Krunal Pandya: ಲಂಕಾ ವಿರುದ್ಧದ ಸರಣಿಯಿಂದ ಕ್ರುನಾಲ್ ಪಾಂಡ್ಯ ಔಟ್: ಸಂಪರ್ಕದಲ್ಲಿದ್ದ 8 ಆಟಗಾರರು..?
India vs Sri Lanka: ಶ್ರೀಲಂಕಾ ವಿರುದ್ಧ ಎರಡನೇ ಟಿ-20 ಸರಣಿಯ ಆರಂಭಕ್ಕೆ ಇನ್ನೇನು ಕೆಲವು ಗಂಟೆಗಳು ಇವೆ ಎಂಬೊತ್ತಿಗೆ ಟೀಮ್ ಇಂಡಿಯಾ ಆಟಗಾರ ಕ್ರುನಾಲ್ ಪಾಂಡ್ಯ ಕೊರೋನಾ ವೈರಸ್‌ಗೆ ತುತ್ತಾಗಿರುವುದು ಪರೀಕ್ಷೆಯಿಂದ ತಿಳಿದುಬಂದಿತ್ತು.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ (All Rounder) ಕ್ರುನಾಲ್ ಪಾಂಡ್ಯಗೆ (Krunal Pandya) ಕೊರೋನಾ ಪಾಸಿಟಿವ್ (Krunal Pandya) ಬಂದ ಹಿನ್ನಲೆ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ಮಂಗಳವಾರ ನಡೆಯಬೇಕಿದ್ದ ಎರಡನೇ ಟಿ-20 ಪಂದ್ಯವನ್ನು ಮುಂದೂಡಲಾಗಿದೆ. ಇದರ ಬೆನ್ನಲ್ಲೆ ಸದ್ಯ ಬಿಸಿಸಿಐಯಿಂದ ಮತ್ತೊಂದು ಮಾಹಿತಿ ಹೊರಬಿದ್ದಿದ್ದು ಇದರ ಪ್ರಕಾರ ಕ್ರುನಾಲ್ ಲಂಕಾ ವಿರುದ್ಧದ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಖುಷಿಯ ವಿಚಾರ ಎಂದರೆ ಪಾಂಡ್ಯ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಟೀಮ್ ಇಂಡಿಯಾದ 8 ಕ್ರಿಕೆಟಿಗರ ಕೋವಿಡ್ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ.
ಶ್ರೀಲಂಕಾ ವಿರುದ್ಧ ಎರಡನೇ ಟಿ-20 ಸರಣಿಯ ಆರಂಭಕ್ಕೆ ಇನ್ನೇನು ಕೆಲವು ಗಂಟೆಗಳು ಇವೆ ಎಂಬೊತ್ತಿಗೆ ಟೀಮ್ ಇಂಡಿಯಾ ಆಟಗಾರ ಕ್ರುನಾಲ್ ಪಾಂಡ್ಯ ಕೊರೋನಾ ವೈರಸ್‌ಗೆ ತುತ್ತಾಗಿರುವುದು ಪರೀಕ್ಷೆಯಿಂದ ತಿಳಿದುಬಂದಿತ್ತು. ಹೀಗಾಗಿ ಪಾಂಡ್ಯ ಅವರ ನಿಕಟ ಸಂಪರ್ಕವನ್ನು ಹೊಂದಿದ್ದ 8 ಕ್ರಿಕೆಟಿಗರನ್ನು ಐಸೋಲೇಶನ್‌ಗೆ ಒಳಪಡಿಸಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ಇವರ ವರದಿಯಲ್ಲಿ ನೆಗೆಟಿವ್ ಎಂದಿದೆ.
ಇನ್ನೂಕ್ರುನಾಲ್ ಅವರನ್ನು 7 ದಿನಗಳ ಕಾಲ ಅಗತ್ಯದ ಕ್ವಾರಂಟೈನ್‌ಗೆ ಒಳಪಡಿಸುವುದರಿಂದ ಟಿ-20 ಸರಣಿಯಲ್ಲಿ ಬಾಕಿ ಉಳಿದಿರುವ ಎರಡೂ ಪಂದ್ಯಗಳಿಂದ ಆಲ್‌ರೌಂಡರ್ ಸಂಪೂರ್ಣವಾಗಿ ಹೊರಬಿದಿದ್ದಾರೆ. ಅವರು ಭಾರತಕ್ಕೂ ಮರಳಬಾರದು ಎಂದು ಸೂಚಿಸಲಾಗಿದೆ. ಭಾರತೀಯ ತಂಡ ಜುಲೈ 30ರಂದು ಭಾರತಕ್ಕೆ ಮರಳಲಿದ್ದರೂ ಪಾಂಡ್ಯ ಶ್ರೀಲಂಕಾದಲ್ಲಿದ್ದು ಕ್ವಾರಂಟೈನ್ ಪೂರೈಸಿದ ಬಳಿಕ ಭಾರತಕ್ಕೆ ಮರಳಬೇಕಿದೆ.
“ಕ್ರುನಾಲ್ ಪಾಂಡ್ಯ ಅವರಿಗೆ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡಿತ್ತು.ಹೀಗಾಗಿ ಸರಣಿಯಿಂದ ಅವರು ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಅವರ ಸಂಪರ್ಕಕ್ಕೆ ಬಂದಿದ್ದ 8 ಆಟಗಾರರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ” ಎಂದು ಬಿಸಿಸಿಐ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಮಂಗಳವಾರ ಮುಂದೂಡಲ್ಪಟ್ಟ ಭಾರತ-ಶ್ರೀಲಂಕಾ ನಡುವಣ ಎರಡನೇ ಟಿ-20 ಪಂದ್ಯವನ್ನು ಇಂದು ಬುಧವಾರ (ಜುಲೈ 28) ಆಯೋಜಿಸಲಾಗುತ್ತಿದ್ದು, ಮೂರನೇ ಹಾಗೂ ಅಂತಿಮ ಪಂದ್ಯ ನಿಗದಿಯಂತೆ ಜುಲೈ 29 ರಂದು (ಗುರುವಾರ) ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
India vs Sri Lanka 2nd T20: ಕೃನಾಲ್ ಪಾಂಡ್ಯ ಸ್ಥಾನದಲ್ಲಿ ಕನ್ನಡಿಗನಿಗೆ ಸಿಗಲಿದೆ ಚಾನ್ಸ್?
(India vs Sri Lanka 8 Contacts Of Covid Positive Krunal Pandya Return Negative Results Source)