ನಿವೃತ್ತಿಯ ಸುಳಿವು ನೀಡಿದ ಕೊಹ್ಲಿ? ಇನ್ನು ಮೂರೇ ವರ್ಷ ಕೊಹ್ಲಿ ಕ್ರಿಕೆಟ್!
ಕಿಂಗ್ ಕೊಹ್ಲಿ ಕ್ರೀಸ್ಗೆ ಬಂದ್ರೆ ಎದುರಾಳಿ ಬೌಲರ್ಗಳ ಎದೆಯಲ್ಲಿ ನಡುಕ ಶುರುವಾಗುತ್ತೆ. ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ಬರೆಯುವ ವಿರಾಟ್ ವೀರಾವೇಶದ ಆಟಕ್ಕೆ, ವಿಶ್ವಕ್ರಿಕೆಟ್ಟೇ ಫಿದಾ ಆಗಿದೆ. ರಣಕಣದಲ್ಲಿ ಬ್ಯಾಟ್ ಹಿಡಿದು ರಣವಿಕ್ರಮನಂತೆ ಧೂಳೆಬ್ಬಿಸುವ ಕೊಹ್ಲಿಗೆ ಅಗ್ರೆಸ್ಸಿವ್ ಆಟವೇ ಮಾನದಂಡ. ಪಕ್ಕಾ ಮಾಸ್ ಪ್ರದರ್ಶನ ನೀಡುವ ರನ್ಮಷೀನ್ ಕೊಹ್ಲಿ ಮೂರು ಫಾರ್ಮೆಟ್ನಲ್ಲೂ ಶೇಕಡ 50ಕ್ಕೂ ಅಧಿಕ ಸರಾಸರಿ ಹೊಂದಿರೋ ವಿಶ್ವದ ಏಕೈಕ ಬ್ಯಾಟ್ಸ್ಮನ್. ಇದೇ ಕಿಂಗ್ ಕೊಹ್ಲಿ ಈಗ ತಮ್ಮ ನಿವೃತ್ತಿ ಬಗ್ಗೆ ಬಹಿರಂಗವಾಗಿಯೇ ಸುಳಿವು […]
ಕಿಂಗ್ ಕೊಹ್ಲಿ ಕ್ರೀಸ್ಗೆ ಬಂದ್ರೆ ಎದುರಾಳಿ ಬೌಲರ್ಗಳ ಎದೆಯಲ್ಲಿ ನಡುಕ ಶುರುವಾಗುತ್ತೆ. ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ಬರೆಯುವ ವಿರಾಟ್ ವೀರಾವೇಶದ ಆಟಕ್ಕೆ, ವಿಶ್ವಕ್ರಿಕೆಟ್ಟೇ ಫಿದಾ ಆಗಿದೆ.
ರಣಕಣದಲ್ಲಿ ಬ್ಯಾಟ್ ಹಿಡಿದು ರಣವಿಕ್ರಮನಂತೆ ಧೂಳೆಬ್ಬಿಸುವ ಕೊಹ್ಲಿಗೆ ಅಗ್ರೆಸ್ಸಿವ್ ಆಟವೇ ಮಾನದಂಡ. ಪಕ್ಕಾ ಮಾಸ್ ಪ್ರದರ್ಶನ ನೀಡುವ ರನ್ಮಷೀನ್ ಕೊಹ್ಲಿ ಮೂರು ಫಾರ್ಮೆಟ್ನಲ್ಲೂ ಶೇಕಡ 50ಕ್ಕೂ ಅಧಿಕ ಸರಾಸರಿ ಹೊಂದಿರೋ ವಿಶ್ವದ ಏಕೈಕ ಬ್ಯಾಟ್ಸ್ಮನ್. ಇದೇ ಕಿಂಗ್ ಕೊಹ್ಲಿ ಈಗ ತಮ್ಮ ನಿವೃತ್ತಿ ಬಗ್ಗೆ ಬಹಿರಂಗವಾಗಿಯೇ ಸುಳಿವು ಕೊಟ್ಟಿದ್ದಾರೆ.
ಕಿಂಗ್ ಕೊಹ್ಲಿ ಆಟ ಇನ್ನು ಮೂರು ವರ್ಷ ಮಾತ್ರ! ಅಚ್ಚರಿ ಅನ್ಸಿದ್ರೂ ಇದು ಸತ್ಯ ಇದನ್ನ ಸ್ವತಃ ಕೊಹ್ಲಿಯೇ ಹೇಳಿದ್ದಾರೆ. ನಿವೃತ್ತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಕೊಹ್ಲಿ ಕಿವೀಸ್ ನೆಲದಲ್ಲಿ ಉತ್ತರಿಸಿದ್ದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ತುಂಬಾ ದೊಡ್ಡ ದೊಡ್ಡ ಪಿಕ್ಚರ್ ತೋರಿಸಲು ತಾನು ಬಯಸ್ತಿರೋದಾಗಿ ಕೊಹ್ಲಿ ಹೇಳ್ಕೊಂಡಿದ್ದಾರೆ. ಸಿನಿಮಾಗಾಗಿ ತುಂಬಾ ತಯಾರಿಯನ್ನೂ ಮಾಡ್ತಿದ್ದೇನೆ ಅಂದಿರೋ ಕೊಹ್ಲಿ, ಅವೆಲ್ಲಾ ಇನ್ನು ಹೆಚ್ಚು ಅಂದ್ರೆ, ಕೇವಲ ಮೂರು ವರ್ಷ ಮಾತ್ರ ಅಂತಲೂ ಹೇಳಿ, ಕ್ರಿಕೆಟ್ನಿಂದ ದೂರಾಗೋ ಸುಳಿವು ನೀಡಿದ್ದಾರೆ.
2 ಟಿಟ್ವೆಂಟಿ.. 1ಏಕದಿನ ವಿಶ್ವಕಪ್ ಆಡ್ತಾರಷ್ಟೇ ವಿರಾಟ್! ರನ್ಮಷೀನ್ ಕೊಹ್ಲಿ ಆಟ ಇನ್ನು ಮೂರು ವರ್ಷ ಮಾತ್ರ. ಇದನ್ನ ಸ್ವತಃ ನಾಯಕ ಕೊಹ್ಲಿಯೇ ಹೇಳಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಎರಡು ಟಿಟ್ವೆಂಟಿ ವಿಶ್ವಕಪ್ ಮತ್ತು ಒಂದು ಏಕದಿನ ವಿಶ್ವಕಪ್ ನಡೆಯಲಿದೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿಟ್ವೆಂಟಿ ವಿಶ್ವಕಪ್ ನಡೆದ್ರೆ, 2021ರಲ್ಲಿ ಭಾರತದಲ್ಲೇ ಮತ್ತೊಂದು ಟಿಟ್ವೆಂಟಿ ವಿಶ್ವಕಪ್ ನಡೆಯಲಿದೆ.
2018 ರಲ್ಲಿ ಟಿಟ್ವೆಂಟಿ ವಿಶ್ವಕಪ್ ನಡೆಯದ ಹಿನ್ನೆಲೆ, 2021ರಲ್ಲಿ ಭಾರತದಲ್ಲಿ ಟ್ವೆಂಟಿ ಟ್ವೆಂಟಿ ವಿಶ್ವಕಪ್ ನಡೆಯಲಿದೆ. ಇದಾದ ಬಳಿಕ 2023ರಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಈ ಮೂರು ವಿಶ್ವಕಪ್ನ್ನಷ್ಟೇ ಆಡ್ತೀನಿ. ಈ ಹೊತ್ತಿಗೆ ನನಗೆ 34ರಿಂದ 35 ವರ್ಷ ವಯಸ್ಸಾಗಿರಲಿದೆ. ಇನ್ನು ಎರಡ್ಮೂರು ವರ್ಷ ತಂಡಕ್ಕೆ ಬೇಕಾದ ಕೊಡಗೆಯನ್ನ ನೀಡಲು ರೆಡಿಯಾಗಿರೋ ತಾನು, ಬಳಿಕ ಅಂತಿಮ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ದಾರೆ.
ನಾಯಕತ್ವದ ಒತ್ತಡ.. ಬಿಡುವಿಲ್ಲದ ಆಟವೇ ಕೊಹ್ಲಿಗೆ ಕಗ್ಗಂಟು! ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ ಮೂರು ಫಾರ್ಮೆಟ್ಗೆ ಕ್ಯಾಪ್ಟನ್ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಮೂಲಕ ಭಾರತ ಟೆಸ್ಟ್ ತಂಡಕ್ಕೆ ನಾಯಕತ್ವ ವಹಿಸಿಕೊಂಡ ಕೊಹ್ಲಿಯನ್ನ, 2017ರಲ್ಲಿ ಬಿಸಿಸಿಐ ಏಕದಿನ ಮತ್ತು ಟಿಟ್ವೆಂಟಿ ತಂಡಕ್ಕೂ ನಾಯಕ ಅಂತ ಘೋಷಿಸಿತ್ತು.
ವೈಯಕ್ತಿಕ ಪ್ರದರ್ಶನ ನೀಡೋದ್ರ ಜೊತೆಗೆ ತಂಡದ ಯಶಸ್ಸಿನತ್ತಲೂ ಗಮನಹರಿಸೋದು ನಾಯಕನ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಇದು ಅಷ್ಟು ಸುಲಭದ ಮಾತಲ್ಲ. ಅಭ್ಯಾಸವಾಗಲೀ ಅಥವಾ ಪಂದ್ಯವಾಗಲೀ ಶೇಕಡಾ 100ರಷ್ಟು ಪ್ರಯತ್ನವಿರಬೇಕು. ಮುಖ್ಯವಾಗಿ ಕೊಹ್ಲಿ ಈ ದಿಢೀರ್ ನಿರ್ಧಾರದ ಹಿಂದೆ ಬಿಡುವಿಲ್ಲದ ಆಟವೇ ಕಾರಣ ಅಂದ್ರೆ ತಪ್ಪಾಗೋದಿಲ್ಲ. ಅಂದ್ರೆ ವರ್ಷಕ್ಕೆ 300 ದಿನಗಳು ತಾನು ಕ್ರಿಕೆಟ್ ಆಡುತ್ತೇನೆ ಅನ್ನೋ ಕೊಹ್ಲಿ, ಇದರಿಂದ ಬಸವಳಿದು ಹೋಗುತ್ತಿದ್ದೇನೆ ಎಂದಿದ್ದಾರೆ.
ಕಿವೀಸ್ ಒನ್ಡೇ ಸರಣಿ ಸೋಲಿನ ಬೆನ್ನಲ್ಲೇ ನಿವೃತ್ತಿ ಸುಳಿವು! ಕೊಹ್ಲಿ ನಿವೃತ್ತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ ನಿಜ. ಆದ್ರೆ ಇದು ಹೇಳಿರೋದು ಕಿವೀಸ್ ನೆಲದಲ್ಲಿ. ಟೆಸ್ಟ್ ಸರಣಿಗೆ ಭಾರತ ತಯಾರಾಗಿರೋ ಬಗ್ಗೆ ಮಾತನಾಡುವ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಈ ಬಾಂಬ್ ಸಿಡಿಸಿದ್ರು. ಟೀಮ್ ಇಂಡಿಯಾ ಕಳೆದ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಏಕದಿನ ಸರಣಿ ಸೋತು ವೈಟ್ವಾಷ್ ಆಗಿತ್ತು.
ಅದು ನ್ಯೂಜಿಲೆಂಡ್ ನೆಲದಲ್ಲಿ ಬರೋಬ್ಬರಿ 31 ವರ್ಷಗಳ ಬಳಿಕ ಭಾರತ ಈ ಅವಮಾನಕ್ಕೆ ತುತ್ತಾಗಿತ್ತು. ಇದು ಲಕ್ಕಿ ಕ್ಯಾಪ್ಟನ್ ಕೊಹ್ಲಿಗೆ ಭಾರೀ ಮುಜುಗರವನ್ನ ಉಂಟುಮಾಡಿತ್ತು. ಈ ಅವಮಾನದಿಂದ ಬೇಸತ್ತಿದ್ದ ಕೊಹ್ಲಿ, ಈಗ ದಿಢೀರ್ ನಿವೃತ್ತಿ ಸುಳಿವು ನೀಡಿದ್ದಾರೆ ಎನ್ನಲಾಗ್ತಿದೆ.
ಏಕದಿನ ಮತ್ತು ಟೆಸ್ಟ್ ಱಂಕಿಂಗ್ನಲ್ಲಿ ನಂಬರ್ ಒನ್ ಸ್ಪಾಟ್ನಲ್ಲಿರುವ ಕಿಂಗ್ ಕೊಹ್ಲಿಯೇ ತಾನು ಬರೀ ಮೂರು ವರ್ಷ ಮಾತ್ರ ಆಡ್ತೀನಿ ಅಂತಾ ಹೇಳಿರೋದು ಅಭಿಮಾನಿಗಳಲ್ಲಿ ಆಘಾತದ ಜೊತೆಗೆ ಅಚ್ಚರಿ ಮೂಡಿಸಿದೆ. ಅಂದ್ರೆ ಮೂರು ವರ್ಷದ ನಂತರ ವಿರಾಟ್ ಯಾವುದಾದ್ರೂ ಒಂದು ಫಾರ್ಮೆಟ್ಗೆ ವಿದಾಯ ಹೇಳೋದ್ರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಕೊಹ್ಲಿಯ ಒತ್ತಡ ಮತ್ತು ಬಿಡುವಿಲ್ಲದ ಆಟವನ್ನ ಅರ್ಥೈಸಿಕೊಳ್ಳಬೇಕಿರುವ ಬಿಸಿಸಿಐ ಇನ್ನಾದ್ರೂ ವಿರಾಟ್ಗೆ ಹೆಚ್ಚಿನ ವಿಶ್ರಾಂತಿ ನೀಡಿ ಕಣಕ್ಕಿಳಿಸಬೇಕಿದೆ.
Published On - 10:34 am, Thu, 20 February 20