ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympic) ಏಳನೇ ದಿನವಾದ ಇಂದು ಭಾರತ ಅಮೋಘ ಪ್ರದರ್ಶನ ನೀಡುತ್ತಿದೆ. ಇದೇ ಲಯದಲ್ಲಿ ಮುಂದುವರೆದರೆ ಭಾರತಕ್ಕೆ ಪದಕ ಖಚಿತವಾಗಿದೆ. ದಿನದ ಆರಂಭದಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ (PV Sindu) ಅವರು ಗೆದ್ದು ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದರು. ಇದರ ಬೆನ್ನಲ್ಲೇ ಭಾರತದ ಪುರುಷರ ಹಾಕಿ ತಂಡ ಅರ್ಜೆಂಟಿನಾ ವಿರುದ್ಧ ರೋಚಕ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿತು. ಸದ್ಯ ಬಾಕ್ಸರ್ ಸತೀಶ್ ಕುಮಾರ್ (Sathish Kumar) 91 ಕೆಜಿ ವಿಭಾಗದಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಇತ್ತ ಆರ್ಚರಿಯಲ್ಲಿ ಆತನು ದಾಸ್ ರೋಚಕ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ಅಂತರದಿಂದ ಸೋಲಿಸುವ ಮೂಲಕ ಭಾರತದ ಬಾಕ್ಸರ್ ಸತೀಶ್ ಕುಮಾರ್ ಅವರು 91 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನುಂದು ಪಂದ್ಯದಲ್ಲಿ ಸತೀಶ್ ಅವರು ಗೆಲುವು ಸಾಧಿಸಿದರೆ ಭಾರತಕ್ಕೆ ಪದಕ ಸಿಗಲಿದೆ. ಇವರ ಜೊತೆ ಲೋವ್ಲೀನಾ, ಪೂಜಾರಾಣಿ ಕೂಡ ಒಂದು ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಪದಕ ಸಿಗಲಿದೆ.
ಇನ್ನೂ ಪುರುಷರ ಸಿಂಗಲ್ಸ್ ಆರ್ಚರಿ 32ರ ಸುತ್ತಿನಲ್ಲಿ ಭಾರತದ ಅತನು ದಾಸ್ ದಕ್ಷಿಣ ಕೊರಿಯಾದ ಜಿನ್ ಹ್ಯೇಕ್ ವಿರುದ್ಧ 6-4 ಅಂತರದಲ್ಲಿ ಜಯ ಸಾಧಿಸಿದ್ದಾರೆ. 2 ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಜಿನ್ ಹ್ಯೇಕ್ ವಿರುದ್ಧ ಭಾರತದ ಅತನು ದಾಸ್ ಗೆಲುವು ಸಾಧಿಸಿರುವುದು ದೊಡ್ಡ ಸಾಧನೆಯಾಗಿದ್ದು, ಈ ಮೂಲಕ ಪ್ರೀಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಜಿನ್‌ಹ್ಯಾಕ್ ಮೊದಲ ಸೆಟ್‌ನಲ್ಲಿ 26-25 ಅಂಕಗಳ ಮುನ್ನಡೆ ಸಾಧಿಸುವ ಮೂಲಕ 2 ಅಂಕ ಸಂಪಾದಿಸಿದರು. ಎರಡನೇ ಹಾಗೂ ಮೂರನೇ ಸೆಟ್‌ನಲ್ಲಿ ಉಭಯ ಆರ್ಚರ್‌ಗಳು ತಲಾ 27-27 ಅಂಕ ಗಳಿಸುವ ಮೂಲಕ ತಲಾ ಒಂದೊಂದು ಅಂಕ ಹಂಚಿಕೊಂಡರು. ಇನ್ನು ನಾಲ್ಕನೇ ಸೆಟ್‌ನಲ್ಲಿ ಆತನು ದಾಸ್ 27-22 ಅಂಕಗಳನ್ನು ಗಳಿಸಿ ಕಮ್‌ಬ್ಯಾಕ್ ಮಾಡಿದರು. ಐದನೇ ಸೆಟ್‌ನಲ್ಲಿ ಮತ್ತೆ ಉಭಯ ಆಟಗಾರರು ತಲಾ 28 ಅಂಕ ಗಳಿಸಿದ್ದರಿಂದ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಮೊದಲು ಬಾಣ ಪ್ರಯೋಗಿಸಿದ ಕೊರಿಯಾ ಆರ್ಚರ್ 9 ಅಂಕ ಗಳಿಸಿದರೆ, ಆತನು ದಾಸ್ 10 ಅಂಕ ಗಳಿಸುವ ಮೂಲಕ ಬಲಿಷ್ಠ ಕೊರಿಯಾ ಆರ್ಚರ್ ಅವರನ್ನು ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಗಟ್ಟಿದರು.
ಭಾರತ ಪುರುಷರ ಹಾಕಿ ತಂಡ 2016ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅರ್ಜೆಂಟಿನಾವನ್ನು 3-1 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಕ್ವಾರ್ಟರ್ ಫೈನಲ್ನಲ್ಲಿ ಜುಲೈ 30 ರಂದು ಜಪಾನ್ ವಿರುದ್ಧ ಸೆಣೆಸಾಡಲಿದೆ.
ಇನ್ನೂ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪಿವಿ ಸಿಂಧೂ ಅವರು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಡ್ಟ್ ವಿರುದ್ಧ ರೌಂಡ್ 16 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು. ಮಿಯಾ ವಿರುದ್ಧ 21-15, 21-13 ಅಂಕಗಳ ಅಂತರದಲ್ಲಿ ಸಿಂಧೂ ಅವರು ಮೇಲುಗೈ ಸಾಧಿಸಿದರು. ಸುಮಾರು 40 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು.
Devdutt Padikkal: ಚೊಚ್ಚಲ ಪಂದ್ಯದಲ್ಲೇ ದೇವದತ್ ಪಡಿಕ್ಕಲ್ ಸ್ಟನ್ನಿಂಗ್ ಸಿಕ್ಸ್: ಇಲ್ಲಿದೆ ನೋಡಿ ರೋಚಕ ವಿಡಿಯೋ
Tokyo Olympics: ಗೆಲುವಿನ ಓಟ ಮುಂದುವರೆಸಿದ ಪಿವಿ ಸಿಂಧೂ: ಕ್ವಾರ್ಟರ್ ಫೈನಲ್‌ಗೆ ಲಗ್ಗೆ
(Tokyo Olympics India advanced in Boxing, Badminton Hockey quarter final and pre quarter final in Archery)