Tokyo Olympics: 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ ಯುವ ಶೂಟರ್ ಮನು ಭಾಕರ್
ಟೋಕಿಯೋ ಒಲಿಂಪಿಕ್ಸ್‌ನ ಆರಂಭಿಕ ಸ್ಪರ್ಧೆಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತದ ಯುವ ಶೂಟರ್ ಮನು ಭಾಕರ್ ಮಹಿಳಾ ವಿಭಾಗದ 25 ಮೀಟರ್ ಪಿಸ್ತೂಲ್ ಪ್ರೀಶಿಯಸ್ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಸ್ಪರ್ಧೆ ಮುಗಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನ ಏಳನೇ ದಿನವಾದ ಇಂದು ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಮಹಿಳೆಯರ ಸಿಂಗಲ್ಸ್ನಲ್ಲಿ ಪಿವಿ ಸಿಂಧೂ (PV Sindu), ಭಾರತದ ಪುರುಷರ ಹಾಕಿ ತಂಡ ಹಾಗೂ ಬಾಕ್ಸರ್ ಸತೀಶ್ ಕುಮಾರ್ (Sathish Kumar) ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆರ್ಚರಿಯಲ್ಲಿ ಆತನು ದಾಸ್ ರೋಚಕ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಸದ್ಯ ಟೋಕಿಯೋ ಒಲಿಂಪಿಕ್ಸ್‌ನ ಆರಂಭಿಕ ಸ್ಪರ್ಧೆಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತದ ಯುವ ಶೂಟರ್ ಮನು ಭಾಕರ್ ಮಹಿಳಾ ವಿಭಾಗದ 25 ಮೀಟರ್ ಪಿಸ್ತೂಲ್ ಪ್ರೀಶಿಯಸ್ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ಆದರೆ, 5ನೇ ಸ್ಥಾನದಲ್ಲಿ ಸ್ಪರ್ದೆ ಮುಗಿಸಿರುವುದು ಅತ್ಯುತ್ತಮ ಬೆಳವಣಿಗೆಯಾಗಿದೆ.
ಒಸಾಕಾ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಕರ್ 592 ಅಂಕ ಗಳಿಸಿದ್ದರು. ವಿಶ್ವ ನಂ.2 ಶೂಟರ್ ಭಾರತದ ರಾಹಿ ಸರ್ನೊಬತ್ ಮೂರು ಸರಣಿಗಳಲ್ಲಿ ಕೇವಲ 987 ಅಂಕ ಕಲೆ ಹಾಕಿ ನಿರಾಸೆ ಮೂಡಿಸಿದ್ದಾರೆ. ಮನು ಭಾಕರ್‌ಗೆ ಶುಕ್ರವಾರ ಮತ್ತೆ ಸ್ಪರ್ಧೆಯಿದೆ. ಮಹಿಳಾ ಪಿಸ್ತೂಲ್ ರ್‍ಯಾಪಿಡ್ ರೌಂಡ್‌ನಲ್ಲಿ ಭಾಕರ್ ಸ್ಪರ್ಧಿಸಲಿದ್ದಾರೆ.
ಭಾರತಕ್ಕೆ ಪದಕ ಖಚಿತ:
ಬಾಕ್ಸರ್ ಸತೀಶ್ ಕುಮಾರ್ ಇಂದು ನಡೆದ 91 ಕೆಜಿ ವಿಭಾಗದಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ಅಂತರದಿಂದ ಸೋಲಿಸುವ ಮೂಲಕ ಸತೀಶ್ ಅವರು 91 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನುಂದು ಪಂದ್ಯದಲ್ಲಿ ಸತೀಶ್ ಅವರು ಗೆಲುವು ಸಾಧಿಸಿದರೆ ಭಾರತಕ್ಕೆ ಪದಕ ಸಿಗಲಿದೆ. ಇವರ ಜೊತೆ ಲೋವ್ಲೀನಾ, ಪೂಜಾರಾಣಿ ಕೂಡ ಒಂದು ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಪದಕ ಸಿಗಲಿದೆ. ಈ ಮೂಲಕ ಭಾರತಕ್ಕೆ ಕನಿಷ್ಠ ಒಂದು ಪದಕ ಸಿಗುವುದು ಖಚಿತವಾಗಿದೆ.
ಇನ್ನೂ ಪುರುಷರ ಸಿಂಗಲ್ಸ್ ಆರ್ಚರಿ 32ರ ಸುತ್ತಿನಲ್ಲಿ ಭಾರತದ ಅತನು ದಾಸ್ ದಕ್ಷಿಣ ಕೊರಿಯಾದ ಜಿನ್ ಹ್ಯೇಕ್ ವಿರುದ್ಧ 6-4 ಅಂತರದಲ್ಲಿ ಜಯ ಸಾಧಿಸಿದ್ದಾರೆ. 2 ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಜಿನ್ ಹ್ಯೇಕ್ ವಿರುದ್ಧ ಭಾರತದ ಅತನು ದಾಸ್ ಗೆಲುವು ಸಾಧಿಸಿರುವುದು ದೊಡ್ಡ ಸಾಧನೆಯಾಗಿದ್ದು, ಈ ಮೂಲಕ ಪ್ರೀಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
IND vs SL: ಇಂದು ಭಾರತ-ಶ್ರೀಲಂಕಾ 3ನೇ ಟಿ-20: ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ
(Tokyo Olympics Manu Bhaker finishes impressive 5th in Womens 25m Pistol Qualification Precision Round)
Published On - 2:36 pm, Thu, 29 July 21