ವಿರಾಟ್ ಗೆ 31ರ ಸಂಭ್ರಮ, ಹುಟ್ಟುಹಬ್ಬ ಆಚರಿಸಲು ಪತ್ನಿ ಜೊತೆ ಭೂತಾನ್ ಗೆ ಪಯಣ

ಬ್ಯಾಟಿಂಗ್​ ಸಾಮ್ರಾಟ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇವತ್ತು ತಮ್ಮ 31ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತೀ ಬಾರಿ ಡಿಫರೆಂಟ್ ಆಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವಿರಾಟ್ ಈ ಬಾರಿ ಪತ್ನಿ ಅನುಷ್ಕಾ ಜೊತೆ ಭೂತಾನ್​ಗೆ ತೆರಳಿದ್ದಾರೆ. 2017ರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್​ನಲ್ಲಿ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ರು. ಕಳೆದ ವರ್ಷ ವಿರಾಟ್ ಕೊಹ್ಲಿ ಹರಿದ್ವಾರದಲ್ಲಿರೋ ಅನಂತ್ ಧಾಮ ಆತ್ಮಬೋದ ಆಶ್ರಮದಲ್ಲಿ, ಪರಮ ಶಿವನಿಗೆ ಪೂಜೆ ಸಲ್ಲಿಸೋ ಮೂಲಕ ತಮ್ಮ ಹುಟ್ಟು […]

ವಿರಾಟ್ ಗೆ 31ರ ಸಂಭ್ರಮ, ಹುಟ್ಟುಹಬ್ಬ ಆಚರಿಸಲು ಪತ್ನಿ ಜೊತೆ ಭೂತಾನ್ ಗೆ ಪಯಣ
sadhu srinath

|

Nov 06, 2019 | 10:52 AM

ಬ್ಯಾಟಿಂಗ್​ ಸಾಮ್ರಾಟ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇವತ್ತು ತಮ್ಮ 31ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತೀ ಬಾರಿ ಡಿಫರೆಂಟ್ ಆಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವಿರಾಟ್ ಈ ಬಾರಿ ಪತ್ನಿ ಅನುಷ್ಕಾ ಜೊತೆ ಭೂತಾನ್​ಗೆ ತೆರಳಿದ್ದಾರೆ.

2017ರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್​ನಲ್ಲಿ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ರು. ಕಳೆದ ವರ್ಷ ವಿರಾಟ್ ಕೊಹ್ಲಿ ಹರಿದ್ವಾರದಲ್ಲಿರೋ ಅನಂತ್ ಧಾಮ ಆತ್ಮಬೋದ ಆಶ್ರಮದಲ್ಲಿ, ಪರಮ ಶಿವನಿಗೆ ಪೂಜೆ ಸಲ್ಲಿಸೋ ಮೂಲಕ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ರು. ಹೀಗೆ ಪ್ರತಿ ಬಾರಿಯೂ ಡಿಫರೆಂಟ್ ಆಗಿ ಬರ್ತ್​ಡೇ ಸೆಲಬ್ರೇಷನ್ ಮಾಡೋ ವಿರಾಟ್ ಈ ವರ್ಷದ ಹುಟ್ಟುಹಬ್ಬವನ್ನ ಭೂತಾನ್​ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

ಬಾಂಗ್ಲಾ ವಿರುದ್ಧದ ಟಿಟ್ವೆಂಟಿ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ವಿರಾಟ್, ಪತ್ನಿ ಅನುಷ್ಕಾ ಶರ್ಮಾ ಜೊತೆ ಭೂತಾನ್​ನಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದಾರೆ. ಭೂತಾನ್​ನ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಕೊಡ್ತೀರೋ ಈ ಜೋಡಿ, ಅಲ್ಲಿ ತಗೆದುಕೊಂಡ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

ಇಂದಿಗೆ 31ನೇ ವಸಂತಕ್ಕೆ ಕಾಲಿಟ್ಟಿರುವ ವಿರಾಟ್ ಈಗಲೇ ದಿಗ್ಗಜ, ಕ್ರಿಕೆಟಿಗ ಅಂತಾ ಕರೆಸಿಕೊಂಡಿದ್ದಾರೆ. 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕೊಹ್ಲಿ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಆವತ್ತಿಗ ಸಚಿನ್ ತೆಂಡುಲ್ಕರ್ ದಾಖಲೆ ಬರೆಯೋದೇ ನನ್ನ ಜಾಯಮಾನ ಅಂತಾ ಘರ್ಜಿಸಿದ್ರೆ, ಇವತ್ತಿಗೆ ವಿರಾಟ್ ದಾಖಲೆ ಮುರಿಯೋದೇ ನನ್ನ ಜಾಯಮಾನ ಅಂತಾ ರನ್ ವೀರನಾಗಿ ಹೋರಹೊಮ್ಮಿದ್ದಾನೆ.

ಟೆಸ್ಟ್, ಏಕದಿನ ಮತ್ತು ಟಿಟ್ವೆಂಟಿ ಈ ಮೂರು ಫಾರ್ಮೆಟ್​ನಲ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೇರಿಸಿರುವ ವಿರಾಟ್​ಗೆ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇತ್ತ ಅಭಿಮಾನಿಗಳೇ ದೇವರು ಅನ್ನೋ ವಿರಾಟ್, ಎಲ್ಲಾ ನಿಮ್ಮ ಹಾರೈಕೆ ಪ್ರೀತಿ ಅಂತಾ ಧನ್ಯವಾದಗಳನ್ನ ಹೇಳುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada