AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 World Cup: ಮೊದಲ ಪಂದ್ಯದಲ್ಲೇ 16 ರನ್​ಗೆ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್

U19 World Cup: ಮೊದಲ ಪಂದ್ಯದಲ್ಲೇ 16 ರನ್​ಗೆ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್

ಪೃಥ್ವಿಶಂಕರ
|

Updated on:Jan 15, 2026 | 4:47 PM

Share

U19 World Cup 2026: ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಯುವ ವೇಗಿ ಹೆನಿಲ್ ಪಟೇಲ್ ಅಮೆರಿಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬುಲವಾಯೋ ಪಿಚ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಕೇವಲ 16 ರನ್‌ಗಳಿಗೆ 5 ವಿಕೆಟ್ ಪಡೆದು ಅಮೆರಿಕಾವನ್ನು 107 ರನ್‌ಗಳಿಗೆ ಕಟ್ಟಿಹಾಕಿದರು. ಅವರ ಮಾರಕ ಬೌಲಿಂಗ್ ಭಾರತಕ್ಕೆ ಬಲ ತುಂಬಿತು, ಟೂರ್ನಿಯಲ್ಲಿ ಭರ್ಜರಿ ಆರಂಭ ದೊರೆಯಿತು.

ಅಂಡರ್-19 ವಿಶ್ವಕಪ್‌ ಪಂದ್ಯಾವಳಿ ಇಂದಿನಿಂದ ಆರಂಭವಾಗಿದೆ. ಭಾರತ ಯುವ ಪಡೆ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಮೆರಿಕ ಕೇವಲ 107 ರನ್​ಗಳಿಗೆ ಆಲೌಟ್ ಆಯಿತು. ಎದುರಾಳಿ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಯುವ ವೇಗಿ ಹೆನಿಲ್ ಪಟೇಲ್ ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದರು. ಕೇವಲ 16 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು.

ಬೌಲಿಂಗ್‌ಗೆ ಅನುಕೂಲಕರವಾದ ಬುಲವಾಯೊ ಪಿಚ್‌ನಲ್ಲಿ ವೇಗಿ ಹೆನಿಲ್ ಪಟೇಲ್ ತಮ್ಮ ಮೊದಲ ಓವರ್‌ನಲ್ಲೇ ಭೀಕರ ದಾಳಿ ನಡೆಸಿದರು. ಆರಂಭಿಕ ಅಮರಿಂದರ್ ಗಿಲ್ ಅವರನ್ನು ಔಟ್ ಮಾಡಿದ ಹೆನಿಲ್ ನಂತರ ಅರ್ಜುನ್ ಮಹೇಶ್ ಅವರ ವಿಕೆಟ್ ಪಡೆದರು. ಆ ಬಳಿಕ ಯುಎಸ್ ನಾಯಕ ಉತ್ಕರ್ಷ್ ಶ್ರೀವಾಸ್ತವ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗಟ್ಟಿದರು. ತಮ್ಮ ಮೊದಲ ಸ್ಪೆಲ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಹೆನಿಲ್, 35 ನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಎರಡು ವಿಕೆಟ್‌ಗಳೊಂದಿಗೆ ಐದು ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.

Published on: Jan 15, 2026 04:47 PM