ಟೊಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆದ್ದು ಕೊಡಬಲ್ಲ ಆಶಾಕಿರಣವಾಗಿರುವ ಶಟ್ಲರ್ ಪಿವಿ ಸಿಂಧೂ ತಮ್ಮ ಪದಕ ಬೇಟೆಯನ್ನು ರವಿವಾರದಿಂದ ಅರಂಭಿಸಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ ಸಾಯಿ ಪ್ರಣೀತ್ ಮತ್ತು ಡಬಲ್ಸ್ ವಿಭಾಗದಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ಸಾಯಿರಾಜ್ ರಣ್ಕಿರಣ್ ರೆಡ್ಡಿ ತಮ್ಮ ಪಂದ್ಯಗಳನ್ನು ಶನಿವಾರ ಆಡಲಿದ್ದಾರೆ.ಐದು ವರ್ಷಗಳ ಹಿಂದೆ ರಿಯೋ ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧೂ ಈ ಬಾರಿ ಭಾರತಕ್ಕೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಇದುವರೆಗೆ ಸಿಗದ ಬಂಗಾರ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿರುವುದು ನಿಶ್ಚಿತ. ಬ್ಯಾಡ್ಮಿಂಟನ್ ಸ್ಫರ್ಧೆಗಳು ಟೊಕಿಯೋನಲ್ಲಿ ಶನಿವಾರದಿಂದ ಆರಂಭವಾಗಲಿವೆ.
2016 ರಲ್ಲಿ 21 ರ ಪ್ರಾಯದವರಾಗಿದ್ದ ಸಿಂಧೂ ಪದಕ ಗೆಲ್ಲಬಹುದೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಈ ಬಾರಿ ಅವರ ಚಿನ್ನದ ಪದಕ ಗೆದ್ದೇ ತೀರುತ್ತಾರೆಂಬ ವಿಶ್ವಾಸ ಭಾರತೀಯರಿಗಿದೆ. ಅವರಿಗೆ ನೆರವಾಗಲಿರುವ ಒಂದು ಅಂಶವೆಂದರೆ ಕಳೆದ ಬಾರಿಯ ಚಾಂಪಿಯನ್ ಕರೊಲಿನಾ ಮರೀನ್ ಗಾಯದಿಂದಾಗಿ ಈ ಬಾರಿ ಸ್ಪರ್ಧಿಸುತ್ತಿಲ್ಲ.
2020 ರಲ್ಲೇ ನಡೆಯಬೇಕಿದ್ದ ಟೊಕಿಯೋ ಒಲಂಪಿಕ್ಸ್ ಕೋವಿಡ್ ಪಿಡುಗಿನಿಂದ ಒಂದು ವರ್ಷ ಮುಂದೂಟಲ್ಪಟ್ಟ ನಂತರ ಸಿಂಧೂ ಅವರು ಲಂಡನ್ನಲ್ಲಿ ತರಬೇತಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾದ ನಂತರ ಹೊಸ ವಿದೇಶಿ ಕೋಚ್ ಪಾರ್ಕ್ ಟೆ ಸಂಗ್ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಜಾರಿಯಲ್ಲಿಟ್ಟರು. ಮೂಲಗಲ ಪ್ರಕಾರ ಸಂಗ್ ಅವರು ಸಿಂಧೂರ ಡಿಫೆನ್ಸ್ ಉತ್ತಮಗೊಳಿಸಲು ಬಹಳ ಶ್ರಮ ಪಟ್ಟಿದ್ದಾರೆ.
‘ಕೋವಿಡ್ ಪಿಡುಗಿನಿಂದಾಗಿ ದೊರೆತ ಬ್ರೇಕ್ ನನಗೆ ನಹಳ ಪ್ರಯೋಜನಕಾರಿಯಾಗಿ ಸಾಬೀತಾಗಿದೆ. ಈ ಅವದಧಿಯಲ್ಲಿ ಪಡೆದ ತರಬೇತಿಯಲ್ಲಿ ನನ್ನ ಟೆಕ್ನಿಕ್ ಮತ್ತು ಸ್ಕಿಲ್ಗಳನ್ನು ಉತ್ತಮಪಡಿಸಿಕೊಂಡೆ,’ ಎಂದು ವಿಶ್ವದ6 ನೇ ಕ್ರಮಾಂಕದ ಆಟಗಾರ್ತಿ ಟೊಕಿಯೊನಲ್ಲಿ ಮಾಧ್ಯಮದವರಿಗೆ ಹೇಳಿದರು.
‘ಪ್ರತಿಯೊಬ್ಬ ಆಟಗಾರ್ತಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಉತ್ತಮ ಪ್ರದರ್ಶನ ನೀಡುವ ಭರವಸೆ ನನಗಿದೆ. ಎಲ್ಲ ಪಂದ್ಯಗಳ ಬಗ್ಗೆ ಯೋಚಿಸದೆ ಒಂದಾದ ಮೇಲೆ ಒಂದು ಪಂದ್ಯದ ಮೇಲೆ ಫೋಕಸ್ ಮಾಡುತ್ತೇನೆ. ಹಾಗೆ ಮಾಡಿದರೆ ಒತ್ತಡವೂ ಕಡಿಮೆಯಾಗುತ್ತದೆ,‘ ಎಂದು ಹೈದರಾಬಾದಿನ ವಾಸಿ ಸಿಂಧೂ ಹೇಳಿದರು.
ಆರಂಭಿಕ ಪಂದ್ಯಗಳನ್ನು ಗೆಲ್ಲುತ್ತಾ ಹೋದರೆ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧೂ ಅವರು ಮಿಯಾ ಬ್ಲಿಚ್ಫೆಲ್ಟ್ ಮತ್ತು ಕ್ವಾರ್ಟರ್ ಫೈನಲ್ನಲ್ಲಿ ವಿಶ್ವ ನಂಬರ್ 5 ಅಕನೆ ಯಮಗುಚಿ ಅವರನ್ನು ಎದುರಿಸುವ ಸಾಧ್ಯತೆ ಇದೆ. ಕೋಚ್, ಪಾರ್ಕ್ ಟೆ ಸಂಗ್ ತನ್ನ ಕಟ್ಟಾ ಎದುರಾಳಿ ಎಂದು ಪರಿಗಣಿಸುವ ಮತ್ತು ವಿಶ್ವದ ನಂಬರ್ ವನ್ ಆಟಗಾರ್ತಿ ಚೈನೀಸ್ ತೈಪೆಯ ತಾಯ್ ಜು ಯಿಂಗ್ ಅವರನ್ನು ಸಿಂಧೂ ಸೆಮಿಫೈನಲ್ನಲ್ಲಿ ಎದುರಿಸಬಹುದು. ರಿಯೋ ಒಲಂಪಿಕ್ಸ್ನಲ್ಲಿ ಸಿಂಧೂ ಅವರು ಯಿಂಗ್ರನ್ನು ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸಿದ್ದರು,
ಪುರುಷರ ವಿಭಾಗಲ್ಲಿ ಪ್ರಣೀತ್ಗೆ ಇದು ಮೊದಲ ಒಲಂಪಿಕ್ಸ್ ಆಗಿದ್ದು ನಾಳೆ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ 47 ನೇ ವಿಶ್ವ ಱಂಕಿನ ಇಸ್ರೇಲಿನ ಮಿಶಾ ಜಿಲ್ಬರ್ಮನ್ ಅವರನ್ನು ಎದುರಿಸಲಿದ್ದಾರೆ. ಪರುಷರ ಡಬಲ್ಸ್ ನಲ್ಲಿ ಚಿರಾಗ್ ಮತ್ತು ಸಾತ್ವಿಕ್ ಸಹ ಬಾರತಕ್ಕೆ ಮೆಡಲ್ ಗೆದ್ದು ಕೊಡುವ ನಿರೀಕ್ಷೆಇದೆ.
ಇದನ್ನೂ ಓದಿ: Tokyo Olympics: ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ; ಪ್ರತಿ ದೇಶದ 6 ಅಧಿಕಾರಿಗಳಿಗೆ ಮಾತ್ರ ಪ್ರವೇಶ.. 15 ದೇಶಗಳ ನಾಯಕರು ಭಾಗಿ