AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ

ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ

ರಮೇಶ್ ಬಿ. ಜವಳಗೇರಾ
|

Updated on: Jan 15, 2026 | 3:40 PM

Share

ಮಕರ ಸಂಕ್ರಾಂತಿ ದಿನವಾದ ಇಂದು(ಜನವರಿ 15) ಸಂಜೆ ನಗರ ಗವಿಗಂಗಾಧರೇಶ್ವರ ದೇಗುಲ ಗರ್ಭಗುಡಿಯನ್ನು ಸೂರ್ಯರಶ್ಮಿ ಪ್ರವೇಶಿಸಲಿದೆ. ಸೂರ್ಯರಶ್ಮಿಯ ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5:02 ರಿಂದ 5:05 ಮಧ್ಯದಲ್ಲಿ 2 ನಿಮಿಷ ಹಾದು ಹೋಗಲಿದೆ. ಇದರಂತೆ ದೇಗುಲದಲ್ಲಿ ಈಗಾಗಲೇ ವಿಶೇಷ ಪೂಜೆಗಳು ಆರಂಭವಾಗಿದ್ದು, ಶಿವನ ಲಿಂಗಕ್ಕೆ ಹಾಲು, ಎಳನೀರಿನ ಅಭಿಷೇಕಗಳನ್ನು ನಡೆಸಲಾಗುತ್ತದೆ.

ಬೆಂಗಳೂರು, (ಜನವರಿ 15): ಮಕರ ಸಂಕ್ರಾಂತಿ ದಿನವಾದ ಇಂದು(ಜನವರಿ 15) ಸಂಜೆ ನಗರ ಗವಿಗಂಗಾಧರೇಶ್ವರ ದೇಗುಲ ಗರ್ಭಗುಡಿಯನ್ನು ಸೂರ್ಯರಶ್ಮಿ ಪ್ರವೇಶಿಸಲಿದೆ. ಸೂರ್ಯರಶ್ಮಿಯ ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5:02 ರಿಂದ 5:05 ಮಧ್ಯದಲ್ಲಿ 2 ನಿಮಿಷ ಹಾದು ಹೋಗಲಿದೆ. ಇದರಂತೆ ದೇಗುಲದಲ್ಲಿ ಈಗಾಗಲೇ ವಿಶೇಷ ಪೂಜೆಗಳು ಆರಂಭವಾಗಿದ್ದು, ಶಿವನ ಲಿಂಗಕ್ಕೆ ಹಾಲು, ಎಳನೀರಿನ ಅಭಿಷೇಕಗಳನ್ನು ನಡೆಸಲಾಗುತ್ತದೆ. ಈ ವಿಶೇಷ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೂರ್ಯ ದಕ್ಷಿಣಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಸೂರ್ಯ ಕಿರಣವು ಶಿವ ಲಿಂಗವನ್ನು ಸ್ಪರ್ಶಿಸಲಿದ್ದು, ಈ ವಿಶೇಷ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಸೂರ್ಯನ ಕಿರಣಗಳು ನಂದಿಯ ತಲೆಯ ಮಧ್ಯಭಾಗದ ಮೂಲಕ ಹಾದು ಗುಹೆಯೊಳಗಿರುವ ಶಿವಲಿಂಗದ ತಳಭಾಗವನ್ನು ಸ್ಪರ್ಶಿಸುವ ನೇರಪ್ರಸಾರ ಇಲ್ಲಿದೆ ನೋಡಿ.