ಪ್ರಯಾಗರಾಜ್ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಮಾಘ ಮೇಳ ಮಕರ ಸಂಕ್ರಾಂತಿಯ ದಿನವಾದ ಇಂದು ಪ್ರಯಾಗರಾಜ್ನ ಸಂಗಮದಲ್ಲಿ 36 ಲಕ್ಷಕ್ಕೂ ಹೆಚ್ಚು ಜನರು ತೀರ್ಥ ಸ್ನಾನ ಮಾಡಿದರು. ಅದರ ಡ್ರೋನ್ ವಿಡಿಯೋ ಇಲ್ಲಿದೆ. ಬುಧವಾರ ಮಧ್ಯರಾತ್ರಿಯಿಂದ ತೀರ್ಥ ಸ್ನಾನ ಪ್ರಾರಂಭವಾಯಿತು. ಇಂದು ಬೆಳಿಗ್ಗೆ 10 ಗಂಟೆಯ ಹೊತ್ತಿಗೆ 36 ಲಕ್ಷಕ್ಕೂ ಹೆಚ್ಚು ಜನರು ಧಾರ್ಮಿಕ ಸ್ನಾನ ಮಾಡಿದರು ಎಂದು ಮಾಘ ಮೇಳದ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಯಾಗರಾಜ್, ಜನವರಿ 15: ಮಕರ ಸಂಕ್ರಾಂತಿಯ (Makara Sankranti) ಸಂದರ್ಭದಲ್ಲಿ ಇಂದು ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿ (Magh Mela) 36 ಲಕ್ಷಕ್ಕೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಮಧ್ಯರಾತ್ರಿಯಿಂದ ತೀರ್ಥ ಸ್ನಾನ ಪ್ರಾರಂಭವಾಯಿತು. ಇಂದು ಬೆಳಿಗ್ಗೆ 10 ಗಂಟೆಯ ಹೊತ್ತಿಗೆ 36 ಲಕ್ಷಕ್ಕೂ ಹೆಚ್ಚು ಜನರು ಧಾರ್ಮಿಕ ಸ್ನಾನ ಮಾಡಿದರು ಎಂದು ಮಾಘ ಮೇಳದ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಕರ ಸಂಕ್ರಾಂತಿಯ ಶುಭ ಅವಧಿ ದಿನವಿಡೀ ಮುಂದುವರಿದಿರುವುದರಿಂದ, ಇಂದು ಸಂಜೆಯ ವೇಳೆಗೆ ಯಾತ್ರಾರ್ಥಿಗಳ ಸಂಖ್ಯೆ 1 ಕೋಟಿ ದಾಟುವ ನಿರೀಕ್ಷೆಯಿದೆ. ಮಾಘ ಮೇಳದ ಡ್ರೋನ್ ದೃಶ್ಯಾವಳಿ ಇಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jan 15, 2026 03:30 PM
Latest Videos

