PV Sindhu: ಒಲಂಪಿಕ್ಸ್​ನಲ್ಲಿ ಕಂಚಿನ ಪದಕ ಪಡೆದ ಪಿವಿ ಸಿಂಧು ಗುರು ಯಾರು?

| Updated By: Digi Tech Desk

Updated on: Aug 02, 2021 | 2:00 PM

Tokyo Olympics 2020: ಇದೂ ನನಗೂ ಖುಷಿಯ ವಿಚಾರ ಜತೆಗೆ ಮೊದಲನೇಯ ಪದಕ. ತುಂಬಾ ಸಂತೋಷವಾಗುತ್ತಿದೆ ಎಂದು ಪಿವಿ ಸಿಂಧು ಅವರಿಗೆ ತರಬೇತಿ ನೀಡಿದ್ದ ಕೋಚರ್ ಟೇ ಸಾಂಗ್ ಪಿಟಿಐ ಜತೆ ಖುಷಿಯನ್ನು ಹಂಚಿಕೊಂಡರು.

PV Sindhu: ಒಲಂಪಿಕ್ಸ್​ನಲ್ಲಿ ಕಂಚಿನ ಪದಕ ಪಡೆದ ಪಿವಿ ಸಿಂಧು ಗುರು ಯಾರು?
ಒಲಂಪಿಕ್ಸ್ ಭಾರತಕ್ಕೆ ಹೆಮ್ಮೆ ತಂದ ಪಿ‌ವಿ ಸಿಂಧು ಪಿವಿ ಸಿಂಧು ಗುರು ಯಾರು?
Follow us on

ಟೋಕಿಯೋ ಒಲಂಪಿಕ್ಸ್​ನಲ್ಲಿ ಭಾರತೀಯ ಬಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕಂಚಿನ ಪದಕ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಿಳಾ ಸಿಂಗಲ್ಸ್​ ಬ್ಯಾಡ್ಮಿಂಟನ್​ನಲ್ಲಿ ಎದುರಾಳಿಯಾಗಿದ್ದ ಚೀನಾದ ಹೀ ಬಿಂಗ್ ಜಿಯಾವೋ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ. ಹಣಾಹಣಿಯಲ್ಲಿ ಗೆದ್ದು ಎರಡೂ ಕೈಗಳನ್ನು ಮೇಲಕ್ಕೆತ್ತಿ ಸಂಭ್ರಮಿಸುತ್ತಿರುವಾಗ ಹಿಂದೆ ನಿಂತಿದ್ದ ಕೋಚ್ ಟೇ ಸಾಂಗ್ ಖುಷಿಯಿಂದ ಸಂಭ್ರಮಿಸುತ್ತಿದ್ದರು. ಆದರೀಗ ಎಲ್ಲರಲ್ಲಿ ಮನೆ ಮಾಡಿರುವ ಪ್ರಶ್ನೆ ಅವರ ಈ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಕೋಚ್ ಯಾರು, ಎಲ್ಲಿಯವರು?

ನಾನು ತರಬೇತುದಾರನಾಗಿ, ನಾಯಕತ್ವದಲ್ಲಿ ಅದಕ್ಕೂ ಮೀರಿ ನನ್ನ ವೃತ್ತಿ ಜೀವನದ ಮಹತ್ವದ ಕ್ಷಣವಾಗಿದೆ. ಆಟಗಾರನಾಗಿದ್ದಾಗ ಹಾಗೂ ತರಬೇತುದಾರನಾಗಿದ್ದಾಗ ಒಲಂಪಿಕ್ ಪದಕವನ್ನು ಗೆಲ್ಲಲು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ಇದೂ ನನಗೂ ಖುಷಿಯ ವಿಚಾರ ಜತೆಗೆ ಮೊದಲನೇಯ ಪದಕ. ತುಂಬಾ ಸಂತೋಷವಾಗುತ್ತಿದೆ ಎಂದು ಪಿವಿ ಸಿಂಧು ಅವರಿಗೆ ತರಬೇತಿ ನೀಡಿದ್ದ ಕೋಚರ್ ಟೇ ಸಾಂಗ್ ಪಿಟಿಐ ಜತೆ ಖುಷಿಯನ್ನು ಹಂಚಿಕೊಂಡರು.

ಟೇ-ಸಾಂಗ್ ಅವರಿಗೆ 42 ವರ್ಷ. ಇವರು ಮೂಲತಃ ದಕ್ಷಿಣಾ ಕೊರಿಯಾದವರು. 2002ರಲ್ಲಿ ನಡೆದ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿರು. ಬಳಿಕ 2013ರಲ್ಲಿ ತರಬೇತುದಾರರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಕೊರಿಯಾದ ಬಾಡ್ಮಿಂಟನ್ ತಂಡದ ತರಬೇತುದಾರರಾದ ಇವರು 2013 ರಿಂದ 2018ರವರೆಗೆ ಸತತ ಐದು ವರ್ಷಗಳ ಕಾಲ ಭಾರತದ ಪುರುಷರ ಸಿಂಗಲ್ಸ್ ಆಟಗಾರರಲ್ಲಿ ಆಯ್ಕೆಯಾದರು. ಇದರ ನಂತರ 2019ರಲ್ಲಿ ಪಿವಿ ಸಿಂಧು ಅವರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡರು.

ಪಿವಿ ಸಿಂಧು 2017ರಿಂದ ವಿವಿಧ ತರಬೇತಿದಾರರ ಬಳಿ ತರಬೇತಿಯನ್ನು ಪಡೆದಿದ್ದಾರೆ. ಎಲ್ಲವನ್ನೂ ಮೀರಿ ಮುನ್ನಡೆಯಬೇಕಾದ್ದರಿಂದ ನಿರ್ದಿಷ್ಟ ತರಬೇತಿದಾರರ ಅವಶ್ಯಕತೆ ಇತ್ತು. ಕೆಲ ಸಮಯ ಇಂಡೋನೇಷ್ಯಾದ ಮುಲ್ಯೊ ಹ್ಯಾಂಡೊಯೊ ಅವರಲ್ಲಿ ತರಬೇತಿ ಪಡೆದರು. ಸಿಂಧು ಅವರು ಮೊದಲಿಗೆ ಅಷ್ಟಾಗಿ ಫಿಟ್ನೆಸ್ ಹೊಂದಿರಲಿಲ್ಲ. ಹ್ಯಾಂಡೊಯೊ ಅವರ ತರಬೇತಿಯ ಅಡಿಯಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸಿದರು. ಅದೆ ವರ್ಷ ಸಿಂಧು ವಿಶ್ವ ಚಾಂಪಿಯನ್ ಶಿಪ್ ಗೆದ್ದರು.

ಕೊವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ಟೊಕಿಯೊ ಒಲಂಪಿಕ್ಸ್ ಮುಂದೂಡಲ್ಪಟ್ಟಿತು. ಆ ವೇಳೆ ಸಿಂಧು ಮತ್ತು ತರಬೇತುದಾರ ಟೇ ಸಾಂಗ್ ಕ್ರೀಡೆಯ ಬಗೆಗೆ ಹೆಚ್ಚು ಗಮನವಹಿಸಿದರು. ಸಿಂಧು ಹೆಚ್ಚು ಪ್ರಭಾವಶಾಲಿ ಆಟಗಾರ್ತಿ. ಅವರ ಆಟದ ಬಗ್ಗೆ ಅವರು ಶೇ.100ಕ್ಕೆ 100 ರಷ್ಟು ಸಾಮರ್ಥ್ಯವನ್ನು ನೀಡುತ್ತಾರೆ ಎಂದು ತರಬೇತುದಾರರಾದ ಸಾಂಗ್ ಹೇಳಿದ್ದಾರೆ.

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಬ್ಯಾಡ್ಮಿಂಟನ್​ನಲ್ಲಿ ಎರಡು ಒಲಂಪಿಕ್ ಪದಕಗಳನ್ನು ಗೆದ್ದಿರುವುದು ಇದೇ ಮೊದಲು. ಹಾಗಾಗಿ ಇದು ಸಿಂಧು ಅವರಿಗೆ ಮಾತ್ರವಲ್ಲಿ. ನನ್ನ ಶಿಕ್ಷಣದಲ್ಲಿಯೂ ಅತ್ಯಂತ ದೊಡ್ಡ ಕ್ಷಣ ಎಂದು ಅವರು ಹೇಳಿದರು.

ನನ್ನ ತರಬೇತುದಾರರಿಗೆ ಸಂತೋಷವಾಗಿದೆ. ನನಗೆ ಸ್ಪೂರ್ತಿ ತುಂಬು ನನ್ನನ್ನು ಗೆಲ್ಲಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಅವರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಸಿಂಧು ಹೇಳಿದ್ದಾರೆ. ಸಾಂಕ್ರಾಮಿಕ ಸಮಯದಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಸಹ ಅವರು ನನ್ನ ಜತೆಗಿದ್ದು ತರಬೇತಿ ನೀಡಿದ್ದಾರೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಆ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ ಎಂಬ ಸಮಾಧಾನವಿದೆ ಎಂದು ಪಿವಿ ಸಿಂಧು ಪದಕ ಪಡೆದ ಖುಷಿಯನ್ನು ಹಂಚಿಕೊಂಡರು.

ಇದನ್ನೂ ಓದಿ:

PV Sindhu: ಪಿವಿ ಸಿಂಧುಗೆ ಕಂಚಿನ ಪದಕ: ಹೊಸ ದಾಖಲೆ ಬರೆದ ಭಾರತೀಯ ಆಟಗಾರ್ತಿ

ಪಿವಿ ಸಿಂಧು ವಿಜಯ ಸಂಭ್ರಮಿಸಿದ ದೀಪಿಕಾ, ಸಮಂತಾ, ಸಾರಾ: ತಾರೆಗಳಿಂದ ಅಭಿನಂದನೆಗಳ ಮಹಾಪೂರ