ಹಾಗೆ, 34ನೇ ಒಲಿಂಪಿಕ್ಸ್ (Olympic 2020) ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಈ ಬಾರಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಭಾರತ ಒಲಿಂಪಿಕ್ಸ್ ಅಂಗಳದಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಅದರಲ್ಲೂ 13 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿಸುವಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಯಶಸ್ವಿಯಾಗಿದ್ದಾರೆ. ಇದಾಗ್ಯೂ ಒಟ್ಟಾರೆ ಪ್ರದರ್ಶನದಲ್ಲಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನಗಳಿಸಲಷ್ಟೇ ಶಕ್ತವಾಯಿತು.
ಕೊರೋನಾಂತಕದ ನಡುವೆ ಜಪಾನ್ನ ಟೋಕಿಯೋ ನಗರದಲ್ಲಿ ಜುಲೈ 23 ರಂದು ಒಲಿಂಪಿಕ್ಸ್ ಕ್ರೀಡಾಕೂಟ ಶುರುವಾಗಿತ್ತು. ಈ ಬಾರಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಕ್ರೀಡಾಕೂಟ ನಡೆದಿರುವುದು ವಿಶೇಷ. ಇದಾಗ್ಯೂ ಕ್ರೀಡಾಪಟುಗಳು ರೋಚಕ ಹೋರಾಟ ಮುಂದಿಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಹಲವು ಸ್ಪರ್ಧೆಗಳಲ್ಲಿ ಭಾರತ ಸೆಮಿಫೈನಲ್ ಹಂತಕ್ಕೇರಿದ್ದು ವಿಶೇಷವಾಗಿತ್ತು. ಹೀಗಾಗಿ ಮುಂದಿನ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳಿಂದ ಮತ್ತಷ್ಟು ಪದಕವನ್ನು ನಿರೀಕ್ಷಿಸಬಹುದು.
ಇನ್ನು ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಅಮೆರಿಕ ಯಶಸ್ವಿಯಾಗಿದೆ. ಒಲಿಂಪಿಕ್ಸ್ ಅಂಗಳದ ಬಲಿಷ್ಠರು ಎಂದೇ ಬಿಂಬಿತವಾಗಿರುವ ಚೀನಾವನ್ನು ಹಿಂದಿಕ್ಕಿರುವ ಅಮೆರಿಕ ಕ್ರೀಡಾಪಟುಗಳು ಸತತ ಮೂರನೇ ಬಾರಿ ಒಲಿಂಪಿಕ್ಸ್ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಒಟ್ಟು 104 ಪದಕ ಪಡೆದಿದ್ದ ಯುಎಸ್ಎ, ಈ ಕಳೆದ ಬಾರಿ ರಿಯೋ ಒಲಿಂಪಿಕ್ಸ್-2016 ರಲ್ಲಿ 121 ಪದಕಗಳೊಂದಿಗೆ ಸರ್ವಶ್ರೇಷ್ಠ ಪ್ರದರ್ಶನ ನೀಡಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್ನಲ್ಲೂ ಪಾರುಪತ್ಯ ಮರೆಯುವ ಮೂಲಕ 113 ಪದಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇಲ್ಲಿ ವಿಶೇಷ ಎಂದರೆ ಅಮೆರಿಕ ಹೊರತಾಗಿ ಮತ್ಯಾವುದೇ ದೇಶ 100ಕ್ಕೂ ಅಧಿಕ ಪದಕ ಗೆಲ್ಲದಿರುವುದು. ಅಂದರೆ ಕಳೆದ ಮೂರು ಒಲಿಂಪಿಕ್ಸ್ನಲ್ಲೂ ಅಮೆರಿಕ ನೂರಕ್ಕೂ ಅಧಿಕ ಪದಕಗಳನ್ನು ತನ್ನದಾಗಿಸಿಕೊಳ್ಳುವ ಒಲಿಂಪಿಕ್ಸ್ ಅಂಗಳದಲ್ಲಿ ನಂಬರ್ 1 ದೇಶವಾಗಿ ನಿಂತಿದೆ.
ಅಷ್ಟೇ ಅಲ್ಲದೆ ಈ ಬಾರಿ ಚಿನ್ನದ ಪದಕದ ವಿಷಯದಲ್ಲಿ ಚೀನಾವನ್ನು ಅಂತಿಮ ದಿನದಲ್ಲಿ ಹಿಂದಿಕ್ಕುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಚೀನಾ 38 ಸ್ವರ್ಣ ಪದಕ ಗೆದ್ದರೆ, ಅಮೆರಿಕ 39 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಟಾಪ್ 10 ದೇಶಗಳ ಪದಕ ಪಟ್ಟಿ ಹೀಗಿದೆ: (tokyo olympics medallist)
1-ಅಮೆರಿಕ- 113 ( ಚಿನ್ನ 39, ಬೆಳ್ಳಿ, ಕಂಚು)
2- ಚೀನಾ- 88 (38 ಚಿನ್ನ, 32 ಬೆಳ್ಳಿ, 18 ಕಂಚು)
3- ಜಪಾನ್- 58 (27 ಚಿನ್ನ, 14 ಬೆಳ್ಳಿ, 17 ಕಂಚು)
4- ಬ್ರಿಟನ್- 65 (22 ಚಿನ್ನ, 21 ಬೆಳ್ಳಿ, 22 ಕಂಚು)
5- ರಷ್ಯಾ- 71 (20 ಚಿನ್ನ, 28 ಬೆಳ್ಳಿ, 23 ಕಂಚು)
6- ಆಸ್ಟ್ರೇಲಿಯಾ- 46 (17 ಚಿನ್ನ, 7 ಬೆಳ್ಳಿ, 22 ಕಂಚು)
7- ನೆದರ್ಲೆಂಡ್ಸ್- 36 (10 ಚಿನ್ನ, 12 ಬೆಳ್ಳಿ, 14 ಕಂಚು)
8- ಫ್ರಾನ್ಸ್- 33 (10 ಚಿನ್ನ, 12 ಬೆಳ್ಳಿ, 11 ಕಂಚು)
9- ಜರ್ಮನಿ- 37 (10 ಚಿನ್ನ, 11 ಬೆಳ್ಳಿ, 16 ಕಂಚು)
10- ಇಟಲಿ- 40 (10 ಚಿನ್ನ, 10 ಬೆಳ್ಳಿ, 20 ಕಂಚು)
48- ಭಾರತ- 7 (1 ಚಿನ್ನ, 2 ಬೆಳ್ಳಿ, 4 ಕಂಚು)
ಇದನ್ನೂ ಓದಿ: Airtel: ಏರ್ಟೆಲ್ ಕಡೆಯಿಂದ ನಿಮಗೆ ಈ ಮೆಸೇಜ್ ಬಂದಿದ್ರೆ ನಿರ್ಲಕ್ಷಿಸಿ
ಇದನ್ನೂ ಓದಿ: Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್ ಹೋಸ್ಟೆಸ್: ಆಮೇನಾಯ್ತು?
ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ