Tokyo Olympics: ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ ಭಾರತದ ಆರ್ಚರ್ ದೀಪಿಕಾ ಕುಮಾರಿ

| Updated By: ಪೃಥ್ವಿಶಂಕರ

Updated on: Jul 28, 2021 | 3:32 PM

Tokyo Olympics: ಎರಡನೇ ಸುತ್ತಿನಲ್ಲಿ ದೀಪಿಕಾ ಕಠಿಣ ಸ್ಪರ್ಧೆಯಲ್ಲಿ ಅಮೆರಿಕದ ಜೆನ್ನಿಫರ್ ಫರ್ನಾಂಡೀಸ್ ಅವರನ್ನು 6-4 ಅಂತರದಿಂದ ಸೋಲಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು.

Tokyo Olympics: ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ ಭಾರತದ ಆರ್ಚರ್ ದೀಪಿಕಾ ಕುಮಾರಿ
Deepika Kumari
Follow us on

ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಬುಧವಾರ ನಡೆದ ವೈಯಕ್ತಿಕ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಭಾರತದ ಸ್ಟಾರ್ ಮಹಿಳಾ ಆರ್ಚರ್ ದೀಪಿಕಾ ಕುಮಾರಿ 6-0 ಅಂತರದಿಂದ ಭೂತಾನ್‌ನ ಕರ್ಮ ಅವರನ್ನು ಸೋಲಿಸಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದರು. ಮೊದಲ ಸೆಟ್‌ನಲ್ಲಿ ದೀಪಿಕಾ 26 ಮತ್ತು ಕರ್ಮ 23. ಎರಡನೇ ಸೆಟ್‌ನಲ್ಲಿ ದೀಪಿಕಾ 26 ಮತ್ತು ಕರ್ಮ ಮತ್ತೆ 23 ಅಂಕಗಳನ್ನು ಗಳಿಸಿದರು. ಮೂರನೇ ಸೆಟ್‌ನಲ್ಲಿ ದೀಪಿಕಾ 27 ಅಂಕಗಳನ್ನು ಗಳಿಸಿದರೆ ಕರ್ಮ ಕೇವಲ 24 ಅಂಕಗಳನ್ನು ಗಳಿಸಿದರು. ಈಗ ದೀಪಿಕಾ ಕುಮಾರಿ ವೈಯಕ್ತಿಕ ಪಂದ್ಯಾವಳಿಯ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಎರಡನೇ ಸುತ್ತಿನಲ್ಲಿ ದೀಪಿಕಾ ಕಠಿಣ ಸ್ಪರ್ಧೆಯಲ್ಲಿ ಅಮೆರಿಕದ ಜೆನ್ನಿಫರ್ ಫರ್ನಾಂಡೀಸ್ ಅವರನ್ನು 6-4 ಅಂತರದಿಂದ ಸೋಲಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು.

ಮೊದಲ ಸೆಟ್‌ನಲ್ಲಿ ದೀಪಿಕಾ 8, 9, 9 ಅಂಕ ಗಳಿಸಿದರು. ಅದೇ ಸಮಯದಲ್ಲಿ, ಕರ್ಮ 8, 6, 9 ಅಂಕಗಳನ್ನು ಗಳಿಸಿದರು. ಮೂರನೇ ಸೆಟ್‌ನಲ್ಲಿ ದೀಪಿಕಾ 9, 10, 8 ಮತ್ತು ಕರ್ಮ 6, 8, 10 ಅಂಕ ಗಳಿಸಿದರು. ಮಿಶ್ರ ತಂಡದ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಪದಕ ನಿರೀಕ್ಷಿಸುತ್ತಿದ್ದರು ಆದರೆ ಅವರ ಜೋಡಿ ನಿರೀಕ್ಷೆಗಳಿಗೆ ತಕ್ಕಂತೆ ಆಟವಾಡಲು ಸಾಧ್ಯವಾಗಲಿಲ್ಲ. ಪ್ರವೀಣ್ ಅವರು ಇಂದು ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ ಎರಡನೇ ಹಂತವನ್ನು ಮೀರಿ ಹೋಗಲು ಸಾಧ್ಯವಾಗಲಿಲ್ಲ.