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಜೋಡಿ ಹೊರಬಿದ್ದಿದೆ. ಕಿಚೆನೊಕ್ ಸಹೋದರಿಯರ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಭಾನುವಾರ ನಡೆದ ಮಹಿಳಾ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಸಾನಿಯಾ-ಅಂಕಿತಾ ಜೋಡಿ ಉಕ್ರೇನ್ನ ಎಲ್. ಕಿಚೆನೋಕ್ ಹಾಗೂ ಎನ್. ಕಿಚೆನೋಕ್ ವಿರುದ್ಧ 6-0, 6-7, (8-10)ರ ಅಂತರದಲ್ಲಿ ಸೋಲು ಅನುಭವಿಸಿದರು.

ಮೊದಲ ಸೆಟ್ ಅನ್ನು 6-0 ಅಂತರದಲ್ಲಿ ವಶಪಡಿಸಿದ್ದ ಸಾನಿಯಾ ಜೋಡಿ ಸುಲಭವಾಗಿ ಪಂದ್ಯ ಗೆಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ದ್ವಿತೀಯ ಸುತ್ತಿನಲ್ಲೂ ಒಂದು ಹಂತದಲ್ಲಿ 5-3ರ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಿದ ಉಕ್ರೇನ್ನ ಅವಳಿ ಜೋಡಿ, ಭಾರತೀಯರಿಗೆ ಅವಕಾಶವನ್ನೇ ನೀಡಲಿಲ್ಲ.

 

ಸಾನಿಯಾ ಜೋಡಿಗೆ ಈ ಬಾರಿ ಗೆಲುವು ಕಠಿಣ ಎನ್ನುವುದು ಮೊದಲೇ ಗೊತ್ತಿತ್ತು. ಹಾಗಿದ್ದರೂ ಭಾರತದ ಜೋಡಿ ಎದುರಾಳಿಗೆ ಮೊದಲ ರೌಂಡ್​ನಲ್ಲಿ ಕಠಿಣ ಪೈಪೋಟಿ ನೀಡಿದರು.

ಇನ್ನೂ ಗ್ರೂಪ್ ಜೆನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧೂ (PV Sindhu) ಇಸ್ರೇಲಿನ ಸಿನಿಯಾ ಪೊಲಿಕಾರ್ಪೋವಾ ವಿರುದ್ಧ ಭರ್ಜರಿ ಜಯ ಸಾಧಿಸಿ ಗೆಲುವಿನ ಮೂಲಕ ಅಭಿಯಾನ ಆರಂಭಸಿದ್ದಾರೆ. ಕೇವಲ 28 ನಿಮಿಷಗಳಲ್ಲಿ ಪಂದ್ಯ ಮುಗಿಸಿದ ಸಿಂಧೂ 21-7, 21-10 ಅಂಕಗಳ ಅಂತರದಿಂದ ಭಾರೀ ದೊಡ್ಡ ಜಯ ಸಾಧಿಸಿದರು.

ಆರಂಭದಿಂದಲೇ ಆಕ್ರಮಣ ಆಟಕ್ಕೆ ಮುಂದಾದ ಸಿಂಧೂ ಮೊದಲ ಸುತ್ತಿನಲ್ಲಿ 21-7 ಅಂಕಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡರು. ಎದುರಾಳಿಗೆ ಸುಧಾರಿಸಿಕೊಳ್ಳಲು ಅವಕಾಶವನ್ನೇ ನೀಡದ ಸಿಂಧೂ ಎರಡನೇ ಸುತ್ತಿನಲ್ಲೂ ಭರ್ಜರಿ ಆಟ ಮುಂದುವರೆಸಿದರು. ಪೊಲಿಕಾರ್ಪೋವಾ ಅವರಿಗೆ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲೇ ಇಲ್ಲ.

ಎರಡನೇ ಸುತ್ತಿನಲ್ಲೂ ಸಿಂಧೂ 21-10 ಅಂಕಗಳ ಮುನ್ನಡೆ ಸಾಧಿಸಿ ಭಾರೀ ಅಂತರದ ಜಯ ತಮ್ಮದಾಗಿಸಿದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ 2020ರ ಚೊಚ್ಚಲ ಪಂದ್ಯದಲ್ಲೇ ಗೆಲುವು ಸಾಧಿಸಿದರು.

Tokyo Olympics 2020: ಪಿವಿ ಸಿಂಧೂ ಭರ್ಜರಿ ಆರಂಭ: ಇಸ್ರೇಲ್ ವಿರುದ್ಧ ಭಾರೀ ಅಂತರದ ಗೆಲುವು

Tokyo Olympic 2020: ಇದೇ ಮೊದಲ ಬಾರಿಗೆ ಒಲಿಂಪಿಕ್ ಜ್ಯೋತಿ ಉರಿಸಲು ಹೈಡ್ರೋಜನ್ ಬಳಕೆ

(Tokyo Olympics 2020 Sania-Ankita pair knocked out of Tokyo Games as Ukrainian opponent makes stunning return)