IND vs SL: ಟೀಮ್ ಇಂಡಿಯಾದ ಈ 9 ಆಟಗಾರರು ಮುಂದಿನ ಎರಡೂ ಟಿ-20ಯಲ್ಲಿ ಕಣಕ್ಕಿಳಿಯಲ್ಲ: ಯಾರೆಲ್ಲ ಗೊತ್ತೇ?

TV9 Digital Desk

| Edited By: Vinay Bhat

Updated on: Jul 28, 2021 | 10:30 AM

Krunal Pandya: ಕ್ರುನಾಲ್ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದ ಆಟಗಾರರ ಹೆಸರು ಹೊರಬಿದ್ದಿದೆ. ಅಲ್ಲದೆ ಇವರು ಬಾಕಿ ಉಳಿದಿರುವ ಎರಡು ಟಿ-20 ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಹೇಳಲಾಗಿದೆ.

IND vs SL: ಟೀಮ್ ಇಂಡಿಯಾದ ಈ 9 ಆಟಗಾರರು ಮುಂದಿನ ಎರಡೂ ಟಿ-20ಯಲ್ಲಿ ಕಣಕ್ಕಿಳಿಯಲ್ಲ: ಯಾರೆಲ್ಲ ಗೊತ್ತೇ?
India vs Sri Lanka

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಕ್ರುನಾಲ್ ಪಾಂಡ್ಯ (Krunal Pandya) ಅವರಿಗೆ ಕೊರೋನಾ ಪಾಸಿಟಿವ್ ಬಂದ ಪರಿಣಾಮ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಮಂಗಳವಾರ ನಡೆಯಬೇಕಿದ್ದ ಎರಡನೇ ಟಿ-20 ಪಂದ್ಯ ಇಂದು ಬುಧವಾರ ನಡೆಯಲಿದೆ. ಕ್ರುನಾಲ್ ಪಾಂಡ್ಯ ಲಂಕಾ ವಿರುದ್ಧದ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇತ್ತ ಇವರ ಜೊತೆ ಸಂಪರ್ಕದಲ್ಲಿದ್ದ 8 ಆಟಗಾರರ ಕೋವಿಡ್ (Corona virus) ವರದಿ ಬಂದಿದ್ದು ನೆಗೆಟಿವ್ ಇದೆ. ಆದರೂ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಕ್ರುನಾಲ್ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದ ಆಟಗಾರರ ಹೆಸರು ಹೊರಬಿದ್ದಿದೆ. ಅಲ್ಲದೆ ಇವರು ಬಾಕಿ ಉಳಿದಿರುವ ಎರಡು ಟಿ-20 ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಇನ್​ಸೈಡ್ ಸ್ಟೋರ್ಟ್ಸ್ ವರದಿ ಮಾಡಿದೆ. ಇದರ ಪ್ರಕಾರ ಟೀಮ್ ಇಂಡಿಯಾದ ಪೃಥ್ವಿ ಶಾ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್, ದೇವದತ್ ಪಡಿಕ್ಕಲ್ ಮತ್ತು ಕೃಷ್ಣಪ್ಪ ಗೌತಮ್ ಸೇರಿದಂತೆ ಒಟ್ಟು 9 ಆಟಗಾರರನ್ನು ಸಂಪೂರ್ಣವಾಗಿ ಐಸೋಲೇಶನ್‌ ಮಾಡಲಾಗಿದೆ. ಇವರು ಎರಡನೇ ಹಾಗೂ ಮೂರನೇ ಟಿ-20 ಯಲ್ಲಿ ಆಡುವುದಿಲ್ಲ ಎಂದು ಹೇಳಲಾಗಿದೆ.

ಮಂಗಳವಾರ ಈ ಆಟಗಾರರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ವರದಿ ನೆಗೆಟಿವ್ ಬಂದಿದೆ. ಇಂದು ಬುಧವಾರ ಮತ್ತೊಮ್ಮೆ ಕೊರೊನಾ ಪರೀಕ್ಷೆ ಮಾಡಲಾಗುತ್ತದೆಯಂತೆ. ಇನ್ನೂಕ್ರುನಾಲ್‌ ಅವರನ್ನು 7 ದಿನಗಳ ಕಾಲ ಅಗತ್ಯದ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರು ಭಾರತಕ್ಕೂ ಮರಳಬಾರದು ಎಂದು ಸೂಚಿಸಲಾಗಿದೆ. ಭಾರತೀಯ ತಂಡ ಜುಲೈ 30ರಂದು ಭಾರತಕ್ಕೆ ಮರಳಲಿದ್ದರೂ ಪಾಂಡ್ಯ ಶ್ರೀಲಂಕಾದಲ್ಲಿದ್ದು ಕ್ವಾರಂಟೈನ್ ಪೂರೈಸಿದ ಬಳಿಕ ಭಾರತಕ್ಕೆ ಹಿಂದಿರುಗ ಬೇಕಾದ ಪರಿಸ್ಥಿತಿ ಎದುರಾಗಿದೆ.

“ಕ್ರುನಾಲ್ ಪಾಂಡ್ಯ ಅವರಿಗೆ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡಿತ್ತು.ಹೀಗಾಗಿ ಸರಣಿಯಿಂದ ಅವರು ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಅವರ ಸಂಪರ್ಕಕ್ಕೆ ಬಂದಿದ್ದ 8 ಆಟಗಾರರ ಕೋವಿಡ್‌-19 ವರದಿ ನೆಗೆಟಿವ್ ಬಂದಿದೆ” ಎಂದು ಬಿಸಿಸಿಐ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಶಾ-ಸೂರ್ಯಕುಮಾರ್​ಗೆ ದೊಡ್ಡ ಸಂಕಷ್ಟ:

ಹೌದು, ಕ್ರುನಾಲ್ ಪಾಂಡ್ಯಗೆ ಕೊರೋನಾ ಕಾಣಿಸಿಕೊಂಡಿರುವುದರಿಂದ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್​​ಗೆ ದೊಡ್ಡ ಸಂಕಷ್ಟ ಎದುರಾಗಿದೆ. ಇವರಿಬ್ಬರೂ ಲಂಕಾ ಸರಣಿ ಮುಗಿದ ತಕ್ಷಣ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ ಇವರಿಬ್ಬರು ಕಡ್ಡಾಯವಾಗಿ ಕ್ವಾರಂಟೈನ್​ನಲ್ಲಿ ಇರಬೇಕಾಗಿರುವುದರಿಂದ ಇಂಗ್ಲೆಂಡ್ ವಿಮಾನವೇರಲು ಸಾಧ‍್ಯವಿಲ್ಲದಂತಾಗಿದೆ.

Tokyo Olympics 2020: ಭಾರತ ಮಹಿಳಾ ಹಾಕಿ ತಂಡಕ್ಕೆ ಭಾರೀ ಮುಖಭಂಗ: ಸತತ ಮೂರನೇ ಸೋಲು

Tokyo Olympics: ರೋಚಕ ಪಂದ್ಯದಲ್ಲಿ ಪಿವಿ ಸಿಂಧೂಗೆ ಜಯ: ರೌಂಡ್ 16ಗೆ ಲಗ್ಗೆ

(India vs Sri Lanka Prithvi Shaw Suryakumar yadav Ishan Kishan among 9 Indian players not available for ind vs sl 2nd and 3rd T20 )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada