Tokyo Olympics: ಆರ್ಚರಿಯಲ್ಲಿ ಭಾರತದ ಹೀನಾಯ ಪ್ರದರ್ಶನ: ರೋಯಿಂಗ್​ನಲ್ಲೂ ಸೋಲು

| Updated By: Vinay Bhat

Updated on: Jul 28, 2021 | 12:11 PM

ಸೆಮಿಫೈನಲ್ ಸುತ್ತಿನಲ್ಲಿ ಭಾಗವಹಿಸಿದ್ದ 6 ಜೋಡಿಗಳಲ್ಲಿ ಭಾರತದ ಅರ್ಜುನ್ ಲಾಲ್ ಜತ್ ಮತ್ತು ಅರವಿಂದ್ ಸಿಂಗ್ ಕೊನೆಯ ಸ್ಥಾನ ಪಡೆದುಕೊಳ್ಳುವುದರ ಮೂಲಕ ಸೆಮಿಫೈನಲ್ ಸುತ್ತಿಗೆ ತಮ್ಮ ಆಟ ನಿಲ್ಲಿಸಿದ್ದಾರೆ.

Tokyo Olympics: ಆರ್ಚರಿಯಲ್ಲಿ ಭಾರತದ ಹೀನಾಯ ಪ್ರದರ್ಶನ: ರೋಯಿಂಗ್​ನಲ್ಲೂ ಸೋಲು
Tokyo Olympics
Follow us on

ಟೋಕಿಯೋ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತೀಯ ಕ್ರೀಡಾಪಟುಗಳ ಸೋಲಿನ ಪಯಣ ಮುಂದುವರೆದಿದೆ. ದಿನದ ಆರಂಭದಲ್ಲಿ ಭಾರತ ಮಹಿಳೆಯರ ಹಾಕಿ (Hockey) ತಂಡ ಗ್ರೇಟ್ ಬ್ರಿಟನ್ ವಿರುದ್ಧ 1-4 ಗೋಲುಗಳ ಅಂತರದಲ್ಲಿ ಪರಭಾವಗೊಂಡಿತು. ಈ ಮೂಲಕ ಹ್ಯಾಟ್ರಿಕ್ ಸೋಲುಂಡಿತು. ಇದರ ಬೆನ್ನಲ್ಲೆ ಆರ್ಚರಿ (Archery) ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹಿರಿಯ ಬಿಲ್ಲುಗಾರ ತರುಣ್ ದೀಪ್ ರೈ ನಿರಾಸೆ ಮೂಡಿಸಿದ್ದಾರೆ. ಜೊತೆಗೆ ರೋಯಿಂಗ್ ಡಬಲ್ಸ್ ವಿಭಾಗದಲ್ಲಿ ಅರ್ಜುನ್ ಮತ್ತು ಅರವಿಂದ್ ಜೋಡಿ ಸೆಮಿಫೈನಲ್ ಸುತ್ತಿನಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದರ ಮೂಲಕ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಆರ್ಚರಿ ತಂಡ ಆರಂಭದಿಂದಲೂ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿಯೂ ಹಿರಿಯ ಬಿಲ್ಲುಗಾರ ತರುಣ್ ದೀಪ್ ರೈ ನಿರಾಸೆ ಮೂಡಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್ ಆರ್ಚರಿ ವಿಭಾಗದಲ್ಲಿ ಮೊದಲನೇ ಪಂದ್ಯವನ್ನು ಉಕ್ರೇನ್ ತಂಡದ ಬಿಲ್ಗಾರನ ವಿರುದ್ಧ ಭಾರತದ ತರುಣ್ ದೀಪ್ ರೈ 6-4 ಅಂತರದಲ್ಲಿ ಜಯ ಸಾಧಿಸಿ ಎರಡನೇ ಹಂತಕ್ಕೆ ಲಗ್ಗೆ ಇಟ್ಟಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಇಟಲಿಯ ಬಿಲ್ಲುಗಾರ ಶ್ಯಾನಿ ವಿರುದ್ಧ ತರುಣ್ ದೀಪ್ ರೈ 4-6 ಅಂತರದಲ್ಲಿ ಸೋಲು ಕಂಡಿದ್ದಾರೆ.

ಇತ್ತ ರೋಯಿಂಗ್ ಡಬಲ್ಸ್ ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳಾದ ಅರ್ಜುನ್ ಮತ್ತು ಅರವಿಂದ್ ಜೋಡಿ ಭಾನುವಾರ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ, ಇಂದು ನಡೆದ ಸೆಮಿಫೈನಲ್ ಸುತ್ತಿನಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದರ ಮೂಲಕ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡರು.

ಸೆಮಿಫೈನಲ್ ಸುತ್ತಿನಲ್ಲಿ ಭಾಗವಹಿಸಿದ್ದ 6 ಜೋಡಿಗಳಲ್ಲಿ ಭಾರತದ ಅರ್ಜುನ್ ಲಾಲ್ ಜತ್ ಮತ್ತು ಅರವಿಂದ್ ಸಿಂಗ್ ಕೊನೆಯ ಸ್ಥಾನ ಪಡೆದುಕೊಳ್ಳುವುದರ ಮೂಲಕ ಸೆಮಿಫೈನಲ್ ಸುತ್ತಿಗೆ ತಮ್ಮ ಆಟ ನಿಲ್ಲಿಸಿದ್ದಾರೆ.

ಇನ್ನೂ ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧೂ ಮಹಿಳಾ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಹಾಂಕಾಂಗ್‌ನ ಆಟಗಾರ್ತಿ ಹಾಗೂ 34ನೇ ಶ್ರೇಯಾಂಕ ಹೊಂದಿರುವ ಚೆಯುಂಗ್‌ ಗಾನ್‌ ಯಿ ವಿರುದ್ಧ 21-9, 21-16 ಅಂಕಗಳ ಅಂತರದಲ್ಲಿ ಚೆಯುಂಗ್‌ ಗಾನ್‌ ಯಿಯನ್ನು ಸೋಲಿಸಿ ರೌಂಡ್ 16ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಸಿಂಧೂ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲಿನ ಕೆಸ್ನಿಯಾ ಪೊಲಿಕರ್ಪೊವಾ ಎದುರು 21-7, 21-10 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಸುಲಭವಾಗಿ ಪಂದ್ಯದಲ್ಲಿ ಪ್ರಾಬಲ್ಯ ಮೆರೆದಿದ್ದರು. ಗ್ರೂಪ್ ‘ಜೆ’ನಲ್ಲಿ ಸ್ಥಾನ ಪಡೆದಿರುವ ಸಿಂಧೂ ಮೊದಲ ಗೇಮ್‌ನಲ್ಲಿ 13 ಅಂಕಗಳ ಭಾರೀ ಅಂತರದ ಗೆಲುವು ದಾಖಲಿಸಿದ್ದರು.

IND vs SL 2ನೇ ಟಿ-20: ಭಾರತದ ಪ್ಲೇಯಿಂಗ್ XI ನಲ್ಲಿ ಅಲ್ಲೋಲ ಕಲ್ಲೋಲ: ಇಂದು ಕಣಕ್ಕಿಳಿಯುವವರು ಯಾರೆಲ್ಲ?

IND vs SL: ಟೀಮ್ ಇಂಡಿಯಾದ ಈ 9 ಆಟಗಾರರು ಮುಂದಿನ ಎರಡೂ ಟಿ-20ಯಲ್ಲಿ ಕಣಕ್ಕಿಳಿಯಲ್ಲ: ಯಾರೆಲ್ಲ ಗೊತ್ತೇ?

(Tokyo Olympics India set up quarter-final with Korea in mens archery after 6-2 win over Kazakhsta)